ರಾಯಚೂರು ವಿಮಾನ ನಿಲ್ದಾಣ ಸುಗಮ


Team Udayavani, Dec 1, 2019, 1:32 PM IST

rc-tdy-2

ರಾಯಚೂರು: ಸಮೀಪದ ಯರಮರಸ್‌ ಬಳಿ ವಿಮಾನ ನಿಲ್ದಾಣಕ್ಕೆ ವೈಟಿಪಿಎಸ್‌ ಚಿಮಣಿ ಅಡ್ಡಿಯಾಗಿದ್ದು, ಮಾರ್ಗಬದಲಿಸಿದರೆ ನಿಲ್ದಾಣಕ್ಕೆ ಇದು ಸೂಕ್ತ ಸ್ಥಳ ಎಂದು ಕರ್ನಾಟಕರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ವೈಮಾನಿಕ ವಿಭಾಗದ ಅಧಿಕಾರಿ ಕ್ಯಾ.ಶಮಂತ್‌ ತಿಳಿಸಿದ್ದಾರೆ.

ಸಮೀಪದ ಯರಮರಸ್‌ ಬಳಿ ಉದ್ದೇಶಿತ ವಿಮಾನನಿಲ್ದಾಣ ಸ್ಥಳವನ್ನು ಶನಿವಾರ ಪರಿಶೀಲಿಸಿದ ಬಳಿಕ ನಿಲ್ದಾಣಸ್ಥಳಾಂತರಕ್ಕೆ ನಿಗದಿ ಮಾಡಿದ ಸಿಂಗನೋಡಿಗೂಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ವರದಿ ಪಡೆದರು. ಯರಮರಸ್‌ ವಿಐಪಿ ಸರ್ಕ್ನೂಟ್‌ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕ್ಯಾ. ಶಮಂತ್‌, ಉದ್ದೇಶಿತನಿಲ್ದಾಣ ಸ್ಥಳ ಕುರಿತು ಮಾಹಿತಿ ಪಡೆದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಮೂಲನಕ್ಷೆ ವೀಕ್ಷಿಸಿದರು. ನಕ್ಷೆ ಪ್ರಕಾರ ನಿಲ್ದಾಣ ನಿರ್ಮಿಸಿದರೆ ವೈಟಿಪಿಎಸ್‌ ಚಿಮಣಿ ಅಡ್ಡಿಯಾಗುವ ಸಾಧ್ಯತೆ ಇದೆ. ಆದರೆ, ಇನ್ನೂ ಸಾಕಷ್ಟು ಸ್ಥಳಾವಕಾಶವಿದ್ದು, ಮಾರ್ಗ ಬದಲಾವಣೆಗೆ ಅವಕಾಶವಿದೆ ಎಂದರು.

ಖಾಸಗಿ ನಿಲ್ದಾಣವಾಗಿದ್ದರೆ ಅನಾಯಾಸವಾಗಿ ನಿರ್ಮಿಸಬಹುದು. ಆದರೆ, ಇದು ನಾಗರಿಕಸೇವೆಯ ಉದ್ದೇಶಕ್ಕೆ ನಿರ್ಮಿಸುತ್ತಿರುವ ಕಾರಣ ಎಲ್ಲಆಯಾಮಗಳಿಂದಲೂ ಪರಿಶೀಲಿಸಬೇಕಿದೆ. ವೈಟಿಪಿಎಸ್‌ ಚಿಮಣಿ ಕಾರಣಕ್ಕೆ ನಿಲ್ದಾಣವನ್ನೇ ಸ್ಥಳಾಂತರಿಸುವಅನಿವಾರ್ಯತೆ ಕಂಡು ಬರುತ್ತಿಲ್ಲ.ಕೆಲವೊಂದು ಬದಲಾವಣೆ ಮಾಡಿಕೊಂಡಲ್ಲಿ ನಿಲ್ದಾಣ ನಿರ್ಮಿಸಲು ಈಸ್ಥಳ ಪ್ರಶಸ್ತವಾಗಿದೆ ಎಂದರು.

