ಮನುವಾದಿಗಳಿಂದ ದೇಶ ರಕ್ಷಿಸಿ
Team Udayavani, Feb 5, 2018, 4:17 PM IST
ಮಸ್ಕಿ: ದೇಶದಲ್ಲಿ ಕೋಮುವಾದಿ ಶಕ್ತಿಗಳಿಂದಾಗಿ ಇಂದು ದಲಿತರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿಯವಂತಾಗಿದೆ. ಇದುವರೆಗೆ ಆಳಿದ ಪಕ್ಷಗಳು ಸಮಾನತೆ ನೀಡುವಲ್ಲಿ ನಿರ್ಲಕ್ಷ್ಯವಹಿಸಿದ್ದು ದಲಿತರು. ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಎಲ್ಲರೂ ಒಂದುಗೂಡಿದಾಗ ಮಾತ್ರ ದೇಶವನ್ನು ಮನುವಾದಿಗಳಿಂದ ರಕ್ಷಿಸಲು ಸಾಧ್ಯವಿದೆ ಎಂದು ಉಪನ್ಯಾಸಕ ನಾರಾಯಣ ಬೆಳಗುರ್ಕಿ ಅಭಿಪ್ರಾಯಪಟ್ಟರು.
ದಲಿತ ಸಂರಕ್ಷ ಸಮಿತಿಯಿಂದ ಪಟ್ಟಣದ ಕೇಂದ್ರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಕಂಡ ಕನಸು ಮತ್ತು ಪ್ರಸ್ತುತ ರಾಜಕೀಯದಲ್ಲಿ ದಲಿತರ ಪಾತ್ರ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಮಾರು ವರ್ಷಗಳ ಹಿಂದೆ ದೇಶಕ್ಕೆ ವಲಸೆ ಬಂದ ಆರ್ಯರು ತಮ್ಮ ಪ್ರಭುತ್ವ ನಡೆಸುತ್ತಿದ್ದಾರೆ. ಕೇವಲ ಶೇ.15ರಷ್ಟು ಇರುವ
ಸಮುದಾಯ ಇಂದು ಶೇ.85ರಷ್ಟು ಇರುವ ಜನರನ್ನು ಆಳುತ್ತಿರುವುದು ವಿಷಾದದ ಸಂಗತಿ. ಶತಮಾನಗಳಿಂದ ದೇಶಕ್ಕೆ ವಲಸೆ ಬಂದ ಆರ್ಯರು ವರ್ಣ ವ್ಯವಸ್ಥೆಯನ್ನು ಸೃಷ್ಟಿಸಿ ಉತ್ತರ ಭಾರತದಲ್ಲಿ ನೂರಾರು ವರ್ಷಗಳ ಕಾಲ ಭಾರತದ ಮೂಲ ನಿವಾಸಿಗಳ ಮೇಲೆ ಕೊಲೆ, ಅತ್ಯಾಚಾರ, ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಸಮಾನತೆ ಆಗಬೇಕಾದರೆ ಈ ದೇಶದ ಭೂಮಿಯನ್ನು ಸಮಾನವಾಗಿ ಹಂಚುವ ಮೂಲಕ ಭೂಮಿಯನ್ನು ರಾಷ್ಟ್ರೀಕರಣ ಮಾಡಬೇಕು. ಭೂಮಿ, ಬಂಡವಾಳ, ಸಂಪನ್ಮೂಲ ಹಾಗೂ ಶ್ರಮವನ್ನು ಸಮಾನವಾಗಿ ಹಂಚಿದಾಗ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದರು.
ಜಾತಿ ನಿರ್ಮೂಲನಾ ಸಮಿತಿ ರಾಜ್ಯಾಧ್ಯಕ್ಷ ಎಚ್.ಎನ್. ಬಡಿಗೇರ ಮಾತನಾಡಿ, ಎಲ್ಲರೂ ಮಾನವೀಯತೆ ಅಳವಡಿಸಿ
ಕೊಳ್ಳಬೇಕು. ಎಲ್ಲ ಜಾತಿಗಳಲ್ಲಿ ಬಡವರಿದ್ದಾರೆ. ಜಾತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ ಕೆಲ ಪಕ್ಷಗಳು ಜಾತಿಗಳ ಮಧ್ಯ ವೈಷಮ್ಯ ಹುಟ್ಟು ಹಾಕುತ್ತಿವೆ ಎಂದರು.
ಗಚ್ಚಿನ ಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ಬೇಡ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾದ್ಯ ಎಂದರು.
ದಲಿತ ಮುಖಂಡ ದೊಡ್ಡಪ್ಪ ಮುರಾರಿ ಮಾತನಾಡಿ ಮನುವಾದಿ ಸಂಸ್ಕೃತಿಯ ಜನ ದೇಶದಲ್ಲಿ ಸಮಾನತೆ ಬರುವುದನ್ನು ಸಹಿಸುತ್ತಿಲ್ಲ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರು
ಬಡವರಾಗಿಯೇ ಉಳಿಯುತ್ತಿದ್ದಾರೆ. ಈ ವ್ಯವಸ್ಥೆ ಕೊನೆಗೊಳ್ಳಬೇಕಾಗಿದೆ ಎಂದರು.
ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿದರು. ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವೈ.ಮರಿಸ್ವಾಮಿ, ಡಾ|
ಅಹ್ಮದಸಾಬ್, ಪಾಮಯ್ಯ ಮುರಾರಿ, ಮಲ್ಲಯ್ಯ ಮುರಾರಿ, ಬಾಲಸ್ವಾಮಿ ಜಿನ್ನಾಪುರ, ಮಲ್ಲಪ್ಪ ನಾಗರಬೆಂಚಿ, ದುರುಗಪ್ಪ ವಿಭೂತಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.