ಫಲಿತಾಂಶ ಸುಧಾರಣೆ ಸರ್ಕಸ್
12 ವಾರಗಳ ಕಾರ್ಯಕ್ರಮ ಪರಿಣಾಮಕಾರಿ ಜಾರಿಜಿಪಂ ಸಿಇಒ ಹೆಚ್ಚು ಮುತುವರ್ಜಿ
Team Udayavani, Jan 11, 2020, 5:08 PM IST
ರಾಯಚೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನೆಲಕಚ್ಚಿದ ಜಿಲ್ಲೆಯನ್ನು ಮೇಲೆತ್ತುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ 12 ವಾರಗಳ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಆದರೆ, ಇದು ಫಲಿತಾಂಶ ಸುಧಾರಣೆಯಲ್ಲಿ ಎಷ್ಟು ಮಟ್ಟದ ಯಶಸ್ಸು ತಂದುಕೊಡುವುದೋ ನೋಡಬೇಕಿದೆ. ಈಗಾಗಲೇ 6 ವಾರ ಮುಗಿದಿದ್ದು, ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷ ಜಿಲ್ಲೆಗೆ 33ನೇ ಸ್ಥಾನ ಲಭಿಸಿತ್ತು.
ದೊಡ್ಡ ಜಿಲ್ಲೆಯಾದ ರಾಯಚೂರಿಗೆ ಇದು ತೀರ ಮುಜುಗರ ತಂದಿತ್ತು. ಆದರೆ, ಆಗ ತಾನೇ ಜಿಲ್ಲೆಗೆ ಆಗಮಿಸಿದ್ದ ಸಿಇಒ ಲಕ್ಷ್ಮೀಕಾಂತರೆಡ್ಡಿ ಇದೇ ಜಿಲ್ಲೆಯವರಾಗಿದ್ದು, ಇಲ್ಲಿನ ಫಲಿತಾಂಶ
ಕಂಡು ಬೇಸರ ವ್ಯಕ್ತಪಡಿಸಿದ್ದರು. ಶತಾಯಗತಾಯ ಈ ಬಾರಿ ತುಸುವಾದರೂ ಫಲಿತಾಂಶ ಚೇತರಿಕೆ ಕಾಣಬೇಕು ಎಂದು 12 ವಾರಗಳ ಕಾರ್ಯಕ್ರಮ ಪರಿಚಯಿಸಿದರು. ಇದಕ್ಕೆ ಖುದ್ದು ಶಿಕ್ಷಣ ಖಾತೆ ಸಚಿವ ಸುರೇಶಕುಮಾರ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ.
ಮಕ್ಕಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸುವುದರ ಜತೆಗೆ ಪರೀಕ್ಷೆ ಎದುರಿಸುವ ಪದ್ಧತಿಯನ್ನು ಕಲಿಸುವುದು, ಸಂಭಾವ್ಯ ಪ್ರಶ್ನೋತ್ತರಗಳನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 48 ಲಕ್ಷ ರೂ. ಅನುದಾನ ಮಂಜೂರಾಗಿದೆ. ಕಳೆದ 10 ವರ್ಷಗಳ ಪ್ರಶ್ನೆಪತ್ರಿಗಳನ್ನು ಸಂಗ್ರಹಿಸಿ ಅದರ ಜತೆಗೆ ಉತ್ತರ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ನಿತ್ಯ ಮಕ್ಕಳಿಗೆ ಬೆಳಗ್ಗೆ ಒಂದು ಗಂಟೆ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಸಾಕಷ್ಟು ಮಕ್ಕಳಲ್ಲಿ ಸುಧಾರಣೆ ಕಂಡು ಬರುತ್ತಿದೆ.
ಕಠಿಣ ವಿಷಯಗಳಿಗೆ ಒತ್ತು: ಮಕ್ಕಳಿಗೆ ಕಠಿಣ ವಿಷಯಗಳ ಭಯ ಹೆಚ್ಚಾಗಿದೆ. ಹೀಗಾಗಿ ಗಣಿತ, ಇಂಗ್ಲಿಷ್, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ನಿತ್ಯ ಬೆಳಗ್ಗೆ 9 ಗಂಟೆಯಿಂದ 10 ಗಂಟೆವರೆಗೂ ಕಿರು ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿ ದಿನ ಒಂದು ವಿಷಯದಂತೆ ಸೋಮವಾರದಿಂದ ಗುರುವಾರದವರೆಗೂ ಪರೀಕ್ಷೆ ನಡೆಸಿ ಮಕ್ಕಳು ಪಡೆದ ಅಂಕಗಳ ಆಧಾರದ ಮೇಲೆ ಬೋಧನೆ ಮಾಡಲಾಗುತ್ತಿದೆ.
ಪ್ರತ್ಯೇಕ ವೆಬ್‌ಪೇಜ್: ಈ ಕಾರ್ಯಕ್ರಮಕ್ಕಾಗಿಯೇ ಗೂಗಲ್ ಸ್ಪ್ರೆಡ್‌ಶೀಟ್ ಎನ್ನುವ ಪ್ರತ್ಯೇಕ ವೆಬ್ ಸೈಟ್ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 205 ಸರ್ಕಾರಿ ಪ್ರೌಢಶಾಲೆಗಳಿದ್ದು, ಅದರಲ್ಲಿ 17 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಪ್ರತಿದಿನ ಪಡೆಯುವ ಅಂಕಗಳನ್ನು ಒಂದು ವಾರದಲ್ಲಿ ವೆಬ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ.
