ಸಿಂಧನೂರು ಕ್ಷೇತ್ರದಲ್ಲಿ “ಎನ್‌ಸಿಪಿ’ ಕಸರತ್ತು ಶುರು
Team Udayavani, Oct 20, 2021, 3:06 PM IST
ಸಿಂಧನೂರು: ಕಾಂಗ್ರೆಸ್, ಜೆಡಿಎಸ್, ಬಿಜೆಪಿಮುಖಂಡರ ಸದ್ದನ್ನೇ ಕೇಳುತ್ತಿದ್ದ ಕ್ಷೇತ್ರದಲ್ಲಿ ಈಗನ್ಯಾಷಲಿಷ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಅಭ್ಯರ್ಥಿಯ ಹಂಗಾಮ ಚರ್ಚೆ ಧೂಳೆಬ್ಬಿಸಿದೆ.ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿರುವ ಹರೀಶ್ ಕಳೆದ ಒಂದೂವರೆ ತಿಂಗಳಿಂದ ಕ್ಷೇತ್ರದಲ್ಲಿಪರ್ಯಟನೆ ಆರಂಭಿಸಿದ್ದಾರೆ.
ರಾಜ್ಯದ ಎಲ್ಲಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿಹೇಳಿಕೊಂಡಿರುವ ರಾಜ್ಯಾಧ್ಯಕ್ಷರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಸಿಂಧನೂರನ್ನು ಆಯ್ಕೆ ಮಾಡಿಕೊಂಡಬೆಳವಣಿಗೆ ಕುತೂಹಲ ಮೂಡಿಸಿದೆ.ಮೂರ್ತಿ ಪ್ರತಿಷ್ಠಾನೆಗೆ ನೆರವು: ಸ್ವಾರಸ್ಯ ಎಂದರೆ,ಎನ್‌ಸಿಪಿ ರಾಜ್ಯಾಧ್ಯಕ್ಷ ಹರೀಶ್ ಕಳೆದ ಒಂದೂವರೆತಿಂಗಳಿಂದ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದರೂ ಬಹುತೇಕ ಕಡೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ಜನರೇಚರ್ಚಿಸಬೇಕಾದ ರೀತಿಯಲ್ಲಿ ಪೂರಕ ವೇದಿಕೆರೂಪಿಸಿಕೊಳ್ಳತೊಡಗಿದ್ದಾರೆ. ಮಲ್ಕಾಪುರ ಗ್ರಾಮದಲ್ಲಿಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ,ಸುಲ್ತಾನಪುರದಲ್ಲಿ ವಾಲ್ಮೀಕಿ ವೃತ್ತ ಸ್ಥಾಪನೆಗೆ ನೆರವು ನೀಡಿದ್ದಾರೆ.
ಹುಡಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆಸಾಮೂಹಿಕ ಮದುವೆಗಳಿಗೆ ನೆರವು ಕೇಳಿದಾಗಲೂಒಪ್ಪಿಗೆ ಸೂಚಿಸಿದ್ದಾರೆ.ಹೆಚ್ಚಿದ ಕುತೂಹಲ: ಎನ್‌ಸಿಪಿ ವರಿಷ್ಠ ಶರದ್‌ಪವಾರ್ ಸೂಚನೆ ಮೇರೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆಮಾಡುತ್ತಿರುವುದಾಗಿ ಹೇಳುತ್ತಿರುವ ಹರೀಶ್ ಅವರುಕುರುಬ ಸಮುದಾಯದವರು.
ಸಾಮಾನ್ಯ ವರ್ಗಕ್ಕೆಮೀಸಲಾದ ಕ್ಷೇತ್ರದಲ್ಲಿ ಕುರುಬ ಸಮುದಾಯವೂಹೆಚ್ಚಿನ ಸಂಖ್ಯೆಯಿದೆ. ಇದೇ ಲೆಕ್ಕಾಚಾರದ ಮೇಲೆಈಗಿನಿಂದಲೇ ಮುಂದಿನ 2023 ವಿಧಾನಸಭೆಚುನಾವಣೆಗೆ ಪ್ರಚಾರ ಆರಂಭಿಸಿದ್ದಾರೆ.
ತಾಲೂಕಿನಸುಲ್ತಾನಪುರ, ಮಲ್ಕಾಪುರ, ಸೋಮಲಾಪುರ,ಹುಡಾ, ಸಾಲಗುಂದಾ, ಉಪ್ಪಳ, ಚನ್ನಳ್ಳಿ, ಸಿದ್ರಾಂಪುರಸೇರಿ ಹಲವು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.
ಲೆಕ್ಕಾಚಾರ ಕ್ಲಿಷ್ಟ: ಕಾಂಗ್ರೆಸ್, ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಗಳೇ ಕ್ಷೇತ್ರದಲ್ಲಿ ಕಣಕ್ಕಿಳಿಯುವುದುಬಹುತೇಕ ನಿಶ್ಚಿತ. ಇನ್ನು ಬಿಜೆಪಿಯಿಂದಲೂಬಲಿಷ್ಠರನ್ನು ಅಖಾಡಕ್ಕಿಳಿಸುವ ಲೆಕ್ಕಾಚಾರ ನಡೆದಿದೆ.
ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಅಭ್ಯರ್ಥಿ ಎನ್‌ಸಿಪಿ ಅಭ್ಯರ್ಥಿಯೆಂದು ಗುರುತಿಸಿಕೊಂಡು ಪ್ರಚಾರಆರಂಭಿಸಿರುವುದು ಅಚ್ಚರಿಗೆ ಕಾರಣವಾಗಿದೆ.ಈಗಾಗಲೇ ಹಲವು ಅಭ್ಯರ್ಥಿಗಳು ಮಸ್ಕಿ ಉಪಚುನಾವಣೆ ಪ್ರಭಾವ ಎಂಬಂತೆ ಎಲೆಕ್ಷನ್ ಮೂಡ್‌ನಲ್ಲಿ ಇದ್ದಾರೆ. ಇಂತಹ ಹೊತ್ತಿನಲ್ಲಿ ಅನಿರೀಕ್ಷಿತ ಎನ್‌ಸಿಪಿಅಭ್ಯರ್ಥಿ ಎಂಟ್ರಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.