ಕಾಮಗಾರಿ ವಾಸ್ತವಾಂಶ ಮಾಹಿತಿ ಕೊಡಿ
Team Udayavani, Dec 7, 2018, 5:14 PM IST
ರಾಯಚೂರು: ಎಚ್‌ಕೆಆರ್‌ಡಿಬಿಗೆ ಸಂಬಂಧಿಸಿದ ಕಾಮಗಾರಿಗಳ ಮಾಹಿತಿಯನ್ನು ಕಂಪ್ಯೂಟರ್‌ಗಳಲ್ಲಿ ದಾಖಲಿಸುವಾಗ ತಪ್ಪಾಗದಂತೆ ಎಚ್ಚರಿಕೆ ವಹಿಸಿ ಎಂದು ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಎಚ್‌ಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಆನ್‌ಲೈನ್‌ನಲ್ಲಿ ದಾಖಲಿಸುವಾಗ ದೋಷಪೂರಿತ ಮಾಹಿತಿ ನೀಡುತ್ತಿದ್ದೀರಿ. ಅದೇ ಮಾಹಿತಿಯನ್ನು ನಮಗೆ ಕಳುಹಿಸುತ್ತಿದ್ದೀರಿ. ಅದಕ್ಕೂ ಮುಂಚೆ ಕಾಮಗಾರಿಗಳ ಸ್ಥಿತಿಗತಿ ಪರಿಶೀಲಿಸಿ ವಾಸ್ತವಾಂಶದ ವರದಿ ನೀಡುವಂತೆ ಸೂಚಿಸಿದರು.
ನೀವು ನೀಡಿದ ಮಾಹಿತಿ ಅಂತಿಮವಾಗಿರಬೇಕು. ಒಮ್ಮೆ ಅಪ್ ಲೋಡ್ ಮಾಡಿದರೆ ಪದೇ ಪದೇ ಬದಲಿಸುವಂತಿರಬಾರದು ಎಂದ ಅವರು, ಮೈಕ್ರೊ ಯೋಜನೆಯ ಕಾಮಗಾರಿಗಳು ಅದರಲ್ಲೂ ವಿಶೇಷವಾಗಿ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಜಾಸ್ತಿ ಒತ್ತು ನೀಡಬೇಕು ಎಂದರು.
ಎಚ್‌ಕೆಆರ್‌ಡಿಬಿ ಕಾಮಗಾರಿಗಳಿಗೆ ಖರ್ಚು ಮಾಡಿದ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಿ. ಕೆಲ ಕಾಮಗಾರಿ ಮುಗಿದರೂ ಅವು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ. ಯಾವುದೇ ಕಾಮಗಾರಿ ಶುರುವಾದರೆ ಯಾವುದೇ ಕಾರಣಕ್ಕೂ ನಿಲ್ಲಬಾರದು.
ಏನಾದರೂ ಅಡೆತಡೆಗಳಿದ್ದರೆ ಜಿಲ್ಲಾಧಿಕಾರಿ ಇಲ್ಲವೇ ನಮ್ಮ ಗಮನಕ್ಕೆ ತರಬೇಕು. ಸಮಸ್ಯೆ ಎಲ್ಲ ಕಡೆ ಇರುತ್ತವೆ. ಅವುಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಂಡು ಕೆಲಸ ಮಾಡುವುದನ್ನು ಕಲಿಯಿರಿ ಎಂದು ಸಲಹೆ ನೀಡಿದರು.
ಅಗತ್ಯ ಇರುವ ಶಾಲಾ ಕಾಲೇಜುಗಳಲ್ಲಿ ಮಾತ್ರ ಶೌಚಗೃಹಗಳನ್ನು ನಿರ್ಮಿಸಿ. ಈಗಾಗಲೇ ಕಟ್ಟಡಗಳಿದ್ದರೆ ಮತ್ತೂಂದು ಯೋಜನೆ ರೂಪಿಸಿ ಅನುದಾನ ಪೋಲು ಮಾಡಬಾರದು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ನಲಿನ್ ಅತುಲ್, ವಿಭಾಗೀಯ ಆಯುಕ್ತ ಶಿಲ್ಪಾ ಶರ್ಮಾ, ಪ್ರೊಬೇಷರಿ ಐಎಎಸ್ ಅಧಿಕಾರಿ ನವಿನ್ ಭಟ್, ಎಡಿಸಿ ಗೋವಿಂದರೆಡ್ಡಿ, ನಗರಸಭೆ ಪೌರಾಯುಕ್ತ ರಮೇಶ ನಾಯಕ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.