ಕಾಲ್ನಡಿಗೆಯಲ್ಲೇ ತವರಿನತ್ತ ಕಾರ್ಮಿಕರು
Team Udayavani, May 15, 2020, 3:58 PM IST
ರಾಯಚೂರು: ಗುಳೆ ಬಂದಿದ್ದ ಮಧ್ಯಪ್ರದೇಶ ಮೂಲದ ಕಾರ್ಮಿಕ ಕುಟುಂಬಗಳು ತಮ್ಮೂರಿನತ್ತ ಪಾದಯಾತ್ರೆ ಮೂಲಕ ತೆರಳಿದರು.
ರಾಯಚೂರು: ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಗುಳೆ ಬಂದಿದ್ದ ಮಧ್ಯ ಪ್ರದೇಶದ ಅನೇಕ ಕಾರ್ಮಿಕರು ಸರಕು ಸರಂಜಾಮು ಸಮೇತ ತಮ್ಮೂರಿಗೆ ತೆರಳುತ್ತಿದ್ದು, ಅವರನ್ನು ಶಕ್ತಿನಗರ ಬಳಿ ಅಧಿಕಾರಿಗಳು ತಡೆದ ಪ್ರಕರಣ ಬುಧವಾರ ನಡೆದಿದೆ.
ಗಂಟು ಮೂಟೆಗಳ ಸಮೇತ ಪ್ರಯಾಣ ಆರಂಭಿಸಿದರು. ಇಷ್ಟು ದಿನಗಳ ಕಾಲ ಇಲ್ಲಿಯೇ ಉಳಿದಿದ್ದ ಈ ಕಾರ್ಮಿಕರಿಗೆ ಕೆಲಸವಿಲ್ಲದ ಕಾರಣ ಕುಟುಂಬ ನಿರ್ವಹಣೆ ಕೂಡ ಕಷ್ಟವಾಗುತ್ತಿದೆ. ಇದರಿಂದ ಅಂತಾರಾಜ್ಯಗಳಿಗೆ ಹೋಗಲು ಸರ್ಕಾರ ಅವಕಾಶ ನೀಡಿದೆ ಎಂಬ ಮಾಹಿತಿ ಆಧರಿಸಿ ಪಾದಯಾತ್ರೆ ಮೂಲಕ ತೆರಳಿದರು. ರಾಯಚೂರಿನಿಂದ ಹೈದರಾಬಾದ್ ಮುಖ್ಯರಸ್ತೆ ಮೂಲಕ ಸುಮಾರು 50-60ಕ್ಕೂ ಹೆಚ್ಚು ಜನ ಮಕ್ಕಳ ಸಮೇತರಾಗಿ ಪ್ರಯಾಣ ಬೆಳೆಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಶಕ್ತಿನಗರ ಬಳಿ ಅಧಿಕಾರಿಗಳು ವಿಚಾರಣೆ ನಡೆಸಿ ತಡೆದಿದ್ದಾರೆ. ಅಲ್ಲಿಯೇ ತಂಗಲು ವ್ಯವಸ್ಥೆ ಮಾಡಿದ್ದು, ರೈಲು ಸೇವೆ ಆರಂಭವಾಗುತ್ತಿದ್ದು, ನಿಮ್ಮೂರಿಗೆ ತೆರಳಲು ಅವಕಾಶ ಮಾಡಿಕೊಡಲಾಗುವುದು ಎಂದು ಮನವರಿಕೆ ಮಾಡಿಕೊಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.