ಪ್ರವಾಹದ ಹೊಡೆತಕ್ಕೆ ಮಕಾಡೆ ಮಲಗಿದ ಬೆಳೆ
Team Udayavani, Aug 15, 2021, 2:47 PM IST
ದೇವದುರ್ಗ: ನಾರಾಯಣಪುರ ಜಲಾಶಯದಿಂದಕೃಷ್ಣಾನದಿಗೆ 4.17 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ 30ಕ್ಕೂ ಅ ಧಿಕಗ್ರಾಮಗಳಲ್ಲಿ ಬೆಳೆದಿದ್ದ 1280.5 ಹೆಕ್ಟೇರ್ ಭತ್ತ, 876.5ಹೆಕ್ಟೇರ್ ಹತ್ತಿ, 154 ಹೆಕ್ಟೇರ್ ತೊಗರಿ, 34.5 ಹೆಕ್ಟೇರ್‌ಸಜ್ಜೆ, 5 ಹೆಕ್ಟೇರ್ ಸೂರ್ಯಕಾಂತಿ, 2 ಹೆಕ್ಟೇರ್ ಎಳ್ಳು ಸೇರಿಒಟ್ಟು 2352.5 ಹೆಕ್ಟೇರ್ ಹಾನಿಯಾಗಿದೆ.
ಯಾವ ಹಳ್ಳಿಗಳಲ್ಲಿ ನಷ್ಟ?: ಕೃಷ್ಣಾ ನದಿ ಪ್ರವಾಹಕ್ಕೆಕೊಪ್ಪರು, ಕುರ್ಕಿಹಳ್ಳಿ, ಪರ್ತಾಪುರು, ಯಾಟಗಲ್,ಅರಿಷಣಿಗಿ, ಹೂನ್ನೂರು, ಹೇರೂರು, ಅಂಜಳ,ಅಂಚೆಸುಗೂರು, ಗೋಪಾಳಪುರು, ನಿಲವಂಜಿ,ಹಿರೇರಾಯಕುಂಪಿ, ಮದರಕಲ್, ಹೇರುಂಡಿ,ಬಾಗೂರು, ಚಿಂಚೋಡಿ, ವೀರಗೋಟ, ಲಿಂಗದಹಳ್ಳಿ,ಅಪ್ರಾಳ, ಬಸವಂತಪೂರು, ಗಲಗ ಸೇರಿದಂತೆ ಇತರೆನದಿ ತೀರದ ಗ್ರಾಮಗಳಲ್ಲಿ ಬೆಳೆದ ಬೆಳೆ ನಷ್ಟವಾಗಿದೆ.
ಜೆಸ್ಕಾಂಗೂ ಲಕ್ಷಾಂತರ ನಷ್ಟ: ಕೃಷ್ಣಾ ನದಿ ತೀರದಕಂಬಗಳು ಬಿದ್ದಿವೆ. ವಿದ್ಯುತ್ ಪರಿವರ್ತಕಗಳಿಗೆ ನೀರುನುಗ್ಗಿದೆ. ಇದರಿಂದ ಮೂರು ಟಿಸಿಗಳಿಗೂ ಹೆಚ್ಚುಹಾನಿಯಾಗಿವೆ. 12ಕ್ಕೂ ಅಧಿ ಕ ವಿದ್ಯುತ್ ಕಂಬಗಳುನೆಲಕ್ಕುರುಳಿವೆ.
ಪರಿಹಾರ ಘೋಷಣೆ: ಕಂದಾಯ-ಕೃಷಿ ಅಧಿ ಕಾರಿಗಳುಜಂಟಿ ಸಮೀಕ್ಷೆ ನಡೆಸಿದ್ದು,ಎನ್‌ಡಿಆರ್‌ಎಫ್‌ಮಾರ್ಗಸೂಚಿಯಂತೆ ಮಳೆಯಾಶ್ರಿತ ಪ್ರದೇಶದಲ್ಲಿ ಪತ್ರಿಹೆಕ್ಟೇರ್‌ಗೆ 6,800 ರೂ. ಪರಿಹಾರ ನಿಗದಿಪಡಿಸಲಾಗಿದೆ.ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ 13,500 ರೂ.ಪರಿಹಾರ ಘೋಷಿಸಲಾಗಿದೆ.
ವಿಳಂಬ ಬೇಡ: ಕೊರೊನಾ ಆರ್ಥಿಕ ಸಂಕಷ್ಟದಮಧ್ಯೆ ಹೈರಾಣಾದ ರೈತರಿಗೆ ಇದೀಗ ಬೆಳೆ ನಷ್ಟ ಜೀವಹಿಂಡಿದೆ. ಬೆಳೆನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿಗೆ ಅಲೆಯುವುದನ್ನು ಜಿಲ್ಲಾಡಳಿತಮತ್ತು ತಾಲೂಕಾಡಳಿತ ತಪ್ಪಿಸಬೇಕಿದೆ.
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.