![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 14, 2022, 5:26 PM IST
ಲಿಂಗಸುಗೂರು: ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಆಧುನಿಕತೆ ಭರಾಟೆಯಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ನಶಿಸುತ್ತಿದ್ದು, ಇಂತಹ ಪುರಾತನ ಪರಂಪರೆಯುಳ್ಳ ಗ್ರಾಮೀಣ ಸೊಗಡಿನ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಸಂರಕ್ಷಣೆ ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಎಸಿ ರಾಹುಲ್ ಸಂಕನೂರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾ ಧಿಕಾರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗಡಿ, ನಾಡು, ನುಡಿಚಿಂತನೆ ಮತ್ತು ಮುದಗಲ್ ಕೋಟೆ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಸಾಹಿತ್ಯವು ಕಥೆ, ನೃತ್ಯ, ಹಾಡು ಸೇರಿದಂತೆ ವಿಶಿಷ್ಟ ಆಯಾಮಗಳಲ್ಲಿ ಕಾಣಬಹುದಾಗಿದ್ದು, ಈ ಸಾಹಿತ್ಯವು ಯಾವಾಗ, ಯಾರು ರಚಿಸಿದರು ಎನ್ನುವುದಕ್ಕಿಂತ ಬಾಯಿಂದ ಬಾಯಿಗೆ ಬಂದಿರುವ ಶುದ್ಧ ಸಾಹಿತ್ಯವಾಗಿದೆ. ಇಂತಹ ವಿಶಿಷ್ಟ ಜಾನಪದ ಸಾಹಿತ್ಯ ಕಳೆದುಕೊಂಡರೆ ನಮ್ಮತನ ಕಳೆದುಕೊಂಡಂತಾಗಲಿದ್ದು, ಸನಾತನ ಭಾರತೀಯ ಪರಂಪರೆ ಜಾನಪದ ಸಾಹಿತ್ಯದ ಮರು ಆವಿಷ್ಕಾರವಾಗಬೇಕಿದೆ. ನಗರ ಪ್ರದೇಶ, ಶಾಲಾ-ಕಾಲೇಜುಗಳಲ್ಲಿ ಜಾನಪದ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಪರಿಷತ್ ಜಿಲ್ಲಾಧ್ಯಕ್ಷೆ ಡಾ| ಅರುಣಾ ಹಿರೇಮಠ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಬೆಳೆದಂತೆಲ್ಲ ನಗರ ಪ್ರದೇಶಗಳಲ್ಲಿ ಜಾನಪದ ಸಾಹಿತ್ಯ ಕ್ಷೀಣಿಸುತ್ತಿದ್ದು, ಜಾನಪದ ಪರಿಷತ್ ವತಿಯಿಂದ ಜಾನಪದ ಸಾಹಿತ್ಯ ಉಳಿವಿಗಾಗಿ ಸಮ್ಮೇಳನ ಮತ್ತು ಕಲೆ, ಸಾಹಿತ್ಯ ಸಂಕಿರಣ ಏರ್ಪಡಿಸುತ್ತ ಜಾನಪದ ಸಾಹಿತ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಿರಂತರ ನಡೆಸಲಾಗುವುದು ಎಂದರು.
ಈ ವೇಳೆ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶರಣಪ್ಪ ಆನೆಹೊಸೂರು, ಸಾಹಿತಿ ಗಿರಿರಾಜ ಹೊಸಮನಿ, ಡಾ| ಅಶೋಕ ಪಾಟೀಲ್, ಲಕ್ಷ್ಮೀದೇವಿ ನಡುವಿನಮನಿ, ಶಿವಮ್ಮ ಪಟ್ಟದಕಲ್, ಗುರುರಾಜ ಗೌಡೂರು, ಮೌನೇಶ ಹಿರೇಹಣಗಿ, ಡಾ| ಮಹಾಂತಗೌಡ ಪಾಟೀಲ್, ಕೆ. ಖಾದರಪಾಶಾ, ಶಿವಾನಂದ ನರಹಟ್ಟಿ, ಡಾ| ಬಸವರಾಜ ನಾಯಕ, ವಿಜಯಲಕ್ಷ್ಮೀ, ಬಸವರಾಜ, ನಿರ್ಮಲಾ ಹಿರೇಮಠ, ಸುಮಂಗಲಾ ಪತ್ತಾರ ಸೇರಿದಂತೆ ಇತರರಿದ್ದರು.
You seem to have an Ad Blocker on.
To continue reading, please turn it off or whitelist Udayavani.