ಸರಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಬೇಸರ
Team Udayavani, Nov 1, 2021, 4:31 PM IST
ಸಿಂಧನೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬರೋಬ್ಬರಿ ಹದಿನೇಳು ವೈದ್ಯರಿದ್ದರೂ ಕೂಡ ಬಡವರು ವೈದ್ಯಕೀಯ ಸೇವೆಗೆ ಪರದಾಡುವಂತಾಗಿದೆ. ಯಾವುದಕ್ಕೂ ಕಡಿಮೆ ಇಲ್ಲವೆಂಬಂತೆ ಅತ್ಯಾಧುನಿಕ ಸೌಲಭ್ಯ ಇದ್ದರೂ ಬಡ ರೋಗಿಗಳಿಗೆ ದೊರೆಯದಾಗಿದೆ.
ಐಸಿಯು ವೆಂಟಿಲೇಟರ್ ಒಳಗೊಂಡ ಸೇವೆ ಕಲ್ಪಿಸುವ ಏಕೈಕ ಆಸ್ಪತ್ರೆ ಎಂಬ ಹಿರಿಮೆ ಕೂಡ ಸರಕಾರಿ ಆಸ್ಪತ್ರೆಗಿದ್ದು, ಒಂದು ಕೋಟಿ ರೂ. ಹೆಚ್ಚಿನ ವೈದ್ಯಕೀಯ ಉಪಕರಣಗಳು ಇಲ್ಲಿ ಲಭ್ಯ ಇವೆ. ಆದರೂ ಸಮರ್ಪಕ ಸೇವೆ ದೊರೆಯುತ್ತಿಲ್ಲವೆಂಬ ಕೊರಗು ಜನರಲ್ಲಿದೆ.
ಎಲ್ಲ ವೈದ್ಯರೂ ಲಭ್ಯ
ಕಿವಿ, ಮೂಗು ಗಂಟಲು ತಜ್ಞರು, ಚರ್ಮರೋಗ, ಲೈಂಗಿಕ ತಜ್ಞರು, ಎಲುಬು ಮತ್ತು ಕೀಲು ಮೂಳೆ ತಜ್ಞರು, ದಂತ ವೈದ್ಯರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಕಣ್ಣಿನ ತಜ್ಞರು, ಶಸ್ತ್ರ ಚಿಕಿತ್ಸಕರು, ಮಧುಮೇಹ ಮತ್ತು ಹೃದಯರೋಗ ತಜ್ಞರು, ಐಸಿಯು ಘಟಕಕ್ಕೆ ಬೇಕಾದ ಎಂಬಿಬಿಎಸ್ ವೈದ್ಯರು ಸೇರಿದಂತೆ ಅಸಾಂಕ್ರಾಮಿಕ ಕಾಯಿಲೆ ತಪಾಸಣೆಗೂ ಕೂಡ ಇಲ್ಲಿ ವೈದ್ಯರಿದ್ದಾರೆ. ಈ ಎಲ್ಲ ವಿಭಾಗ ಸೇರಿ 17 ವೈದ್ಯರು ಸದ್ಯ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಇನ್ನುಳಿದಂತೆ 42 ಡಿ ಗ್ರೂಪ್ ನೌಕರರು, 18 ಕಾಯಂ ಸ್ಟಾಫ್ ನಸ್ ìಗಳು, ಗುತ್ತಿಗೆ ಆಧಾರಿತ ಎಂಟು ನರ್ಸ್‌ಗಳನ್ನು ಒಳಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ವೈದ್ಯಕೀಯ ಸಿಬ್ಬಂದಿ, ಉಪಕರಣ ಕೊರತೆ ಇಲ್ಲದಿದ್ದರೂ ಸೇವೆಗೆ ಅಭಾವ ಸೃಷ್ಟಿಯಾಗಿದೆ.
ಚಿಕಿತ್ಸೆಗೆ ಹಿಂದೇಟು
ಇನ್ನು ವೈದ್ಯರು ತಮ್ಮ ಜವಾಬ್ದಾರಿ ಅರಿತು ಚಿಕಿತ್ಸೆ ನೀಡುತ್ತಿಲ್ಲ. ಮಕ್ಕಳ ತುರ್ತು ಚಿಕಿತ್ಸಾ ಘಟಕ ಇಲ್ಲಿ ಮುನ್ನಡೆಸಬಹುದು. ಅದಕ್ಕೂ ಮನಸ್ಸು ಮಾಡಿಲ್ಲ. ಇನ್ನು ಚರ್ಮರೋಗ ತಜ್ಞರು, ಎಲುಬು ಮೂಳೆ ತಜ್ಞರು ಸೇರಿ ಇತರೆ ವೈದ್ಯರು ಹೊರರೋಗಿಗಳ ತಪಾಸಣೆಗೆ ಸೀಮಿತವಾಗಿದ್ದಾರೆ. ಇರುವ ವೈದ್ಯಕೀಯ ಉಪಕರಣ ಬಳಸಿ ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸುವ ಮನಸ್ಸು ಮಾಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಎಲ್ಲ ವೈದ್ಯರನ್ನು ಸರಕಾರ ಕೊಟ್ಟಿರುವುದರಿಂದ ಬಡವರಿಗೆ ಉಚಿತ ಚಿಕಿತ್ಸೆ ದೊರೆಯಬೇಕು. ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡುವ ಪ್ರವೃತ್ತಿಯನ್ನು ನಿಯಂತ್ರಿಸಲು ಮೇಲಾಧಿಕಾರಿಗಳು ಗಮನಹರಿಸಬೇಕು. -ಎಚ್.ಎನ್. ಬಡಿಗೇರ್, ಪ್ರಗತಿಪರ ಹೋರಾಟಗಾರ, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.