ಆಂಧ್ರ, ತೆಲಂಗಾಣಕ್ಕೆ ಹತ್ತಿರವಾದ ಗಡಿ ಭಾಗದ ಕೂಲಿಕಾರರು!
ರಾಜ್ಯದ ಕೂಲಿಕಾರರಿಗೆ ಹೆಚ್ಚಿದ ಬೇಡಿಕೆದುಪ್ಪಟ್ಟು ಕೂಲಿ ಕೊಟ್ಟು ಹೈಜಾಕ್ ರಾಜ್ಯದಲ್ಲಿ ಹತ್ತಿ ಬಿಡಿಸಲು ಸಿಗುತ್ತಿಲ್ಲ ಜನ
Team Udayavani, Jan 18, 2020, 1:26 PM IST
ರಾಯಚೂರು: ಬೆಳೆ ಕೈ ಸೇರುವ ಹೊತ್ತಲ್ಲಿ ಕೈ ಹಿಡಿಯಬೇಕಾದ ಕೂಲಿಕಾರರನ್ನು ನೆರೆ ರಾಜ್ಯದ ರೈತರು ಹೈಜಾಕ್ ಮಾಡುತ್ತಿದ್ದಾರೆ. ಪರಿಣಾಮ ಹತ್ತಿ ಬಿಡಿಸಲು ಕೂಲಿಯಾಳು ಸಿಗದೆ ಇಲ್ಲಿನ ರೈತರು ಪರದಾಡುತ್ತಿದ್ದರೆ, ಆಂಧ್ರದ ರೈತರು ಇಲ್ಲಿನ ಕೂಲಿಕಾರರನ್ನು ದುಬಾರಿ ಹಣ ಕೊಟ್ಟು ಸೆಳೆಯುತ್ತಿದ್ದಾರೆ.
ಈ ಬಾರಿ ಮಳೆ ಉತ್ತಮವಾಗಿರುವ ಪರಿಣಾಮ ಹತ್ತಿ ಇಳುವರಿ ಭರ್ಜರಿಯಾಗಿದೆ. ಜಿಲ್ಲೆಯಲ್ಲಿ 74,654 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಕೇಳಿದಷ್ಟು ಹಣ ಕೊಡುತ್ತೇವೆಂದರೂ ಹತ್ತಿ ಬಿಡಿಸಲು ಕೂಲಿಕಾರರು ಸಿಗುತ್ತಿಲ್ಲ. ರಾಯಚೂರು ತಾಲೂಕಿನಲ್ಲಿ ತುಸು ಮುಂಗಡ ಬಿತ್ತನೆ ಮಾಡಿದ ಕಾರಣ ಈಗಾಗಲೇ ಹತ್ತಿ ಬಿಡಿಸಿ ಮಾರಾಟ ಮಾಡಲಾಗಿದೆ. ಎರಡು, ಮೂರನೇ ಸುತ್ತಿನಲ್ಲಿ ಹತ್ತಿ ಬಿಡಿಸಲಾಗುತ್ತಿದೆ. ಆದರೆ, ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಮಾತ್ರ ಒಮ್ಮೆಯೂ ಹತ್ತಿ ಬಿಡಿಸಿಲ್ಲ.
