ತ್ರಿಪದಿಗಳಲ್ಲಿ ಮೌಲ್ಯ ಸಾರಿದ ಸರ್ವಜ್ಞ
ಜಾತಿ ರಹಿತ ಸಮಾಜ ನಿರ್ಮಿಸಲು ಶ್ರಮಿಸಿದ್ದ ಮಹಾನ್ ಸಂತಅಜ್ಞಾನ ಕಿತ್ತೆಸೆಯಲು ತ್ರಿಪದಿಗಳು ಪ್ರಸ್ತುತ
Team Udayavani, Feb 21, 2020, 12:01 PM IST
ರಾಯಚೂರು: ನಮ್ಮ ಆಚಾರ, ವಿಚಾರ, ನಡೆ ನುಡಿ ಹೇಗಿರಬೇಕು. ಜೀವನದಲ್ಲಿ ಹೇಗೆ ಬಾಳಬೇಕು ಎಂಬದನ್ನು ಕವಿ ಸರ್ವಜ್ಞರಿಗಿಂತ ಸುಂದರವಾಗಿ ಮತ್ಯಾರು ಹೇಳಿಲ್ಲ. ಅವರ ತ್ರಿಪದಿಗಳನ್ನು ಜೀವನದಲ್ಲಿ ತಪ್ಪದೇ ಪಾಲಿಸಿದಲ್ಲಿ ಉತ್ತಮ ನಾಗರಿಕರಾಗಿ ಬಾಳಬಹುದು ಎಂದು ಶಿಕ್ಷಕ ದಂಡಪ್ಪ ಬಿರಾದಾರ ಅಭಿಪ್ರಾಯಪಟ್ಟರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾಜದಲ್ಲಿರುವ ಸರ್ವ ವಿಚಾರಗಳನ್ನು ತಮ್ಮ ತ್ರಿಪದಿಗಳಲ್ಲಿ ಸಾರಿದ ಕವಿ ಸರ್ವಜ್ಞರು ಮಹಾತ್ ಚೇತನರು. ಜಾತೀಯತೆ, ಮೌಡ್ಯ, ಕಂದಾಚಾರ, ಅಜ್ಞಾನದ ಬೇರುಗಳನ್ನು ಕಿತ್ತೆಸೆಯಲು ಅವರ ತ್ರಿಪದಿಗಳು ಇಂದಿಗೂ ಪ್ರಸ್ತುತ. ಸ್ತ್ರೀಯರ ಮಹತ್ವ, ಗುರು-ಹಿರಿಯರ ಬಾಂಧವ್ಯ, ಒಳ್ಳೆಯ ವ್ಯಕ್ತಿತ್ವ, ಮಕ್ಕಳು ಮತ್ತು ಪಾಲಕರ ನಡುವೆ ಇರಬೇಕಾದ ಒಡನಾಟ, ಜ್ಞಾನ-ಅಜ್ಞಾನ ಹೀಗೆ ಪ್ರತಿ ವಿಚಾರದ ಬಗ್ಗೆಯೂ ಅವರು ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಸಂತ ಕವಿ ಸರ್ವಜ್ಞ ಅವರು ಹಾವೇರಿ ಜಿಲ್ಲೆ ಹಿರೇಕೇರೂರು ತಾಲೂಕು ಮಾಸೂರಿನಲ್ಲಿ ಜನಿಸಿದರು. ತ್ರಿಪದಿಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು. ಜಾತಿರಹಿತ ಸಮಾಜ ನಿರ್ಮಿಸಲು ಶ್ರಮಿಸಿದರು ಎಂದು ಹೇಳಿದರು. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಮಾತ್ರ ಒಂದು ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ ಮಾತನಾಡಿ, ಕುಂಬಾರ ಸಮಾಜದಲ್ಲಿ ಸಂಘಟನೆ ಕೊರತೆ ಇದೆ ಎನ್ನಲಿಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಹಿಂದೆ ಈ ಸಭಾಂಗಣ ತುಂಬಿರುತ್ತಿತ್ತು. ಈಗ ಬೆರಳೆಣಿಕೆ ಜನರು ಕಾಣುತ್ತಿದ್ದೀರಿ. ಇದೇ ಕಾರಣಕ್ಕೆ ಹಿರಿಯ ರಾಜಕಾರಣಿಗಳ ನಿಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮೊದಲು ನಿಮ್ಮ ಸಮಾಜದ ಬಲವನ್ನು ಸಮಾಜಕ್ಕೆ ತೋರಿಸಬೇಕು. ಇಂಥ ಅಪರೂಪದ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲ ಜನರು ಭಾಗಿಯಾಗಬೇಕು ಎಂದು ಹೇಳಿದರು.
ಕುಂಬಾರ ಸಮಾಜದ ಹೈದರಾಬಾದ್ ಕರ್ನಾಟಕ ವಿಭಾಗದ ಅಧ್ಯಕ್ಷ ಸುರೇಂದ್ರ ಬಾಬು ಮಾತನಾಡಿ, ಸರ್ಕಾರ ಒದಗಿಸುವ ಸೌಲಭ್ಯ ಸದ್ಬಳಕೆ ಆಗಬೇಕು. ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ನೀಡಬೇಕು. ಏನೆ ಸಮಸ್ಯೆಗಳಿದ್ದರೂ ಸಮಾಜದ ನೆರವು ಪಡೆಯಬೇಕು ಎಂದು ಹೇಳಿದರು.
ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಕುಂಬಾರ ಸಮಾಜಧ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವರಾಜ ವಡ್ಲೂರು, ಉಪಾಧ್ಯಕ್ಷ ಬಸವರಾಜ ಮಾಡಗಿರಿ, ರಾಯಚೂರು ತಾಲೂಕು ಅಧ್ಯಕ್ಷ ಭೀಮಪ್ಪ ಮಟಮಾರಿ, ಮುಖಂಡರಾದ ನರಸಿಂಹಲು, ರಾಯಪ್ಪ, ನರಸಪ್ಪ ಇದ್ದರು. ಇದಕ್ಕೂ ಮುನ್ನ ನಗರದಲ್ಲಿ ಸರ್ವಜ್ಞರ ಭಾವಚಿತ್ರ ಮೆರವಣೆಗೆ ನಡೆಸಲಾಯಿತು. ಬಸವೇಶ್ವರ ವೃತ್ತದ ಬಳಿ ಭಾವಚಿತ್ರಕ್ಕೆ ಗಣ್ಯರು ಪೂಜೆ ಹಾಗೂ ಮಾಲಾರ್ಪಣೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ಬಿ. ನಾಯಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ರಂಗಮಂದಿರವರೆಗೂ ಮೆರವಣಿಗೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.