ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Mar 4, 2022, 1:06 PM IST
ದೇವದುರ್ಗ: ಕುಡಿಯುವ ನೀರು, ಚರಂಡಿ, ವಸತಿ ನಿವೇಶನ, ಚರಂಡಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕೆಪಿಆರ್‌ಎಸ್ ಸಂಘಟನೆ ಪದಾಧಿಕಾರಿಗಳು ಗುರುವಾರ ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ತಾಪಂ ಇಒಗೆ ಮನವಿ ಸಲ್ಲಿಸಿದರು.
ಈ ವೇಳೆ ನರಸಣ್ಣ ನಾಯಕ ಮಾತನಾಡಿ, ಬೇಸಿಗೆ ಆರಂಭವಾಗುತ್ತಿದ್ದಂತೆ ಬಹುತೇಕ ತಾಂಡಾ, ದೊಡ್ಡಿಗಳ ಕುಡಿವ ನೀರಿನ ಅಭಾವ ಈಗಲೇ ಶುರುವಾಗಿದೆ. ಅಂತಹ ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ ಅಧಿಕಾರಿಗಳು ಕೈ ಚಲ್ಲಿದ್ದಾರೆ ಎಂದು ದೂರಿದರು.
ಅಮರಾಪುರು, ಚಿಂಚೋಡಿ, ಪಲಕನಮರಡಿ, ಮುಂಡರಗಿ, ಜಾಲಹಳ್ಳಿ ಸೇರಿದಂತೆ ಇತರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಶುದ್ಧ ಕುಡಿವ ನೀರಿನ ಘಟಕಗಳು ಇದ್ದು, ಇಲ್ಲದಂತಾಗಿದೆ. ಹಲವಡೆ ನೀರು ಬಾರದೇ ಇದ್ದಿದ್ದರಿಂದ ನಿರುಪಯುಕ್ತವಾಗಿವೆ ಎಂದು ದೂರಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರನಗೌಡ, ಕಾರ್ಯದರ್ಶಿ ಹನುಮಂತ ಮಂಡಲಗುಡ್ಡ, ಉಪಾಧ್ಯಕ್ಷ ಶಬ್ಬೀರ ಜಾಲಹಳ್ಳಿ, ಗಿರಿಯಪ್ಪ ಪೂಜಾರಿ, ಗುರು ನಾಯಕ, ಮುಕ್ತಪಾಷ್, ಮಹಾಲಿಂಗ ದೊಡ್ಡಮನಿ, ರಾಜು ನಾಯಕ, ಬಸವರಾಜ ವಂದಲಿ, ರಂಗನಾಥ ಬುಂಕಲದೊಡ್ಡಿ, ಹನುಮಂತ ಮಡಿವಾಳ, ದುರುಗಪ್ಪ ವರಠಿ, ಹೈದರ್ ಅಲಿ, ಸುನೀಲ್ ಕುಮಾರ, ಭಾಷಸಾಬ ಸೇರಿ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.