ಮತ್ತೆ 15 ಕೋವಿಡ್ ದೃಢ
Team Udayavani, Jul 1, 2020, 11:44 AM IST
ರಾಯಚೂರು: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ಹೆಚ್ಚುತ್ತಲೇ ಸಾಗಿದೆ. ಮಂಗಳವಾರ ಮತ್ತೆ 15 ಹೊಸ ಪ್ರಕರಣ ದೃಢಪಟ್ಟಿವೆ.
ಎರಡು ವರ್ಷದ ಹೆಣ್ಣು ಮಗು, ಒಂಭತ್ತು ವರ್ಷದ ಬಾಲಕ ಹಾಗೂ ಏಳು ಮಹಿಳೆಯರು, ಆರು ಜನ ಪುರುಷರಿಗೆ ಸೋಂಕು ತಗುಲಿದೆ. ರಾಯಚೂರು ತಾಲೂಕಿನ ಒಂಭತ್ತು ಜನರಿಗೆ, ಮಸ್ಕಿ ತಾಲೂಕಿನ ಇಬ್ಬರು, ಮಾನ್ವಿ ತಾಲೂಕಿನ ಇಬ್ಬರು ಸಿರವಾರ ತಾಲೂಕಿನ ಒಬ್ಬರು ಹಾಗೂ ಲಿಂಗಸುಗೂರು ತಾಲೂಕಿನ ಒಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 488ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಕಳುಹಿಸಿದ್ದ 518 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 1,302 ಜನರ ವರದಿ ಬರುವುದು ಬಾಕಿಯಿದೆ. ಇದುವರೆಗೂ ಗುಣಮುಖರಾದ 400 ಜನ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಇನ್ನೂ 83 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ 58 ಮತ್ತು ಕ್ವಾರಂಟೈನ್ ಕೇಂದ್ರದಲ್ಲಿ 25 ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.