ಕೊರೊನಾ ಭೀತಿ ಮಾಧ್ಯಮಗಳ ಸೃಷ್ಟಿ
ಮೂಳೆ ತಜ್ಞ ಡಾ| ಸಿ. ಅನಿರುದ್ಧ ಕುಲಕರ್ಣಿ ಹೇಳಿಕೆ
Team Udayavani, Mar 11, 2020, 6:13 PM IST
ರಾಯಚೂರು: ಕೊರೊನಾ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅನಗತ್ಯ ಭಯ ಸೃಷ್ಟಿಸಲಾಗುತ್ತಿದೆ. ಇದು ಅಂಥ ಮಾರಕ ಕಾಯಿಲೆಯಲ್ಲ. ಈ ಬಗ್ಗೆ ಜನ ಆತಂಕಪಡದೆ ಕೆಲ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿದರೆ ಸಾಕು ಎಂದು ಮೂಳೆ ತಜ್ಞ ಡಾ| ಸಿ.ಅನಿರುದ್ಧ ಕುಲಕರ್ಣಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕೊರೊನಾ ವೈರಸ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. 760 ಕೋಟಿಗೂ ಅಧಿಕ ಜನಸಂಖ್ಯೆ ಇರುವ ವಿಶ್ವದಲ್ಲಿ ಈವರೆಗೆ ಕೊರೊನಾ ಸೋಂಕು ಪತ್ತೆಯಾಗಿರುವುದು 1.1 ಲಕ್ಷ ಜನರಲ್ಲಿ ಮಾತ್ರ. ಅದರಲ್ಲಿ ತೀವ್ರ ಸೋಂಕಿನ ಕಾರಣಕ್ಕೆ 3,816 ಜನ ಮೃತಪಟ್ಟಿದ್ದಾರೆ. ಈ ಹಿಂದೆ ಪ್ಲೇಗ್, ಕಾಲರಾ, ಸಾರ್ಸ್ ಹಾಗೂ ಡೆಂಘೀಯಂಥ ಸಾಂಕ್ರಾಮಿಕ ರೋಗಗಳು ಬಂದಾಗ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಅವುಗಳಿಗೆ ಹೋಲಿಸಿದರೆ ಕೊರೊನಾ ಸೃಷ್ಟಿಸಿದ ಅಪಾಯ ತುಂಬಾ ಕಡಿಮೆ.
ಒಣ ಕೆಮ್ಮು, ಮೂಗು ಸೋರುವಿಕೆ, ಜ್ವರ, ಉಸಿರಾಟದ ತೊಂದರೆ ಹಾಗೂ ಗಂಟಲು ನೋವು ಕೊರೊನಾದ ಪ್ರಮುಖ ಲಕ್ಷಣಗಳು. ಸೋಂಕು ತಗುಲಿದ 14-18 ದಿನಗಳ ನಂತರ ರೋಗ ಲಕ್ಷಣ ತಿಳಿಯಲಿದೆ. ಸಾಮಾನ್ಯ ಚಿಕಿತ್ಸೆಯಿಂದಲೇ ಈ ಕಾಯಿಲೆ ನಿಯಂತ್ರಿಸುತ್ತಿರುವುದು ಗಮನಿಸಲಾಗಿದೆ. ದೇಹದ ತುಂಬಾ ಸೋಂಕು ಹರಡಿ ತೀವ್ರ ಅಸ್ವಸ್ಥತೆಗೆ ಒಳಗಾದವರು ಮಾತ್ರ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ| ಪ್ರಾಣೇಶ ಕುಲಕರ್ಣಿ ಮಾತನಾಡಿ, ಚೀನಾದಲ್ಲಿ ಸಿಕ್ಕ ಜೀವಿಗಳನ್ನೆಲ್ಲಾ ತಿನ್ನುವ ಅನಾರೋಗ್ಯಕರ ಆಹಾರ ಪದ್ಧತಿ ಇದೆ. ಈ ಕಾರಣಕ್ಕೆ ಈವರೆಗೆ ಆ ದೇಶದಲ್ಲಿ ಅನೇಕ ರೋಗಗಳು ಹುಟ್ಟಿಕೊಂಡಿವೆ. ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯದಲ್ಲಿ ಶುಚಿತ್ವ ಹಾಗೂ ಪರಿಶುದ್ಧತೆಗೆ ಮಹತ್ವ ನೀಡಲಾಗಿದೆ. ಹೀಗಾಗಿ ಕುಂಭ ಮೇಳದಂಥ ಮಹಾ ಕಾರ್ಯಕ್ರಮ ನಡೆದರೂ ಯಾವುದೇ ರೋಗ ಹುಟ್ಟಿಕೊಂಡಿಲ್ಲ ಎಂದರು.
ಪ್ರಾಚಾರ್ಯ ಡಾ| ದಸ್ತಗೀರ್‌ಸಾಬ್ ದಿನ್ನಿ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ವಿದ್ಯಾಸಾಗರ ಸಿ., ಅತಾವುಲ್ಲಾ, ಪ್ರಾಧ್ಯಾಪಕರಾದ ಆರ್.ಮಲ್ಲನಗೌಡ, ಡಾ| ಶಿವಯ್ಯ, ಮಹಾದೇವಪ್ಪ, ಪುಷ್ಪಾ, ಸಪ್ನಾ, ಇಶ್ರತ್ ಬೇಗಂ, ವಿಜಯ ಸರೋದೆ, ರಾಮಚಂದ್ರ ಗಬ್ಬೂರು ಸೇರಿ ಇತರರಿದ್ದರು. ಎಂ.ರವಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.