ಕೂಲಿಕಾರರನ್ನು ದೂರದೂರುಗಳಿಂದ ಕರೆತಬೇಕೆಂದರೂ ಸಕಾಲಕ್ಕೆ ಸಿಗುತ್ತಿಲ್ಲ. ತೆಲಂಗಾಣ ರೈತರ ಆಮಿಷ: ತೆಲಂಗಾಣದಲ್ಲಿ ಮೆಣಸಿನಕಾಯಿ ಹೆಚ್ಚಾಗಿ ಬೆಳೆಯಲಾಗಿದೆ. ಅಲ್ಲಿಯೂ ಕೂಲಿಕಾರರದ್ದೇ ಸಮಸ್ಯೆ ಇದೆ. ಹೀಗಾಗಿ ಅಲ್ಲಿನ ರೈತರು ಗಡಿದಾಟಿ ಬಂದು ಕೂಲಿಕಾರರನ್ನು ದುಬಾರಿ ಹಣ ಕೊಟ್ಟು ಕರೆದೊಯ್ಯುತ್ತಿದ್ದಾರೆ. ಇಲ್ಲಿ ದಿನಕ್ಕೆ 150 ಕೂಲಿ ನೀಡುತ್ತಿದ್ದರೆ, ಅಲ್ಲಿ 250 ರೂ. ನೀಡಲಾಗುತ್ತಿದೆ. ಅದರ ಜತೆಗೆ ಕರೆದೊಯ್ಯಲು ಪ್ರತಿ ವ್ಯಕ್ತಿಗೆ 50 ರೂ. ಆಟೋ ವೆಚ್ಚ ನೀಡಲಾಗುತ್ತಿದೆ. ಈಗ ಆಂಧ್ರ, ತೆಲಂಗಾಣದಲ್ಲಿ ಬೇಸಿಗೆ ಬೆಳೆಗೆ ನಾಟಿ ಕಾರ್ಯ ಶುರುವಾಗಿದ್ದು ಕೂಲಿಕಾರರಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಕೆಜಿಗೆ ಎಂಟು ರೂ.: ಮೊದಲೆಲ್ಲ ಹತ್ತಿ ಬಿಡಿಸಲು ದಿನಕ್ಕೆ ಇಂತಿಷ್ಟು ಎಂದು ಕೂಲಿ ನೀಡಲಾಗುತ್ತಿತ್ತು. ಆದರೆ, ಈಗ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಹತ್ತಿ ಬೇಕಾದರೂ ಬಿಡಿಸಲಿ. ಕೆಜಿಗೆ 8 ರೂ. ನೀಡುತ್ತಿದ್ದೇವೆ ಎನ್ನುತ್ತಾರೆ ರೈತರು. ಹೀಗಾಗಿ ಒಬ್ಬ ಮಹಿಳೆ 50-60 ಕೆಜಿ ಹತ್ತಿ ಬಿಡಿಸುತ್ತಾಳೆ. ಇದು ರೈತರಿಗೆ ಹೊರೆಯಾದರೂ ಬೇರೆ ದಾರಿ ಕಾಣದಾಗಿದೆ. ಭತ್ತ, ತೊಗರಿ ಕಟಾವು ಮಾಡಲು ಮಶಿನ್ ಗಳಿವೆ. ಹತ್ತಿಯನ್ನು ಕೂಲಿಕಾರರೇ ಬಿಡಿಸಬೇಕು. ಅದರಲ್ಲೂ ಮಹಿಳೆಯರು, ಮಕ್ಕಳಾದರೆ ಬೇಗ ಬಿಡಿಸುತ್ತಾರೆ ಎನ್ನುತ್ತಾರೆ ರೈತರು. ಆಂಧ್ರದ ರೈತರಿಗೆ ಪೈಪೋಟಿ ನೀಡಲು ಹೀಗೆ ಕೂಲಿ ಹೆಚ್ಚು ನೀಡಬೇಕಾದ ಸ್ಥಿತಿ ಇದೆ.
30-40 ಕಿಮೀನಿಂದ ಬರ್ತಾರೆ: ಈಗ ದೇವದುರ್ಗ, ಮಾನ್ವಿ ತಾಲೂಕಿನಲ್ಲಿ ಈ ಸಮಸ್ಯೆ ತಲೆದೋರಿದೆ. ಹೀಗಾಗಿ ರಾಯಚೂರು ತಾಲೂಕಿನ ಗಡಿಭಾಗದಿಂದ ಟಂಟಂ, ಜೀಪ್‌ಗ್ಳಲ್ಲಿ ಕೂಲಿಕಾರರನ್ನು ಕರೆದೊಯ್ಯಲಾಗುತ್ತಿದೆ. ತಾಲೂಕಿನ
ಬಿಜನಗೇರಾದಿಂದ ಸಿರವಾರ ಸಮೀಪದ ಹಳ್ಳಿಗಳಿಗೆ ಕೂಲಿಕಾರರನ್ನು ಕರೆದುಕೊಂಡು ಹೋಗಿದ್ದಾರೆ. 30-40 ಕಿಮೀ ದೂರ ದವರೆಗೂ ಹೋಗಿ ಕರೆ ತರುವ ಸ್ಥಿತಿ ಇದೆ. ಬೆಳಗ್ಗೆ ಕರೆದುಕೊಂಡು ಹೋಗಿ ಸಂಜೆ ಕರೆ ತರಬೇಕಿದೆ. ಹಣಕಾಸಿನ ವಿಚಾರದಲ್ಲಿ ತುಸು ಹೆಚ್ಚು ಕಡಿಮೆಯಾದರೂ ನಾಳೆಯಿಂದ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಾರೆ ಕೂಲಿಕಾರರು.
