ರಿಯಲ್ ಎಸ್ಟೇಟ್ ಮೀರಿಸಿದ ಆರ್‌ಡಿಎ ದರ ನೀತಿ!
Team Udayavani, Apr 30, 2022, 5:04 PM IST
ರಾಯಚೂರು: ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರದ ಅಧೀನದಲ್ಲೇ ಕೆಲಸ ಮಾಡಿದರೂ ನಿವೇಶನ ಹಂಚಿಕೆಯಲ್ಲಿ ಮಾತ್ರ ರಿಯಲ್ ಎಸ್ಟೇಟ್ ಗಿಂತ ಅಧಿಕ ದರ ನಿಗದಿ ಮಾಡಿ ಜನಾಕ್ರೋಶಕ್ಕೆ ಗುರಿಯಾಗಿದೆ.
ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿ ಹೊಸ ಎನ್‌ಜಿಒ ಕಾಲೋನಿಯಲ್ಲಿ ಶುಕ್ರವಾರ ಆರ್‌ಡಿಎಗೆ ಸಂಬಂಧಿಸಿದ 21 ನಿವೇಶನಗಳ ಹರಾಜು ಪ್ರಕ್ರಿಯೆ ನಡೆಯಿತು. ಜನ ತಮ್ಮ ನಿವೇಶನಗಳಿಗೆ ತೆರಿಗೆ ಕಟ್ಟಿದಾಗ ನೋಂದಣಿ ಕಚೇರಿಯಲ್ಲಿ ಅದರ ಮೌಲ್ಯ ಕಡಿಮೆಯೇ ತೋರಿಸಲಾಗುತ್ತಿದೆ. ಆದರೆ, ಹೊರಗೆ ಮೌಲ್ಯಕ್ಕಿಂತ ದುಪ್ಪಟ್ಟು ದರ ಇರುತ್ತದೆ. ಆರ್‌ಡಿಎ ನಿವೇಶನಗಳಿಗೆ ಮಾತ್ರ ಹರಾಜು ಕೂಗುವಾಗಲೇ ಬೇಕಾಬಿಟ್ಟಿ ದರ ನಿಗದಿ ಮಾಡಿರುವುದು ಅಚ್ಚರಿ ಮೂಡಿಸಿತು.
ಈ ಹಿಂದೆ ಹರಾಜು ಪ್ರಕ್ರಿಯೆ ಆಧರಿಸಿ ಸರಳ ಬಡ್ಡಿ ರೀತಿಯಲ್ಲಿ ದರ ನಿಗದಿ ಮಾಡಿದ್ದಾಗಿ ಆರ್ ಡಿಎ ಅಧಿಕಾರಿಗಳು ತಿಳಿಸುತ್ತಾರೆ. ಚದರ ಮೀಟರ್ ಗೆ 6400 ರೂ. ಅಂದರೆ ಚದರ ಅಡಿ ಸ್ಥಳಕ್ಕೆ 595 ರೂ. ನಿಗದಿ ಮಾಡಲಾಗಿದೆ. 30*40 ಅಳತೆಯ ನಿವೇಶನಗಳು ಆರ್‌ಡಿಎ ದರದನ್ವಯ ಏಳರಿಂದ ಎಂಟು ಲಕ್ಷ ರೂ. ನಿಗದಿ ಮಾಡಲಾಗಿತ್ತು. ಆರ್‌ಡಿಎ ನೀಡಿದ ಪ್ರಕಟಣೆಯನ್ವಯ ಸುಮಾರು 171 ಜನ 10 ಸಾವಿರ ರೂ. ಶುಲ್ಕ ಭರ್ತಿ ಮಾಡಿ ಹರಾಜಿನಲ್ಲಿ ಭಾಗಿಯಾಗಿದ್ದರು. ಆದರೆ, ಇಲ್ಲಿ ನಿವೇಶನಗಳ ಬೆಲೆ ಏರಿಕೆ ಕಂಡು ಬಹುತೇಕರು ಅರ್ಧಕ್ಕೆ ಮರಳಿ ಹೋದರು.
