ಕಸಾಪದಿಂದ ಆನ್‌ಲೈನ್ ಕವಿಗೋಷಿ!
Team Udayavani, May 25, 2020, 12:11 PM IST
ರಾಯಚೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ರವಿವಾರ ಆನ್‌ಲೈನ್ ಕವಿಗೋಷ್ಠಿ ನಡೆಯಿತು.
ರಾಯಚೂರು: ಕೋವಿಡ್ ಲಾಕ್‌ಡೌನ್‌ನಿಂದ ಎಲ್ಲೆಡೆ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದರೆ; ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಕೂಡ ಆನ್ ಲೈನ್ ಕವಿಗೋಷ್ಠಿ ನಡೆಸುವ ಮೂಲಕ ಗಮನ ಸೆಳೆಯಿತು.
ರವಿವಾರ ಸಂಜೆ ಜೂಮ್ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಕವಿಗೋಷ್ಠಿ ನಡೆಸಲಾಯಿತು. ಕಸಾಪ ಸದಸ್ಯರಿಗೆ, ಕವಿಗಳಿಗೆ ಹಾಗೂ ಕಾವ್ಯಾಸಕ್ತರಿಗೆ ಜೂಮ್ ಅಪ್ಲಿಕೇಶನ್ ಪಾಸ್‌ವರ್ಡ್ ನೀಡಲಾಗಿತ್ತು. ಅದರಂತೆ ಸಂಜೆ ಲಾಗಿನ್ ಆದ ಕಾವ್ಯಾ ಸಕ್ತರು ಆನ್‌ಲೈನ್‌ನಲ್ಲೇ ತಮ್ಮ ಕಾವ್ಯ ವಾಚಿಸಿದರೆ, ಉಳಿದವರು ಆಲಿಸಿದರು. ಕಾರ್ಯಕ್ರಮದ ಆನ್‌ಲೈನ್ ಸಂಯೋಜನೆಯನ್ನು ವಿಜಯರಾಜೇಂದ್ರ, ಡಾ| ಅರುಣಾ ಹಿರೇಮಠ ವಹಿಸಿಕೊಂಡಿದ್ದರು. ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲೆಡೆ ಕೋವಿಡ್ ವೈರಸ್ ಭೀತಿ ಆವರಿಸಿದ್ದು, ರೋಗದಿಂದ ಮುಕ್ತರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಕಸಾಪ ಇಂಥ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕಾಲಕ್ಕೆ ತಕ್ಕಂತೆ ಸಾಹಿತಿಗಳು ಬದಲಾಗಬೇಕಿದೆ ಎಂದರು.
ಗೋಷ್ಠಿಯಲ್ಲಿ ರಾಮಣ್ಣ ಬೋಯೆರ್, ವಿ.ಹರಿನಾಥ ಬಾಬು, ಸುಖಲತಾ ಡೇವಿಡ್, ಕೋರೆನಲ್, ಮಹಾದೇವ ಎಸ್. ಪಾಟೀಲ, ಈರಣ್ಣ ಬೆಂಗಾಲಿ ಕಾವ್ಯ ವಾಚನ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿ ಈ ಪ್ರಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 28 ಜನ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.