ಮಳಿಗೆ ದುರಸ್ತಿ, ಮರು ಹರಾಜಿನತ್ತ ನಗರಸಭೆ ಚಿತ್ತ
Team Udayavani, Oct 20, 2021, 3:10 PM IST
ರಾಯಚೂರು: ಬಹುವರ್ಷಗಳಿಂದ ನನೆಗುದಿಗೆ ಬಿದ್ದನಗರಸಭೆ ಮಳಿಗೆಗಳ ಪುನರುಜ್ಜೀವನ ಕಾರ್ಯಕ್ಕೆ ಕೊನೆಗೆಕಾಲ ಸನ್ನಿಹಿತವಾದಂತಾಗಿದೆ. ಕೆಲವೊಂದು ಮಳಿಗೆಗಳದುರಸ್ತಿ ಕಾರ್ಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿದ್ದರೆ; ಅನೇಕಮಳಿಗೆಗಳನ್ನು ಖಾಲಿ ಮಾಡಿಸಿ ಮರು ಟೆಂಡರ್‌ನಡೆಸುವತ್ತ ನಗರಸಭೆ ಚಿತ್ತ ಹರಿಸಿದೆ.ನಗರಸಭೆ ಪ್ರತಿ ಸಾಮಾನ್ಯ ಸಭೆಯಲ್ಲೂ ಮಳಿಗೆಗಳವಿಚಾರ ಪ್ರಸ್ತಾಪವಾಗುತ್ತಲೇ ಇರುತ್ತದೆ.
ಮಳಿಗೆಗಳಿಂದನಿರೀಕ್ಷಿತ ಆದಾಯ ಬರುತ್ತಿಲ್ಲ. ನಿರ್ವಹಣೆ ಕೊರತೆಇದ್ದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ ಎಂಬಿತ್ಯಾದಿವಿಚಾರ ಚರ್ಚೆ ಆಗುತ್ತಲೇ ಇದ್ದವು. ಸುಮಾರು294ಕ್ಕೂ ಅ ಧಿಕ ಮಳಿಗೆಗಳಿದ್ದರೆ, ನಗರಸಭೆ ಪ್ರತಿತಿಂಗಳು ಕೇವಲ 90 ಸಾವಿರದ ಆಸುಪಾಸುಬಾಡಿಗೆ ಹಣ ಬರುತ್ತಿದೆ.
ಈ ಹಿಂದೆ ಅತಿ ಕಡಿಮೆದರಕ್ಕೆ ಬಾಡಿಗೆ ನೀಡಿದ್ದು, ಇಂದಿಗೂ ಅದೇ ಬಾಡಿಗೆಮುಂದುವರಿದಿದೆ. ಕೆಲವೊಂದು ಮಳಿಗೆ ಯಾರೋಕಡಿಮೆ ದರಕ್ಕೆ ಬಾಡಿಗೆ ಪಡೆದು ದುಬಾರಿ ಹಣಕ್ಕೆಮತ್ತೂಬ್ಬರಿಗೆ ಬಾಡಿಗೆ ನೀಡಿದ ನಿದರ್ಶನಗಳುಇವೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ನಷ್ಟಎದುರಿಸುವಂತಾಗಿತ್ತು.ಅಲ್ಲದೇ, ಮಳಿಗೆಗಳ ವಿಚಾರಕ್ಕೆ ಕೆಲವರುನ್ಯಾಯಾಲಯ ಮೆಟ್ಟಿಲೇರಿದ್ದರ ಪರಿಣಾಮ ಇಷ್ಟುದಿನ ಯಾವುದೇ ಚಟುವಟಿಕೆಗಳು ನಡೆಸಲುಆಗಿರಲಿಲ್ಲ.
ಈಗ ನ್ಯಾಯಾಲಯದಲ್ಲಿದ್ದ ಪ್ರಕರಣಗಳುಇತ್ಯರ್ಥಗೊಂಡಿದ್ದು, ಶೀಘ್ರದಲ್ಲೇ ಮಳಿಗೆಗಳಪುನರುಜ್ಜೀವನ ಕಾರ್ಯ ಕೈಗೊಳ್ಳುತ್ತೇವೆ ಎನ್ನುತ್ತಾರೆನಗರಸಭೆ ಅ ಧಿಕಾರಿಗಳು.