ಬಡವರಿಗಲ್ಲದ ಹರಾಜು
ಕಡಿಮೆ ದರದಲ್ಲಿ ನಿವೇಶನ ಸಿಕ್ಕರೆ ಮನೆ ಕಟ್ಟಿಕೊಳ್ಳಬೇಕು ಎಂಬ ಕನಸು ಕಟ್ಟಿಕೊಂಡ ಬಡ, ಮಧ್ಯಮ ವರ್ಗದ ಜನರಿಗೆ ಇಲ್ಲಿ ಅವಕಾಶ ಇಲ್ಲದಂತಿತ್ತು. ಬಿಡ್‌ದಾರರರು ಪ್ರತಿ ಬಾರಿ ಕೇವಲ 10 ಸಾವಿರ ರೂ. ಮಾತ್ರ ಹೆಚ್ಚಿಸಬೇಕು ಎಂದು ಷರತ್ತು ವಿಧಿಸಿದರೂ ಭಾಗಿಯಾಗಿದ್ದ ಜನ ಲಕ್ಷಗಟ್ಟಲೇ ಹೆಚ್ಚಿಸುತ್ತಿದ್ದರು. ಇದರಿಂದ 168 ಚದರ ಅಡಿಯ ನಿವೇಶನ 19.10 ಲಕ್ಷ ರೂ.ಗೆ ಮಾರಾಟವಾಯಿತು. ಕೆಲ ಬಿಡ್‌ದಾರರು ಏಕಾಏಕಿ ದರ ಹೆಚ್ಚಿಸುತ್ತಿರುವುದು ಉಳಿದವರಿಗೆ ಕಿರಿ ಕಿರಿಯಾಯಿತು. ಇದರಿಂದ ಕೆಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದರು. ಆದರೆ, ಅಧಿಕಾರಿಗಳು ಮಾತ್ರ ಸಾರ್ವಜನಿಕರೇ ದರ ಹೆಚ್ಚಿಸುತ್ತಿದ್ದಾರೆ. ನಾವೇನು ಮಾಡಲು ಆಗುವುದಿಲ್ಲ ಎಂದು ಕೈ ಚೆಲ್ಲಿ ಕುಳಿತರು.
ಆರ್‌ಡಿಎದಿಂದ ಹಿಂದೆ ಮಾಡಿದ ಹರಾಜು ಪ್ರಕ್ರಿಯೆ ಬಡ್ಡಿ ದರ ಅಂದಾಜು ಮಾಡಿ ಈ ಬಾರಿ ನಿವೇಶನಗಳ ಬೆಲೆ ನಿಗದಿ ಮಾಡಲಾಗಿದೆ. ಕಾರ್ನರ್ ನಿವೇಶನಗಳ ಬೆಲೆ ಮಾತ್ರ ಹೆಚ್ಚು ಮಾಡಲಾಗಿದೆ. ನಮಗೆ ಮುಂದಿನ ಯೋಜನೆ ಕೈಗೆತ್ತಿಕೊಳ್ಳಬೇಕಾದರೆ ಆದಾಯ ಬೇಕು. ಅದಕ್ಕೆ ಬೆಲೆ ಹೆಚ್ಚಿಸಲಾಗಿದೆ. ಹರಾಜಿನಲ್ಲಿ ಬೆಲೆ ಹೆಚ್ಚು ಕೂಗಿರುವುದು ಜನರೇ. ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ಆದರೆ, ಏಕಾಏಕಿ ಲಕ್ಷಗಟ್ಟಲೇ ಕೂಗಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ನಾವು ಏನು ಮಾಡಲಾಗುವುದಿಲ್ಲ. -ಜಯಪಾಲ್‌ರೆಡ್ಡಿ, ಆಯುಕ್ತರು, ಆರ್‌ಡಿಎ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.