ಮಟ್ಟೂರು: ಪೋಷಣ್ ಅಭಿಯಾನ
Team Udayavani, Sep 26, 2020, 6:41 PM IST
ಮುದಗಲ್ಲ: ಸಮೀಪದ ಮಟ್ಟೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಅಭಿಯಾನ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಮೇಲ್ವಿಚಾರಕಿ ಗೀತಾ ಮುದಗಲ್ಲ ಕಾರ್ಯಕ್ರಮ ಉದ್ಘಾಟಿಸಿದರು.
ಗುಡಿಹಾಳ ಉಪ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ವಿಶಾಲಕುಮಾರ ಬುಶೆಟ್ಟಿ ಹಾಗೂ ಗಂಗಮ್ಮ ಮಾತನಾಡಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಗರ್ಭಿಣಿಯರು, ಬಾಣಂತಿಯರು ಹಸಿ ತರಕಾರಿ, ಕಾಳು ಮತ್ತು ಮೊಟ್ಟೆ , ಹಾಲು, ಹಣ್ಣು ಹಂಪಲು ಸೇವಿಸಬೇಕು ಎಂದರು. ಮಟ್ಟೂರು ಗ್ರಾಪಂನ ಮೌನೇಶ, ಗುಡಿಹಾಳ, ತೆರಿಭಾವಿ, ಬುದ್ದಿನ್ನಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗರ್ಭಿಣಿಯರು ಭಾಗಿಯಾಗಿದ್ದರು.
……………………………………………………………………………………………………………………………………………………………….
ಮಾದಿಗರ ಮೇಲೆ ಹಲ್ಲೆ ಖಂಡಿಸಿ ಮನವಿ :
ಮಸ್ಕಿ: ದೇವದುರ್ಗ ತಾಲೂಕಿನ ಚಿಕ್ಕಬೂದುರು ಗ್ರಾಮದಲ್ಲಿ ಮಾದಿಗ ಯುವಕನ ಮೇಲೆ ಸವರ್ಣಿಯರು ಹಲ್ಲೆ ಮಾಡಿದ ಘಟನೆ ಖಂಡಿಸಿ, ಮಸ್ಕಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ತೆರಿಬಾವಿ, ಸ್ವಾತಂತ್ರ್ಯ ಬಂದು 70 ವರ್ಷ ಗತಿಸಿದರೂ ದಲಿತರ ಮೇಲೆ ಹಲ್ಲೆಯಂಥ ಘಟನೆಗಳುನಡೆಯುತ್ತವೆ. ದಲಿತರು ಮನುಷ್ಯರು ಎನ್ನುವುದನ್ನು ಮರೆತು ಪಶುಗಳಂತೆ ನೋಡುವ ಮನೋಭಾವ ಬದಲಾಗಬೇಕು ಎಂದರು.
ಮಾದಿಗ ಹೋರಾಟ ಸಮಿತಿ ಜಂಟಿ ಕಾರ್ಯದರ್ಶಿ ಬಸವರಾಜ ಹಂಚಿನಾಳ ಮಾತನಾಡಿ, ಬೂದೂರು ಘಟನೆಯಲ್ಲಿ ಮಾದಿಗರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಮಾದಿಗರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಮಾದಿಗರ ಮೇಲೆ ದಾಖಲಾಗಿರುವ ದೂರನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ದಾನಪ್ಪ ನಿಲೋಗಲ್, ಹುಲಗಪ್ಪ ಗುಡಿಹಾಳ, ಶಿವಕುಮಾರ ದೇವರಮನಿ, ಶರಣಪ್ಪ ಹಿರೇಮನಿ, ಶರಣಬಸವ ಹಂಚಿನಾಳ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.