ಜಿಲ್ಲೆ ವ್ಯಾದಿಗೆ ಮದ್ದರೆಯುವರೇ ಬಿಎಸ್‌ವೈ?
ಕಲ್ಯಾಣ ಭಾಗದ ರಾಯಚೂರಿಗೆ ವಿಶೇಷ ಕೊಡುಗೆ ಏನು? ನೀರಾವರಿ ಸಮಸ್ಯೆಗೆ ಸಿಗುವುದೇ ಶಾಶ್ವತ ಪರಿಹಾರ?
Team Udayavani, Feb 28, 2020, 12:29 PM IST
ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಪಣ ತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಅದ್ಯಾವ ಕೊಡುಗೆ ನೀಡುತ್ತಾರೋ ಎಂದು ಜನ ಕಾತರದಿಂದ ಕಾಯುತ್ತಿದ್ದಾರೆ. ಸಾಕಷ್ಟು ಹಳೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜತೆಗೆ ಹೊಸ ಘೋಷಣೆಗಳ ನಿರೀಕ್ಷೆಗಳು ಹೆಚ್ಚಾಗಿವೆ.
ಅಧಿಕಾರಕ್ಕೆ ಬರುತ್ತಿದ್ದಂತೆ ಹೈದರಾಬಾದ್ ಕರ್ನಾಟಕದ ಹೆಸರು ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಸಿಎಂ, ಈ ಭಾಗಕ್ಕೆ ಬಂದಾಗಲೊಮ್ಮೆ ಅಭಿವೃದ್ಧಿಯ ಮಾತನ್ನಾಡಿದ್ದಾರೆ. ಅವರ ಮಾತುಗಳು ಈ ಸಾಲಿನ ಬಜೆಟ್ ಎಷ್ಟರ ಮಟ್ಟಿಗೆ ಸಾಕ್ಷೀಕರಿಸುವುದೋ ಕಾದು ನೋಡಬೇಕು. ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಕಮಲಕ್ಕೆ ಅಧಿಕಾರ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಶಾಸಕರಲ್ಲಿ ಜಿಲ್ಲೆಯ ಮಸ್ಕಿ ಕ್ಷೇತ್ರ ಪ್ರತಾಪಗೌಡ ಕೂಡ ಇದ್ದಾರೆ. ಆ ಒಂದು ಕೃತಜ್ಞ ಭಾವದಲ್ಲಿ ಜಿಲ್ಲೆಗೇನಾದರೂ ಹೊಸ ಯೋಜನೆ ಬರಬಹುದು. ಅದರ ಜತೆಗೆ ನೀರಾವರಿ, ಕೃಷಿ, ಶಿಕ್ಷಣ, ಸಾರಿಗೆ ಸೌಲಭ್ಯದಂತ ಸಾಕಷ್ಟು ಸಂಗತಿಗಳು ಬೇಡಿಕೆ ಪಟ್ಟಿಯಲ್ಲಿವೆ.
ಡಿಪಿಆರ್‌ನಲ್ಲೇ ಉಳಿದ ಜಲಾಶಯ: ರಾಜ್ಯದಲ್ಲಿ ಯಾವ ಸರ್ಕಾರ ಅಧಿ ಕಾರಕ್ಕೆ ಬಂದರೂ ಜಿಲ್ಲೆಯಲ್ಲಿ ಹರಿಯುವ ಜೀವ ನದಿಗಳಾದ ಕೃಷ್ಣಾ, ತುಂಗಭದ್ರಾವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕಳೆದ ವರ್ಷ ಅಪ್ಪಳಿಸಿದ ನೆರೆಯಿಂದ ಹೆಚ್ಚು ಕಡಿಮೆ ಉಭಯ ನದಿಗಳಲ್ಲಿ ಸಾವಿರ ಟಿಎಂಸಿ ನೀರು ವೃಥಾ ಹರಿದು ಹೋಗಿದೆ ಎನ್ನುತ್ತಾರೆ ತಜ್ಞರು. ಆ ನೀರನ್ನು ಹಿಡಿದಿಡುವ ಯೋಜನೆ ರೂಪಿಸಿದ್ದೇ ಆದಲ್ಲಿ ಲಕ್ಷಾಂತರ ರೈತ ಕುಟುಂಬಗಳ ಬದುಕು ಹಸನಾಗಲಿದೆ.
ತುಂಗಭದ್ರಾ ಜಲಾಶಯಕ್ಕೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ವಿಚಾರ ಇನ್ನೂ ಡಿಪಿಆರ್ ಮಾಡುವ ಹಂತದಲ್ಲಿಯೇ ಇದೆ. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾಪಿಸಿತ್ತು. ಅಲ್ಲೆದೇ, ಡಿಪಿಆರ್ ಮಾಡಲು 9 ಕೋಟಿ ಬೇಕು ಎಂದು ತಿಳಿಸಿತ್ತು. ಆದರೆ, ಅದಾಗಲಿಲ್ಲ. ಈಗ 14 ಕೋಟಿ ರೂ. ಬೇಕಾಗಬಹುದು ಎನ್ನಲಾಗುತ್ತಿದೆ. ಅಲ್ಲದೇ, ಜಲಾಶಯ ನಿರ್ಮಿಸಲು ಸರಿಸುಮಾರು 10 ಸಾವಿರ ಕೋಟಿಗೂ ಅಧಿಕ ಹಣ ಬೇಕಾಗಬಹುದು ಎಂದು ಹಿಂದಿನ ಸರ್ಕಾರ ಅಂದಾಜಿಸಿತ್ತು.
ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಕೊನೆ ಭಾಗಕ್ಕೆ ನೀರು ಸಿಗುತ್ತಿಲ್ಲ. ನವಲಿ ಮತ್ತು ಕವಿತಾಳ ಬಳಿ ಸಮಾನಾಂತರ ಜಲಾಶಯ ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದ ಬೇಡಿಕೆ ಈ ಬಾರಿ ಪರಿಷ್ಕಾರ ಸಿಗುವುದೇ ನೋಡಬೇಕು. ನನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿ ಮುಗಿಸಬೇಕಿದೆ. ಕೆರೆಗಳ ಪುನಶ್ಚೇತನಕ್ಕೂ ಒತ್ತು ನೀಡುವ ಅಗತ್ಯವಿದೆ.
ಏರ್‌ಪೋರ್ಟ್‌ಗೆ ರೆಕ್ಕೆ ಪುಕ್ಕ: ಇಷ್ಟು ದಿನ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದ್ದ ವಿಮಾನ ನಿಲ್ದಾಣ ಬೇಡಿಕೆ ಈಗ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಯರಮರಸ್ ಬಳಿ ಅದಕ್ಕಾಗಿ 400 ಎಕರೆ ಸ್ಥಳ ನಿಗದಿ ಮಾಡಲಾಗಿದೆ. ಕಲಬುರಗಿ, ಬೀದರ್‌ನಲ್ಲಿ ವಿಮಾನ ನಿಲ್ದಾಣ ಶುರುವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕೂಗೆದ್ದಿದೆ. ತಜ್ಞರ ತಂಡ ಬಂದು ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರುವ ಕಾರಣ ಜಿಲ್ಲೆಯ ಜನಪ್ರತಿನಿ ಧಿಗಳು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಆರಂಭಿಕ ಹಂತದಲ್ಲಿ 250 ಕೋಟಿ ರೂ. ನೀಡಬೇಕು. ತ್ವರತಿಗತಿಯಲ್ಲಿ ನಾಗರಿಕ ವಿಮಾನಯಾನ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಐಐಐಟಿಗೆ ಬೇಕು ಹಣ: ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಐಐಐಟಿ ಸಂಸ್ಥೆಗೆ 125 ಕೋಟಿ ರೂ. ಬೇಕಾಗಬಹುದು ಎಂದು ಶಿಕ್ಷಣ ಸಚಿವರೇ ತಿಳಿಸಿದ್ದಾರೆ. ಅದು ಕೇಂದ್ರ ಸರ್ಕಾರ ಸಹಭಾಗಿತ್ವದಡಿ ಸ್ಥಾಪಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ಕೂಡ
ಹಣ ನೀಡಬೇಕು. ಅದಕ್ಕೂ ಮುನ್ನ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಹಣ ಬಿಡುಗಡೆ ಮಾಡಬೇಕಿದೆ. ಈಗಾಗಲೇ ಸ್ಥಳ ನಿಗದಿ ಮಾಡಿದ್ದು ಕೆಲಸ ಕಾರ್ಯಗಳು ಶುರುವಾಗಿವೆ. ಕೆಕೆಆರ್‌ಡಿಬಿಯಿಂದ 2.50 ಕೋಟಿ ಪಡೆದು ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಥೆ ಆರಂಭಿಸಲಾಗುತ್ತಿದೆ.
ಬಗೆಹರಿಯದ ಒಪೆಕ್ ಸಮಸ್ಯೆ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಒಪೆಕ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸಮಸ್ಯೆ ಇಂದಿಗೂ ಇತ್ಯರ್ಥಗೊಂಡಿಲ್ಲ. ಒಂದೆಡೆ ನಿರ್ವಹಣೆ ಸಮಸ್ಯೆ ಕಾಡುತ್ತಿದ್ದರೆ ಮತ್ತೂಂದೆಡೆ ಆಡಳಿತಾತ್ಮಕ ಸಮಸ್ಯೆಗಳು ಇವೆ. ಒಪೆಕ್ ಸ್ವಾಯತ್ತ ಸಂಸ್ಥೆಯನ್ನಾಗಿಸಿ ವಿಶೇಷ ಅನುದಾನ ಘೋಷಿಸಿದರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮತ್ತೆ ಉತ್ತಮ ಸೇವೆ ನೀಡಬಹುದು.
ಮಹಾನಗರ ಪಾಲಿಕೆ: ರಾಯಚೂರು ನಗರಸಭೆ ವ್ಯಾಪ್ತಿ ವಿಸ್ತರಣೆಯಾಗುತ್ತಿದ್ದು, ಈಗ ಮಹಾನಗರ ಪಾಲಿಕೆ ರಚನೆ ಬೇಡಿಕೆ ಹೆಚ್ಚುತ್ತಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಕೂಡ ಸಿಎಂಗೆ ಬೇಡಿಕೆ ಸಲ್ಲಿಸಿದೆ. ಶಕ್ತಿನಗರ ಒಳಗೊಂಡಂತೆ ಮಹಾನಗರ ಪಾಲಿಕೆ ರಚಿಸಲು ಸರ್ಕಾರ ಮುಂದಾಗಬೇಕಿದೆ. ಅದರ ಜತೆಗೆ ಪ್ರತ್ಯೇಕ ವಿವಿ ಸ್ಥಾಪನೆಗೆ ವಿಶೇಷ ಅನುದಾನ, ಹೊಸ ತಾಲೂಕುಗಳಿಗೆ ಅನುದಾನದ ಕೊರತೆ ಇದ್ದರೆ, ಮತ್ತೆರಡು ತಾಲೂಕು ರಚನೆಗೆ ಬೇಡಿಕೆ ಇದೆ. ಹೊಸ ತಾಲೂಕುಗಳಿಗೆ ಸೂಕ್ತ ಸೌಲಭ್ಯ, ನಗರಕ್ಕೆ ರಿಂಗ್ ರಸ್ತೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತು ನೀಡಬೇಕಿದೆ.
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.