ವ್ಯಾಪಾರಿಗಳಿಗೆ ನೋಟಿಸ್ ಜಾರಿ: ನಗರಸಭೆಯಿಂದಈಗಾಗಲೇ ವ್ಯಾಪಾರಿಗಳಿಗೆ ನೋಟಿಸ್ ಕೂಡಜಾರಿ ಮಾಡಲಾಗಿದೆ. ಪ್ರತಿ ವ್ಯಾಪಾರಿಗೆ ಏಳುನೋಟಿಸ್ ಜಾರಿ ಮಾಡಿದ್ದು, ಕಾನೂನಾತ್ಮಕ ಪ್ರಕ್ರಿಯೆಪೂರ್ಣಗೊಳಿಸಲಾಗಿದೆ. ಇನ್ನೇನಿದ್ದರೂ ನಗರಸಭೆಮಳಿಗೆಗಳನ್ನು ಸ್ವಾ ಧೀನಪಡಿಸಿಕೊಂಡು ಮರುಹರಾಜು ಹಾಕುವ ಕೆಲಸ ಬಾಕಿ ಇದೆ ಎನ್ನಲಾಗುತ್ತಿದೆ.
ಈಹಿಂದೆ ಕೂಡ ನೋಟಿಸ್ ಜಾರಿ ಮಾಡಿಯೇ ಹರಾಜುಮಾಡಲಾಗಿತ್ತು. ಆದರೆ, ಮಳಿಗೆಗಳನ್ನು ನಗರಸಭೆಕಾನೂನಾತ್ಮಕವಾಗಿ ಸ್ವಾ ಧೀನಪಡಿಸಿಕೊಂಡಿರಲಿಲ್ಲ.
ಇದರಿಂದ ವರ್ತಕರು ತಿರುಗಿಬಿದ್ದಿದ್ದರು. ಆದರೆ,ಈ ಬಾರಿ ನಗರಸಭೆ ಎಚ್ಚರಿಕೆ ಹೆಜ್ಜೆಯನ್ನಿಡುತ್ತಿದ್ದು,ವ್ಯಾಪಾರಸ್ಥರು ಯಾವುದೇ ರೀತಿಯಲ್ಲೂ ಹಿಡಿತ ಸಾಧಿಸಲು ಸಾಧ್ಯವಾಗದ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ.
ಮಳಿಗೆಗಳ ದುರಸ್ತಿಗೆ ಆದ್ಯತೆ: ನಗರಸಭೆಯಲ್ಲಿಸಾಕಷ್ಟು ಮಳಿಗೆಗಳಿದ್ದು, ಅದರಲ್ಲಿ 106 ಮಳಿಗೆಗಳುಸಾಕಷ್ಟು ಶಿಥಿಲಗೊಂಡಿವೆ. ಫ್ಲೋರಿಂಗ್ ವ್ಯವಸ್ಥೆಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಸೋರುವಹಂತದಲ್ಲಿವೆ.
ಅಲ್ಲದೇ, ವಿದ್ಯುತ್ ಸಂಪರ್ಕವೂಇಲ್ಲದಾಗಿದೆ. ಅವುಗಳ ದುರಸ್ತಿ ಬಗ್ಗೆ ನಗರಸಭೆಯಲ್ಲಿಚರ್ಚಿಸಿ ಅನುಮೋದನೆ ಕೂಡ ಪಡೆಯಲಾಗಿದೆ.ಆದರೆ, ನಗರಸಭೆ ಹಣಕಾಸಿನ ಅಭಾವ ಎದ್ದುಕಾಣುತ್ತಿದ್ದು, ದುರಸ್ತಿಗೆ ಹಣ ಹೊಂದಿಸುವುದೇಸವಾಲು ಎನ್ನಲಾಗುತ್ತಿದೆ. ಈಗ ಬರುವ ಬಾಡಿಗೆ ಹಣನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದು, ಹೆಚ್ಚುವರಿ ಹಣಹೊಂದಿಸಿ ದುರಸ್ತಿ ಕಾರ್ಯ ಮಾಡಬೇಕಿರುವ ಸವಾಲುನಗರಸಭೆ ಮುಂದಿದೆ.
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.