ದರ ಕುಸಿಯುವ ಭೀತಿ: ಈಗಾಗಲೇ ಮಾರುಕಟ್ಟೆಗೆ ನಾನಾ ಭಾಗಗಳಿಂದ ಹತ್ತಿ ಲಗ್ಗೆ ಇಡುತ್ತಿದೆ. ಇದರಿಂದ 4400 ರಿಂದ 5350 ರೂ.ವರೆಗೆ ದರ ಇದೆ. ಇನ್ನೂ ಹತ್ತಿ ಖರೀದಿ ಕೇಂದ್ರಗಳಲ್ಲಿ 5,550 ರೂ.ಗೆ ಒಬ್ಬ ರೈತರಿಂದ 40 ಕ್ವಿಂಟಲ್ ಖರೀದಿಸಲಾಗುತ್ತಿದೆ. ಸರ್ಕಾರ ತನ್ನ ಖರೀದಿ ಮಿತಿ ಮುಗಿದ ಬಳಿಕ ಯಾವಾಗ
ಬೇಕಾದರೂ ಕೇಂದ್ರ ಸ್ಥಗಿತ ಮಾಡಬಹುದು ಎಂಬ ಆತಂಕ ಬೇರೆ ಇದೆ. ಹೀಗಾಗಿ ರೈತರು ಹೇಗಾದರೂ ಮಾಡಿ ತ್ವರಿತಗತಿಯಲ್ಲಿ ಹತ್ತಿ ಬಿಡಿಸಿ ಮಾರಾಟ ಮಾಡಿದರೆ ಸಾಕು ಎನ್ನುವಂತಾಗಿದೆ.
ನಮ್ಮ ಜಿಲ್ಲೆಯ ರೈತರಿಗೆ ಆಂಧ್ರ ರೈತರ ಕಾಟ ಹೆಚ್ಚಾಗಿದೆ. ಚಂದ್ರಬಂಡಾದಿಂದ ನಿತ್ಯ ಏಳೆಂಟು ಆಟೋಗಳಲ್ಲಿ ಕೂಲಿಕಾರರು ತೆಲಂಗಾಣದ ರಾಜ್ಯಗಳಿಗೆ ಕೂಲಿ ಹೋಗುತ್ತಾರೆ. ಅಲ್ಲಿ ಹೆಚ್ಚು ಕೂಲಿ ನೀಡುವುದರಿಂದ ಹಣದಾಸೆಗೆ ಹೋಗುತ್ತಾರೆ. ಮೇಲ್ಭಾಗದಲ್ಲಿ ಹತ್ತಿ ಬಿಡಿಸಲು ಜನರಿದ್ದರೆ ಕಳುಹಿಸಿ ಎಂಬ ಕರೆಗಳು ನಿತ್ಯ ಬರುತ್ತಿವೆ. ಖರೀದಿ ಕೇಂದ್ರಗಳು ಹತ್ತಿ ಖಾಲಿಯಾಗುವವರೆಗೂ ಮುಚ್ಚದೆ ಈಗಿನ ದರಕ್ಕೆ ಖರೀದಿಸಬೇಕು. ಲಕ್ಷ್ಮಣಗೌಡ ಕಡಗಂದೊಡ್ಡಿ,
ರೈತ ಸಂಘದ ಜಿಲ್ಲಾಧ್ಯಕ್ಷ
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.