ಯಾವ ಶಾಲೆಯಲ್ಲಿ ಅಂಕ ಕಡಿಮೆ ಬಂದಿದೆ, ಹೆಚ್ಚು ಬಂದಿದೆ
ಎಂಬುದು ತಿಳಿಯಲಿದೆ. ಕಡಿಮೆ ಅಂಕ ಬಂದ ಶಾಲೆಗಳ ಮುಖ್ಯಶಿಕ್ಷಕರಿಗೆ ಮೇಲಧಿಕಾರಿಗಳು ನೇರವಾಗಿ ಸಂಪರ್ಕಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೇ, ಬಿಇಒ, ಬಿಆರ್‌ಸಿ, ವಿಶೇಷಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ನಿರ್ದೇಶನ ನೀಡುತ್ತಿದ್ದಾರೆ.
ನಗರ ಶಾಲೆಗಳಲ್ಲೇ ಕಡಿಮೆ ಅಂಕ: ಆರು ವಾರಗಳಲ್ಲಿ ಎಲ್ಲೆಡೆ ಉತ್ತಮ ಪ್ರತಿಕ್ರಿಯ ಕಂಡು ಬಂದರೆ ರಾಯಚೂರು ನಗರದ ಶಾಲೆಗಳಲ್ಲೇ ಅತಿ ಕಡಿಮೆ ಅಂಕ ಸಂಪಾದಿಸಿದ ಮಾಹಿತಿ ಲಭ್ಯವಾಗಿದೆ. ಇದರಿಂದ ನಗರ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರಿಗೆ ವಿಶೇಷ ಸಭೆ ನಡೆಸಿದ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ವಿಚಾರವನ್ನು ಗಂಭೀರವಾಗಿ
ಪರಿಗಣಿಸಲಾಗಿದೆ. ಇದಕ್ಕಾಗಿ ಜಿಪಂ ಸಿಇಒ ಅವರು ಜಾರಿಗೊಳಿಸಿದ 12 ವಾರಗಳ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ನಿತ್ಯ ಪರೀಕ್ಷೆ ನಡೆಸಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಈ ಮುಂಚೆ 30 ಅಂಕಗಳಿಗೆ ಒಂದು ಎರಡು ಅಂಕ ಪಡೆಯುತ್ತಿದ್ದ ಮಕ್ಕಳು ಆರು ವಾರಗಳಲ್ಲಿ 7-8 ಅಂಕ ಪಡೆಯುವ ಮಟ್ಟಿಗೆ ಸುಧಾರಣೆ ಕಂಡಿದ್ದಾರೆ. ಇನ್ನೂ ಆರು ವಾರಗಳಲ್ಲಿ ಇದು ಇನ್ನಷ್ಟು ಸುಧಾರಿಸುವ ವಿಶ್ವಾಸವಿದೆ. ಈ ಬಾರಿ ಉತ್ತೀರ್ಣ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ.
ಬಿ.ಎಚ್.ಗೋನಾಳ,
ಡಿಡಿಪಿಐ ರಾಯಚೂರು
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ
ಹಮ್ಮಿಕೊಂಡ 12 ವಾರಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ
ಜಾರಿಯಾಗುತ್ತಿದೆ. ಮಕ್ಕಳಿಗೆ ಪದೇ ಪದೇ ಪರೀಕ್ಷೆ ಬರೆಯುವುದರಿಂದ ಅನುಭವ ಹೆಚ್ಚಲಿದೆ. ಅದು ವಾರ್ಷಿಕ ಪರೀಕ್ಷೆಗೆ ಪೂರಕವಾಗಲಿದೆ. ಪ್ರತಿ ವಾರ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶ ಪರಿಶೀಲಿಸಲಾಗುತ್ತಿದೆ. ಕಡಿಮೆ ಅಂಕ ಬಂದ ಶಾಲೆಗಳಿಗೆ ಸುಧಾರಣೆಗೆ ನಿರ್ದೇಶನ ನೀಡಲಾಗುತ್ತಿದೆ. ವಿದ್ಯಾರ್ಥಿ ನಿರಂತರ ಹಾಜರಾತಿ ಕಾಯ್ದುಕೊಳ್ಳುವಲ್ಲಿ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಬಾರಿ ಫಲಿತಾಂಶ ಹೆಚ್ಚಳದ ನಿರೀಕ್ಷೆಯಲ್ಲಿದ್ದೇವೆ.
ಯುಕೇಶ,
ಪ್ರಭಾರ ಐಎಎಸ್ ಅಧಿಕಾರಿ ಮತ್ತು
ಕಾರ್ಯಕ್ರಮ ಉಸ್ತುವಾರಿ ಅಧಿಕಾರಿ
ಪಾಲಕರು-ಶಿಕ್ಷಕರ ಅಸಹಕಾರ
12 ವಾರಗಳ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಕೂಡ ಇದರಲ್ಲಿ ಪಾಲಕರು, ಶಿಕ್ಷಕರ ಅಸಹಕಾರವೇ ಹೆಚ್ಚಾಗಿ ಕಂಡು ಬರುತ್ತಿದೆ. ನಿತ್ಯ ಬೆಳಗ್ಗೆ 9 ಗಂಟೆಗೆ ಶಾಲೆ ಆರಂಭವಾಗುತ್ತಿರುವ ಕಾರಣ ಸಮಯಕ್ಕೆ ಸರಿಯಾಗಿ ಶಿಕ್ಷಕರು ಬರುತ್ತಿಲ್ಲ. ಇನ್ನು ಪಾಲಕರು ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸದೆ ಹತ್ತಿ ಬಿಡಿಸಲು, ಹೊಲದ ಕೆಲಸಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಗೋಬಿ, ಕಾಟನ್ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Delhi; ಈಗ ಟೈಂ ಬಾಂಬ್! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ
Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.