ರಾಯಚೂರು: ಸೈನ್ಯದಲ್ಲಿ ಕೆಲಸ ಕೊಡಿಸುವುದಾಗಿ ಯುವಕರಿಂದ ಲಕ್ಷ ಲಕ್ಷ ಲೂಟಿದ ಭೂಪ
Team Udayavani, Nov 30, 2019, 12:01 PM IST
ರಾಯಚೂರು: ಸೈನ್ಯದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಮೂರು ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಮುದ್ದೆಬಿಹಾಳ ತಾಲೂಕಿನ ನಾಲತವಾಡ ಮೂಲದ ಮಂಜುನಾಥ ರೆಡ್ಡಿ ತಾನು ಸೈನ್ಯದಲ್ಲಿದ್ದು ಹಣ ಕೊಟ್ಟರೆ ನಿಮಗೂ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ. ಇದನ್ನು ನಂಬಿ ಲಿಂಗಸೂಗುರು ತಾಲೂಕಿನ ಕುಪ್ಪಿಗುಡ್ಡ ಗ್ರಾಮದ ಅಮರೇಶ್, ಕರಡಕಲ್ ಗ್ರಾಮದ ಮಹೇಶ್ ಎನ್ನುವರು 3 ಲಕ್ಷ ರೂ. ನೀಡಿದ್ದರು. ಉದ್ಯೋಗವೂ ಕೊಡಿಸದೆ ಹಣ ಹಿಂದುರುಗಿಸದ ಕಾರಣ ಯುವಕರು ಮುದಗಲ್ ಠಾಣೆಗೆ ದೂರು ನೀಡಿದ್ದು, ಮಂಜುನಾಥ ರೆಡ್ಧಿ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಇದೇ ಮಾದರಿಯಲ್ಲಿ ಮಂಗಳೂರಿನ ಸುರತ್ಕಲ್ ನಲ್ಲೂ ವಂಚಿಸಿದ್ದು, ಪ್ರಕರಣ ದಾಖಲಾಗಿತ್ತು. ಸುರತ್ಕಲ್ ಠಾಣೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇದೇ ರೀತಿಯಲ್ಲಿ ಹಲವೆಡೆ ವಂಚಿಸಿರುವ ಸಾಧ್ಯತೆಯಿದೆ. ವಂಚನೆಗೊಳಗಾದವರು ಸಂಬಂಧಿಸಿದ ಠಾಣೆ ವ್ಯಾಪ್ತಿಗೆ ದೂರು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.