ಸಿಕ್ಕ ಸಿಕ್ಕಲ್ಲಿ ಮದ್ಯ ಸೇವನೆ-ಜನರ ವೇದನೆ
ಖಾಲಿ ನಿವೇಶನ-ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮದ್ಯಪಾನ ಎಲ್ಲೆ ಮೀರಿದ ವರ್ತನೆ
Team Udayavani, May 7, 2020, 12:23 PM IST
ಸಾಂದರ್ಭಿಕ ಚಿತ್ರ
ರಾಯಚೂರು: ಸರ್ಕಾರ ಮದ್ಯ ಮಾರಾಟಕ್ಕೆ ಪರವಾನಗಿ ನೀಡಿರುವುದು ಮದ್ಯಪ್ರಿಯರಿಗೆ ಖುಷಿ ನೀಡಿದರೆ ಸಾರ್ವಜನಿಕರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ. ಬಾರ್ ಮತ್ತು ರೆಸ್ಟಾರೋಂಟ್‌ಗಳಲ್ಲಿ ಕುಡಿಯಲು ಅವಕಾಶ ಇಲ್ಲದ್ದಕ್ಕೆ ಕಂಡ ಕಂಡಲ್ಲಿ ಮದ್ಯಪಾನ ಮಾಡಿ ಬಾಟಲಿಗಳನ್ನು ಎಸೆಯುತ್ತಿದ್ದಾರೆ.
ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ಶುರುವಾಗಿದೆ. ಒಂದೂವರೆ ತಿಂಗಳಿಂದ ಮದ್ಯ ಸಿಗದೆ ಪರದಾಡಿದ ವ್ಯಸನಿಗಳು ಈಗ ಎಣ್ಣೆ ಸಿಕ್ಕ ಕೂಡಲೇ ಖಾಲಿ ಸ್ಥಳ ಕಂಡಲ್ಲಿ ಕುಳಿತು ಕುಡಿಯುತ್ತಿದ್ದಾರೆ. ಕೆಲ ಯುವಕರು ಬೀಯರ್ ಬಾಟಲಿಗಳನ್ನು ರಸ್ತೆ ಪಕ್ಕದಲ್ಲೇ ನಿಂತು ಕುಡಿಯುತ್ತಿದ್ದಾರೆ. ಅನೇಕರು ಅಕ್ಕಪಕ್ಕದ ಜಮೀನುಗಳಲ್ಲಿ, ಖಾಲಿ ನಿವೇಶನಗಳಲ್ಲಿ, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕುಡಿಯುತ್ತಿದ್ದಾರೆ. ಅಲ್ಲದೇ, ಬಾಟಲಿಗಳನ್ನು ಒಡೆದು ಕಂಡ ಕಂಡಲ್ಲಿ ಎಸೆಯುತ್ತಿದ್ದಾರೆ. ಇನ್ನೂ ಹಗಲಲ್ಲೇ ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ರಾತ್ರಿ ಕುಡುಕರೆಲ್ಲ ಹಗಲು ಕುಡುಕರಾಗಿದ್ದು, ರಸ್ತೆಗಳಲ್ಲೆಲ್ಲ ತೂರಾಡುತ್ತ ದಾರಿಹೋಕರಿಗೆ ಕಿರಿಕಿರಿ ಮಾಡುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ 8:00ರಿಂದ ಮಧ್ಯಾಹ್ನ 2:00ರ ವರೆಗೆ ಮಾಡಿದ್ದ ಮದ್ಯ ಮಾರಾಟದ ಸಮಯವನ್ನು ಬುಧವಾರ ಪುನಃ ಬದಲಿಸಲಾಗಿದೆ. ಬೆಳಗ್ಗೆ 9:00ರಿಂದ 6:00ರ ವರೆಗೂ ನಿಗದಿ ಮಾಡಲಾಗಿದೆ. ದಿನಕ್ಕೊಂದು ದರ ನಿಗದಿ ಮಾಡುತ್ತಿರುವುದರಿಂದ ಗ್ರಾಹಕರಿಗೆ ಗೊಂದಲಕ್ಕೆಡೆ ಮಾಡುತ್ತಿದೆ. ಇದರಿಂದ ಮದ್ಯದಂಗಡಿ ಮಾಲೀಕರ ಜತೆ ವಾಗ್ವಾದ ಮಾಡುತ್ತಿದ್ದಾರೆ. 2ನೇ ದಿನ ಶೇ.6ರಷ್ಟು ಹೆಚ್ಚಾಗಿದೆ. ಮೊದಲ ದಿನ 2.5 ಕೋಟಿಯಷ್ಟು ಮಾರಾಟವಾದರೆ, 2ನೇ ದಿನ 1.75 ಕೋಟಿ ರೂ. ಮಾರಾಟವಾಗಿದೆ. ಗುರುವಾರ ಶೇ.17ರಷ್ಟು ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಬುಧವಾರ ಹೆಚ್ಚಾಗಿ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.