ಜಾಲಹಳ್ಳಿ ತಾಲೂಕಿಗಾಗಿ 30ರಂದು ಪ್ರತಿಭಟನೆ
Team Udayavani, Sep 25, 2020, 6:49 PM IST
ಜಾಲಹಳ್ಳಿ: ಜಾಲಹಳ್ಳಿ ತಾಲೂಕು ರಚನೆಗೆ ಒತ್ತಾಯಿಸಿ ಸೆ.30ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಾಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ ಹೇಳಿದರು.
ಗುರುವಾರ ಪಟ್ಟಣದ ಹೊರವಲಯದ ಉತ್ತಿನ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಮಾತನಾಡಿದ ಅವರು, ಜಾಲಹಳ್ಳಿ ಪಟ್ಟಣ ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದ್ದರು ತಾಲೂಕು ರಚನೆಗೆ ಕಡೆಗಣಿಸಲಾಗಿದೆ. ಎಲ್ಲರೂ ಪಕ್ಷ ಭೇದ ಮರೆತು ಒಗ್ಗಟ್ಟಾಗಿ ಹೋರಾಡೋಣ. ಎಲ್ಲ ಸಂಘಟನೆ ಮುಖಂಡರು, ಜನಪ್ರತಿನಿ ಧಿಗಳು, ಪ್ರಗತಿಪರ ವಿಚಾರವಂತರು, ರೈತರು ವಿದ್ಯಾರ್ಥಿಗಳು ಸಾರ್ವಜನಿಕರು ಹೋರಾಟಕ್ಕೆ ಕೈ ಜೋಡಿಸಬೇಕೆಂದು ವಿನಂತಿಸಿದರು.
ಹೋರಾಟ ಸಮಿತಿ ರಚನೆ: ಇದೇ ವೇಳೆ ತಾಲೂಕು ರಚನೆಗಾಗಿ ಹೋರಾಟ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಬಸವರಾಜ ಎಚ್.ಪಿ., ಸಿದ್ದನಗೌಡ ಮೂಡಲಗುಂಡ, ಅಧ್ಯಕ್ಷರನ್ನಾಗಿ ಕೆರಿಲಿಂಗಪ್ಪ ನಾಡಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಲಿಂಗಪ್ಪ, ಉಪಾಧ್ಯಕ್ಷರಾಗಿ ಲಕ್ಕಪ್ಪ ಚಿಂಚೋಡಿ, ವಾಸುದೇವ ಕರಡಿಗುಡ್ಡ, ಭೀಮರಾಯಗೌಡ ನವಿಲಗುಡ್ಡ, ಅಮರೇಗೌಡ ಪಾಟೀಲ ಕಮ್ಮಲದಿನ್ನಿ, ಮೌನೇಶ ಗಾಣದಾಳ, ಸಂಜೀವಪ್ಪ ಹೊಸೂರು ಸಿದ್ದಾಪುರು, ಮಲ್ಲೇಶಪ್ಪ ಗಲಗ, ಮಲ್ಲನಗೌಡ ಫಲಕನ ಮರಡಿ, ಕಾರ್ಯದರ್ಶಿಗಳಾಗಿ ಆದನಗೌಡ ಬುಂಕಲದೊಡ್ಡಿ, ತಿಮ್ಮಣ್ಣ ನಾಯಕ ದಿವಾಣ, ಅಯ್ಯಪ್ಪ ಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಮೇಲಪ್ಪ ಭಾವಿಮನಿ, ಹುಸೇನಪ್ಪ ಚಲುವಾದಿ, ವೆಂಕೋಬ ಯರಕಮಟ್ಟಿ, ಖಜಾಂಚಿಗಳಾಗಿ ಭೀಮಣ್ಣ ಗುಮೇದಾರ, ರಂಗಣ್ಣ ಕೋಲ್ಕಾರ ಕಾನೂನು ಸಲಹೆಗಾರರನ್ನಾಗಿ ರಾಜ ವಾಸುದೇವ ನಾಯಕ, ರಂಗಪ್ಪ ಹೆದ್ದಾರಿ, ರವಿಕುಮಾರಗೌಡ ಚಿಂಚೋಡಿ, ವಸಂತಕುಮಾರ ಸೋಮನಮರಡಿ, ನಿರಂಜನ ಕುರುಕುಂದಿ ಮುದುಗೋಟ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.