ಮಂತ್ರಾಲಯದಲ್ಲಿ ಪುಷ್ಕರ ಪುಣ್ಯಸ್ನಾನಕ್ಕೆ ವೈಭವದ ಚಾಲನೆ
Team Udayavani, Nov 20, 2020, 11:48 AM IST
ರಾಯಚೂರು: ತುಂಗಭದ್ರಾ ನದಿಯಲ್ಲಿ ಇಂದಿನಿಂದ ಪವಿತ್ರ ಪುಷ್ಕರ ಪುಣ್ಯಸ್ನಾನ ನಡೆಯಲಿದ್ದು, ಮಂತ್ರಾಲಯದಲ್ಲಿ ವೈಭವದಿಂದ ಚಾಲನೆ ನೀಡಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.
ಶ್ರೀಮಠದಿಂದ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ನದಿ ತೀರದವರೆಗೂ ಮೆರವಣಿಗೆ ನೆರವೇರಿಸಲಾಯಿತು. ಚೆಂಡೆ ಸೇರಿದಂತೆ ವಿವಿಧ ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ನದಿಯಲ್ಲಿ ಭಕ್ತರೊಂದಿಗೆ ದಂಡೋದಕ ಸ್ನಾನಗೈದ ಶ್ರೀಗಳು ಬಳಿಕ ತುಂಗಾರತಿ ನೆರವೇರಿಸಿದರು. ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ತೀರ್ಥರಾಜ ಪುಷ್ಕರ 12 ದಿನಗಳ ನದಿಯಲ್ಲಿ ನೆಲೆಸಿರುವ ಕಾರಣಕ್ಕೆ ಸ್ನಾನ ಮಾಡುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಭಕ್ತರು ವಿಶೇಷ ಸ್ನಾನಗೈದು ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು. ಕೋವಿಡ್ 19 ನಿಯಮ ಪಾಲಿಸುವುದರ ಜತೆಗೆ ರಕ್ಷಣಾ ಸಿಬ್ಬಂದಿ ಸೂಚನೆ ಮೀರದಂತೆ ನಡೆದುಕೊಳ್ಳಲು ಸಲಹೆ ನೀಡಿದರು.
13 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸ್ನಾನಘಟ್ಟ ನಿರ್ಮಿಸಲು ಉದ್ದೇಶಿಸಿದ್ದು ಶೀಘ್ರದಲ್ಲೆ ಆರಂಭಿಸಲಾಗುವುದು. ಇನ್ಫೋಸಿಸ್ ಸುಧಾಮೂರ್ತಿ ಸಹಕಾರದೊಂದಿಗೆ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಇಷ್ಟೊತ್ತಿಗಾಗಲೇ ಕೆಲಸ ಆರಂಭವಾಗಬೇಕಿತ್ತು. ಕೋವಿಡ್ 19 ಕಾರಣಕ್ಕೆ ವಿಳಂಬವಾಗಿದೆ ಎಂದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.