ಉದ್ಯೋಗ ಖಾತ್ರಿ ವಾಹಿನಿ ರಥಕ್ಕೆ ಚಾಲನೆ
50 ದಿನ ಹೆಚ್ಚುವರಿ ಉದ್ಯೋಗ ಒದಗಿಸಲು ಸರ್ಕಾರ ಘೋಷಣೆ
Team Udayavani, Feb 21, 2020, 3:35 PM IST
ರಾಯಚೂರು: ನಗರದ ಜಿಪಂ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕುರಿತು ಕೂಲಿಕಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಿದ ಉದ್ಯೋಗ ಖಾತ್ರಿ ವಾಹಿನಿ ರಥಕ್ಕೆ ಜಿಪಂ ಸಿಇಒ ಜಿ. ಲಕ್ಷ್ಮೀ ಕಾಂತರೆಡ್ಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಳ್ಳಿ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ನರೇಗಾ ಯೋಜನೆ ಆರಂಭಿಸಿದೆ. ಜನ ಕೆಲಸವಿಲ್ಲದೆ ಗುಳೆ ಹೋಗುವುದನ್ನು ತಪ್ಪಿಸಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಉಪಯುಕ್ತ ಕಾರ್ಯಕ್ರಮವಾಗಿದೆ. ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ನೀಡಲಾಗುವುದು. ಪ್ರಸಕ್ತ ವರ್ಷ ಭೀಕರ ಬರ ಮತ್ತು ನೆರೆ ಉಂಟಾದ ಕಾರಣ 50 ದಿನಗಳನ್ನು ಹೆಚ್ಚುವರಿಯಾಗಿ ಉದ್ಯೋಗ ಒದಗಿಸಲು ಸರ್ಕಾರ ಘೋಷಿಸಿದೆ ಎಂದು ವಿವರಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸರಿ ಸಮಾನ ಕೂಲಿ 249 ರೂ. ನೀಡಲಾಗುತ್ತಿದೆ. ಉದ್ಯೋಗ ಖಾತ್ರಿ ವಾಹಿನಿ ಪ್ರಚಾರ ರಥ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಸಂಚರಿಸಿ ಮಾಹಿತಿ ನೀಡಲಿದೆ. ಕೂಲಿ ಕಾರ್ಮಿಕರು ಬೇರೆಡೆ ವಲಸೆ ಹೋಗದಂತೆ ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದು ಹೇಳಿದರು.
ಜಿಪಂ ಉಪ ಕಾರ್ಯದರ್ಶಿ ಮಹ್ಮದ್ ಯೂಸೂಫ್, ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ, ತಾಪಂ ಇಒ ರಾಮರೆಡ್ಡಿ ಪಾಟೀಲ, ಮಹಾತ್ಮ ಗಾಂ ಧಿ ನರೇಗಾ ಯೋಜನೆ ಸಿಬ್ಬಂದಿ ಡಿಐಇಸಿ ವಿಶ್ವನಾಥ, ಟಿಐಇಸಿ ಧನರಾಜ, ಎನ್ ಆರ್‌ಎಲ್‌ಎಮ್ ಯೋಜನೆಯ ವಿಜಯಕುಮಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.