ಆರ್‌ಟಿಪಿಎಸ್‌ಗೆ ಜಲಕಂಟಕ!
Team Udayavani, Jan 3, 2019, 12:30 AM IST
ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಬೇಸಿಗೆಯಲ್ಲಿ ಎದುರಾಗುತ್ತಿದ್ದ ನೀರಿನ ಸಮಸ್ಯೆ ಈಗಲೇ ಬಂದೊದಗಿದ್ದು, ಅಧಿ ಕಾರಿಗಳು ಚಡಪಡಿಸುವಂತೆ ಮಾಡಿದೆ.
ಸದ್ಯಕ್ಕೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹವಿದೆ. ಆದರೆ, ಆರ್‌ಟಿಪಿಎಸ್ ಮತ್ತು ವೈಟಿಪಿಎಸ್‌ಗೆ ನಿಗದಿಪಡಿಸಿದ ನೀರು ಹರಿಸಲು ಮೀನಮೇಷ ಎಣಿಸುವಂತಾಗಿದೆ. ಈಗ ನೀರು ಹರಿಸಿದರೆ ಅದು ಕೃಷಿ ಚಟುವಟಿಕೆಗೆ ಬಳಕೆಯಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಲಾಶಯದ ಅ ಧಿಕಾರಿಗಳು ಅಳೆದು ತೂಗಿ ನೀರು ಹರಿಸುವಂತಾಗಿದೆ.
ಪ್ರತಿ ವರ್ಷ ಆರ್‌ಟಿಪಿಎಸ್‌ಗೆ 2.8 ಟಿಎಂಸಿ ಅಡಿ ನೀರು ಹರಿಸಬೇಕಿದೆ. ವಿದ್ಯುತ್ ಕೇಂದ್ರದ ಎಲ್ಲ 8 ಘಟಕಗಳು ಸಕ್ರಿಯವಾದರೆ ನಿತ್ಯ 0.07 ಟಿಎಂಸಿ ಅಡಿ ನೀರು ಬೇಕಾಗಲಿದೆ. ಬೇಸಿಗೆಯಲ್ಲಾದರೆ ಆ ಪ್ರಮಾಣ 0.01 ಟಿಎಂಸಿ ಅಡಿ ಆಗಲಿದೆ. ಆದರೆ, 3 ದಿನದಿಂದ ನೀರಿನ ಸಮಸ್ಯೆಯಿದ್ದು, ಅಧಿಕಾರಿಗಳು ನಾರಾಯಣಪುರ ಜಲಾಶಯದ ಆಡಳಿತ ಮಂಡಳಿಗೆ ಒತ್ತಡ ಹಾಕಿಸಿ ನೀರು ಬಿಡಿಸಿಕೊಂಡಿದ್ದಾರೆ. ಆಲಮಟ್ಟಿಯಿಂದ ಬುಧವಾರ ರಾತ್ರಿ 1 ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಕೃಷ್ಣ ನದಿ ಬರಿದಾಗಿದ್ದು, ಗುರ್ಜಾಪುರ ಬ್ಯಾರೇಜ್ ಕೂಡ ನೆಲಕಚ್ಚಿದೆ. ಇದರಿಂದ ಇರುವ ನೀರನ್ನೇ ಬಳಸಿ ವಿದ್ಯುತ್ ಉತ್ಪಾದಿಸಬೇಕಿದೆ.
ಒಂದು ಟಿಎಂಸಿ ನದಿಗೆ: ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 1 ಟಿಎಂಸಿ ಅಡಿ ನೀರು ಹರಿಸಲು ಒಪ್ಪಿದ್ದು, ಬುಧವಾರ ರಾತ್ರಿಯೇ ಬಿಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ನಾರಾಯಣಪುರ ಜಲಾಶಯದಿಂದಲೂ ಬುಧವಾರ ಸಂಜೆ 5 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ ಎಂದು ನಾರಾಯಣಪುರ ಜಲಾಶಯದ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ನೀರಿನ ಕಳವು ಸಾಧ್ಯತೆ: ಕೆಲ ಭಾಗದ ನದಿ ಪಾತ್ರದಲ್ಲಿ ರೈತರು ಬೇಸಿಗೆ ಬೆಳೆ ಬಿತ್ತನೆ ಮಾಡಿದ್ದು, ಅಕ್ರಮ ಪಂಪ್‌ಸೆಟ್
ಅಳವಡಿಸಿಕೊಂಡಿದ್ದಾರೆ. ನದಿಗೆ ನೀರು ಹರಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ನೀರು ಕಳವು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಲೆಕ್ಕಕ್ಕೆ ಒಂದು ಟಿಎಂಸಿ ಅಡಿ ಬಿಟ್ಟರೂ ಅದು ಬಂದು ಸೇರುವುದರಲ್ಲಿ ಸಾಕಷ್ಟು ಪೋಲಾಗುವ ಸಾಧ್ಯತೆ ಇರುತ್ತದೆ.
3 ದಿನಗಳಿಂದ ನೀರಿನ ತೀವ್ರ ಸಮಸ್ಯೆ ಕಾಡುತ್ತಿದೆ ಹೀಗಾಗಿ 1 ಟಿಎಂಸಿ ಅಡಿ ನೀರು ಬಿಡುವಂತೆ ನಾರಾಯಣಪುರ ಜಲಾಶಯದ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಬುಧವಾರ ರಾತ್ರಿಯೇ ನೀರು ಹರಿಸಲು ಒಪ್ಪಿದ್ದು, 2 ದಿನದೊಳಗೆ ನಮಗೆ ತಲುಪಲಿದೆ.
– ರಾಜಮುಡಿ, ಮುಖ್ಯ ಎಂಜಿನಿಯರ್,
ಸಿವಿಲ್ ವಿಭಾಗ ಆರ್‌ಟಿಪಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.