ನೀಲನಕ್ಷೆ ಪ್ರಕಾರ ಉತ್ತರ ದಕ್ಷಿಣಾಭಿಮುಖವಾಗಿ ನಿಲ್ದಾಣ ನಿರ್ಮಿಸುವ ಯೋಜನೆಯಿದೆ. ಹಾಗೆ ನಿರ್ಮಿಸಲು ಚಿಮಣಿ ಅಡ್ಡಿಯಾಗುತ್ತಿದೆ. ಅದರ ಬದಲಿಗೆ ಪೂರ್ವಪಶ್ಚಿಮಾಭಿಮುಖವಾಗಿ ನಿಲ್ದಾಣ ನಿರ್ಮಿಸಲು ಅವಕಾಶವಿದೆ ಎಂದರು. ಸ್ಥಳದಲ್ಲಿದ್ದ ಲೋಕೋಪಯೋಗಿ ಎಂಜಿನಿಯರ್‌ ಪ್ರಕಾಶ, ನಿಲ್ದಾಣಕ್ಕಾಗಿ ಭೂ ಸ್ವಾಧೀನಮಾಡಿಕೊಂಡಾಗ ಇಲ್ಲಿ ಯಾವುದೇ ಅಡಚಣೆಗಳಿರಲಿಲ್ಲ. ಹಂತ ಹಂತವಾಗಿಕೈಗಾರಿಕೆಗಳು ಹುಟ್ಟಿಕೊಂಡಿವೆ. ವೈಟಿಪಿಎಸ್‌ ಕೂಡಈಚೆಗೆ ನಿರ್ಮಾಣವಾಗಿದ್ದು, ಅಡ್ಡಿಯಾಗುತ್ತಿದೆ ಎಂದು ವಿವರಿಸಿದರು.

ಕ್ಯಾ.ಶಮಂತ್‌ ಪ್ರತಿಕ್ರಿಯಿಸಿ, ವೈಟಿಪಿಎಸ್‌ ಚಿಮಣಿ ಅಡ್ಡಿಯಾಗದಂತೆ ಮಾರ್ಗ ಬದಲಾಯಿಸಿದರೆ ಮತ್ತೂಂದು ಬದಿ ವಿದ್ಯುತ್‌ ಕಂಬಗಳು ಅಡ್ಡಿಯಾಗುವಸಾಧ್ಯತೆಗಳಿವೆ. ಕನಿಷ್ಟ 2.2 ಕಿಮೀವರೆಗೂರನ್‌ವೇ ಬೇಕಾಗುತ್ತದೆ. ಅದಕ್ಕೆ ಯಾವುದೇ ಅಡಚಣೆಗಳಿರಬಾರದು ಎಂದರು.

ಕೆಪಿಟಿಸಿಎಲ್‌ ಅಧಿಕಾರಿ ಪ್ರತಿಕ್ರಿಯಿಸಿ, 110, 210 ಕೆವಿ ವಿದ್ಯುತ್‌ ಕಂಬಗಳು ಹಾದು ಹೋಗಿವೆ. ಎಷ್ಟು ಕಂಬಗಳನ್ನು ಸ್ಥಳಾಂತರಿಸಬೇಕು ಎಂಬುದನ್ನು ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಒಂದೇ ಕಂಬ ಬದಲಿಸುವುದು ಕಷ್ಟ. ಕನಿಷ್ಟ ನಾಲ್ಕೈದು ಕಂಬಗಳಾದರೂಸ್ಥಳಾಂತರ ಮಾಡಬೇಕಾಗುತ್ತದೆ ಎಂದರು. ಕ್ಯಾ.ಶಮಂತ್‌ ಪ್ರತಿಕ್ರಿಯಿಸಿ, ಈಗಲೇ ಹೇಳುವುದು ಕಷ್ಟ.

ನಮ್ಮ ತಾಂತ್ರಿಕ ತಂಡ ಬಂದು ಪರಿಶೀಲನೆ ನಡೆಸಲಿದೆ. ಆಗ ಮಾರ್ಗ ಬದಲಾವಣೆ ಕಂಬಗಳ ಸ್ಥಳಾಂತರ ಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಬಹುದು. ಅದರ ಅಂದಾಜು ಮೊತ್ತ ಎಷ್ಟಾಗಬಹುದು ಎಂಬುದು ಕೂಡ ಆ ಮೇಲೆಯೇ ತಿಳಿಯಲಿದೆ ಎಂದರು.

ಸ್ಥಳದಲ್ಲಿದ್ದ ಸರ್ವೇ ಅಧಿಕಾರಿ ಅನಿಲಕುಮಾರಪ್ರತಿಕ್ರಿಯಿಸಿ, ಈಗಾಗಲೇ ಸ್ವಾ ಧೀನಪಡಿಸಿಕೊಂಡ ಎಲ್ಲ ಸ್ಥಳದ ಸರ್ವೆ ಮಾಡಿದ್ದು, ಗಡಿ ಗುರುತಿಸಲಾಗಿದೆ ಎಂದರು. ಎಡಿಸಿ ದುರುಗೇಶ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಶೀಲ್ದಾರ್‌ ಡಾ| ಹಂಪಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

11-dolly

Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.