ಬಾಲ್ಯವಿವಾಹ ತಡೆಗೆ ಸಹಕರಿಸಿ
ಕ್ರೈಸ್ತ ಸಭಾಪಾಲಕರಿಗೆ ಬಾಲ್ಯವಿವಾಹ ನಿಷೇಧ-ದತ್ತು ಪ್ರಕ್ರಿಯೆ ಕುರಿತು ಮಾಹಿತಿ ಕಾರ್ಯಕ್ರಮ
Team Udayavani, Feb 26, 2020, 5:21 PM IST
ರಾಯಚೂರು: ಬಾಲ್ಯವಿವಾಹ ತಡೆಗಟ್ಟುವಲ್ಲಿ ಎಲ್ಲರ ಸಹಕಾರವೂ ಅವಶ್ಯಕವಾಗಿದೆ. ಅದರೊಂದಿಗೆ ಚರ್ಚ್ ಸಭಾಪಾಲಕರು ಹಾಗೂ ಫಾದರ್ ಪಾತ್ರ ಬಹಳ ಪ್ರಮುಖವಾದದ್ದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ| ಜಯಶ್ರೀ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಂದ್ರಬಂಡಾ ರಸ್ತೆಯಲ್ಲಿರುವ ನ್ಯೂ ಕ್ರಿಯೇಷನ್ ಅಸೆಂಬ್ಲಿ ಆಫ್ ಗಾಡ್ ಚರ್ಚ್‌ನ ಸಹಯೋಗದಲ್ಲಿ ನಗರದ ಮನೋರಂಜನಾ ಕೇಂದ್ರದಲ್ಲಿ ಕ್ರೈಸ್ತ ಸಭಾಪಾಲಕರಿಗಾಗಿ ಹಮ್ಮಿಕೊಂಡ ಬಾಲ್ಯವಿವಾಹ ನಿಷೇಧ, ದತ್ತು ಪ್ರಕ್ರಿಯೆ ಹಾಗೂ ಇಲಾಖೆ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪೋಷಣೆ ಮತ್ತು ರಕ್ಷಣೆ ಹಾಗೂ ರಾಜ್ಯ ಮಕ್ಕಳ ಆಯೋಗದ ಕಾರ್ಯವೈಖರಿ ಬಗ್ಗೆ ಮತ್ತು ಮಕ್ಕಳ ರಕ್ಷಣೆಗಾಗಿ ಇರುವ ಕಾನೂನುಗಳ ಕುರಿತು ವಿವರಿಸಿದರು. ಬ್ಲೆಸೆಡ್‌ಫುಲ್ ಗಾಸ್ಪೆಲ್ ಚರ್ಚ್‌ನ ಹಿರಿಯ ಸಭಾಪಾಲಕ ರೆ|
ಜೆರ್ನಸ್ ಜೇಮ್ಸ್ ಮಾತನಾಡಿ, ಬಾಲ್ಯವಿವಾಹ ತಡೆಯುವಲ್ಲಿ ಚರ್ಚ್ ಫಾದರ್ ಪಾತ್ರ ಮಹತ್ವದ್ದಾಗಿದೆ. ಈ ಕಾಯ್ದೆಯನ್ನು ಬಲಗೊಳಿಸಲು ಸಂಪೂರ್ಣ ಸಹಕರಿಸಲಾಗುವುದು ಎಂದು ಹೇಳಿದರು.
ನ್ಯೂ ಕ್ರಿಯೇಷನ್ ಅಸೆಂಬ್ಲಿ ಚರ್ಚ್ ಹಿರಿಯ ಸಭಾಪಾಲಕರಾದ ರೆ| ಎಸ್.ಡಿ. ಹನೋಕ್ ಮಾತನಾಡಿ, ಬಾಲ್ಯವಿವಾಹ ತಡೆಗಟ್ಟಲು ಸಭಾಪಾಲಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ (ಅಸಾಂಸ್ಥಿಕ) ಕಿರಲಿಂಗಪ್ಪ ಮಾತನಾಡಿ, ಕಾನೂನಾತ್ಮಕ ದತ್ತು ಪ್ರಕ್ರಿಯೆ ಕುರಿತು ಅಂದರೆ ಮಕ್ಕಳು ಬೇಕು ಎನ್ನುವ ಅರ್ಹ ದಂಪತಿಗಳು ಒದಗಿಸಬೇಕಾದ ದಾಖಲೆಗಳು, ದಂಪತಿಗಳು ಯಾವ ವಯಸ್ಸಿನ ಮಕ್ಕಳಿಗೆ ಅರ್ಹರು, ದತ್ತು ಸಂಸ್ಥೆ ಮತ್ತು ಅದರ ಪಾತ್ರಗಳ ಕುರಿತು ವಿವರಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಫಾ| ಸತೀಶ ಫನಾಂಡಿಸ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಪ್ರಭುದೇವ ಪಾಟೀಲ, ರೆ| ಎ.ಜೋಸೆಫ್ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಂಗಳಾ ಹೆಗಡೆ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಗುರುಪ್ರಸಾದ, ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಗೋಕುಲ್ ಹುಸೇನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ತಿಕ್ಕಯ್ಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಈರಮ್ಮ, ಆಪ್ತ ಸಮಾಲೋಚಕರಾದ ಜ್ಯೋತಿ, ಸಮಾಜ ಕಾರ್ಯಕರ್ತರಾದ ಖಾಜಾಬಿ, ಮಕ್ಕಳ ರಕ್ಷಣಾಧಿ ಕಾರಿ (ಸಾಂಸ್ಥಿಕ ಪೋಷಣೆ) ಹನುಮೇಶ, ಔಟ್‌ರೀಚ್ ವರ್ಕರ್ ದಿನೇಶಕುಮಾರ, ಬೆರಳಚ್ಚುಗಾರ ಜಿ.ಬಿ.ನರಸಿಂಹ, ನ್ಯೂ ಕ್ರಿಯೇಷನ್ ಅಸೆಂಬ್ಲಿ ಅಫ್ ಗಾಡ್ ಚರ್ಚ್, ರಾಯಚೂರು ಚರ್ಚ್ ಸಭಾಪಾಲಕರು ಉಪಸ್ಥಿತರಿದ್ದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.