ಶಾಸಕ ಪಾಟೀಲ್ ಅಹಂಕಾರ ಬಿಟ್ಟು ಕ್ಷಮೆಯಾಚಿಸಲಿ
Team Udayavani, Oct 17, 2021, 3:06 PM IST
ರಾಯಚೂರು: ಜನಸೇವೆ ಮಾಡಬೇಕಿದ್ದಶಾಸಕ ಡಾ| ಶಿವರಾಜ್ ಪಾಟೀಲ್ ನಾನುರಾಯಚೂರಿನ ಬಾದಶಾ ಎನ್ನುವ ಅಹಂಕಾರದಮಾತುಗಳನ್ನಾಡಿ ಮತದಾರರಿಗೆ ಅಪಮಾನಮಾಡಿದ್ದಾರೆ.
ಮೂರು ದಿನದೊಳಗೆ ಅವರುಜನತೆಯ ಕ್ಷಮೆಯಾಚಿಸಬೇಕು ಎಂದುಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಬಸವರಾಜ ಕಳಸ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜನನಾಯಕರಾದವರು ಅರಸೊತ್ತಿಗೆಮಾತನ್ನಾಡುವುದು ಸರಿಯಲ್ಲ.
ಪ್ರಜೆಗಳಸೇವೆ ಮಾಡುವ ಮುನ್ನ ಜವಾಬ್ದಾರಿಯಿಂದನಡೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿಬಹಿರಂಗವಾಗಿ “ನಾನು ರಾಯಚೂರಿನಬಾದಶಾ’ ಎಂದು ಹೇಳುವ ಮೂಲಕ ಜನರಿಗೆಅಪಮಾನ ಮಾಡಿದ್ದಾರೆ. ಶಿಸ್ತಿನ ಪಕ್ಷ ಎನ್ನುವಬಿಜೆಪಿ ಇದನ್ನೆಲ್ಲ ಗಮನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ಇದೇ ಮೊದಲಲ್ಲ ಏಮ್ಸ್ ಹೋರಾಟದವಿಚಾರದಲ್ಲಿಯೂ ಅವರು ಹೋರಾಟಗಾರರಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ.ಏಕವಚನದಲ್ಲಿ ಹೋಗು ಬಾ ಎಂದು ಬಹಳಅಗೌರವದಿಂದ ನಡೆದುಕೊಂಡಿದ್ದಾರೆ. ಪ್ರಧಾನಿನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರೇ ನಾವು ಸಾಮಾನ್ಯವ್ಯಕ್ತಿಗಳು ಎಂದು ಹೇಳಿಕೊಳ್ಳುವಾಗ ಶಾಸಕಪಾಟೀಲ್ ನಾನೊಬ್ಬ ಬಾದಶಾ ಎನ್ನುವುದುಖಂಡನೀಯ ಎಂದು ದೂರಿದರು.
ರಾಯಚೂರು ಈವರೆಗೆ ಅನೇಕಶಾಸಕರನ್ನು, ಮಂತ್ರಿಗಳನ್ನು ಕಂಡಿದೆ. ಆದರೆ,ಯಾರು ಕೂಡ ಈ ರೀತಿ ಅತಿರೇಕದವರ್ತನೆಯಾಗಲಿ, ಮಿತಿಮೀರಿದಹೇಳಿಕೆಗಳನ್ನಾಗಲಿ ನೀಡಿಲ್ಲ. ಮೂರುದಿನದೊಳಗೆ ಅವರು ಕ್ಷಮೆಯಾಚಿಸದಿದ್ದರೆಈ ಕುರಿತು ಬಿಜೆಪಿ ಶಿಸ್ತು ಸಮಿತಿಗೆ ದೂರುನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಯಚೂರು ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎಂದುತೆಲಂಗಾಣಕ್ಕೆ ಸೇರಿಸಿ ಎನ್ನುವುದಲ್ಲ. ಅವರುತಮ್ಮ ಆಕ್ರೋಶವನ್ನು ಸದನದಲ್ಲಿ ತೋರಿಸಲಿ.ಎಂದಾದರೂ ಈ ಬಗ್ಗೆ ಮಾತನಾಡಿದ್ದಾರಾ.ಜಿಲ್ಲೆಗೆ ಬಂದ ಸಚಿವರ ಎದುರು ಪ್ರಾಬಲ್ಯತೋರಲು ಬೇಕಾಬಿಟ್ಟಿ ಹೇಳಿಕೆ ನೀಡುವುದಲ್ಲ.ಏಮ್ಸ್ ವಿಚಾರದಲ್ಲಿ ಎಂದಾದರೂ ಹೇಳಿಕೆನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.ಕರವೇ (ಶಿವರಾಮಗೌಡ ಬಣ)ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್‌ಮಾತನಾಡಿ, ರಾಯಚೂರನ್ನು ತೆಲಂಗಾಣಕ್ಕೆಸೇರಿಸುವುದಾಗಿ ಹೇಳುವ ಶಾಸಕರಿಗೆ ನೈತಿಕತೆಇದೆಯೇ. ಯಾರಪ್ಪನ ಸ್ವತ್ತು ಎಂದು ಇವರುಆ ರೀತಿ ಹೇಳಿಕೆ ನೀಡುತ್ತಾರೆ.
ಅಭಿವೃದ್ಧಿ ಬಗ್ಗೆಮಾತನಾಡುವವರು ಸದನದಲ್ಲಿ ಮಾತನಾಡಲಿ.ಇಲ್ಲಿ ಜನರ ಎದುರು ಶೋಕಿಗಾಗಿಹೇಳುವುದಲ್ಲ. ಕನ್ನಡ ನಾಡು, ನುಡಿ, ಜಲಕ್ಕಾಗಿಕನ್ನಡಪರ ಸಂಘಟನೆಗಳು ಜೀವ ಪಣಕ್ಕಿಟ್ಟುಹೋರಾಟ ಮಾಡಿದರೆ, ಇವರು ಮನಸಿಗೆಬಂದಂತೆ ಮಾತನಾಡುವುದು ಸರಿಯಲ್ಲ.ಶಾಸಕರು ತಮ್ಮ ಹೇಳಿಕೆ ಹಿಂಪಡೆದು ಜನರಕ್ಷಮೆಯಾಚಿಸಲಿ ಎಂದರು.ಸಂಘಟನೆ ಮುಖಂಡರಾದ ಶರಣಪ್ಪಅಸ್ಕಿಹಾಳ, ರಾಜಶೇಖರ ಮಾಚರ್ಲಾ,ಮಹ್ಮದ್ ಮಾಸೂಮ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.