ಯಾಂತ್ರಿಕ ಕೃಷಿಯಿಂದ ಖರ್ಚು ಕಡಿಮೆ

ಕೃಷಿ ತಂತ್ರಜ್ಞಾನ-ಯಂತ್ರೋಪಕರಣಗಳ ಪ್ರಾತ್ಯಕ್ಷಿತೆ ಮೇಳ

Team Udayavani, Mar 25, 2022, 3:18 PM IST

raichoor

ರಾಯಚೂರು: ಕೃಷಿಯಲ್ಲಿ ಕೆಲ ಯಂತ್ರಗಳು ಕ್ರಾಂತಿಯನ್ನೇ ಮಾಡಿದ್ದು, ರೈತಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಕೃಷಿ ಇನ್ನಷ್ಟು ಸರಳೀಕರಣಗೊಳಿಸಲು ಯಂತ್ರಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಎಂ.ಜಿ. ಪಾಟೀಲ ಅಭಿಪ್ರಾಯಪಟ್ಟರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ಕೃಷಿ ತಾಂತ್ರಿಕ ಕಾಲೇಜು ಹಾಗೂ ಅಖೀಲ ಭಾರತ ಸಮನ್ವಿತ ಸಂಶೋಧನೆ ಯೋಜನೆಗಳ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮೇಳ-2022 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾಂತ್ರಿಕ ಕೃಷಿ ವಿಶೇಷ ಸ್ಥಾನ ಹೊಂದಿದ್ದು, ರೈತರು ಯಂತ್ರಗಳ ಬಳಕೆಯಿಂದ ಖರ್ಚು ತಗ್ಗಿಸಬಹುದು.

ರೈತರ ಆದಾಯ ಇಮ್ಮಡಿಗೊಳಿಸುವ ಉದ್ದೇಶಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರಗಳು ಯೋಜನೆ ರೂಪಿಸುತ್ತಿವೆ. ಕೃಷಿಗೆ ತಗಲುವ ವೆಚ್ಚ ಕಡಿಮೆಗೊಳಿಸುವುದು ಲಾಭವಿದ್ದಂತೆ. ಉದಾಹರಣೆಗೆ ಟ್ರಾಕ್ಟರ್‌ ಕೃಷಿಯ ಭಾಗವಾದಂತಾಗಿದೆ. ಯುವಕರು ಯಾಂತ್ರಿಕ ಕೃಷಿಗೆ ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್‌. ಮಾತನಾಡಿ, ರೈತರಿಗೆ ಕೂಲಿ ಕಾರ್ಮಿಕರ ವೆಚ್ಚವೇ ಹೆಚ್ಚು ಹೊರೆಯಾಗುತ್ತಿದೆ.

ಈಗ ಸಾಕಷ್ಟು ಕೆಲಸಗಳಿಗೆ ಯಂತ್ರಗಳ ಆವಿಷ್ಕಾರ ಮಾಡಲಾಗಿದ್ದು, ರೈತರು ಸರಿಯಾಗಿ ಬಳಸಿಕೊಳ್ಳಬೇಕು. ಮಳೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಕ್ಕಿಂತ ಪೂರ್ವದಲ್ಲೇ ತಯಾರಿ ಮಾಡಿಕೊಂಡರೆ ಅನುಕೂಲವಾಗುತ್ತದೆ ಎಂದರು. ಕೃಷಿ ಸಂಶೋಧನಾ ಎಂಜಿನಿಯರ್‌ ಡಾ| ಕೆ.ವಿ. ಪ್ರಕಾಶ ಪ್ರಾಸ್ತಾವಿಕ ಮಾತನಾಡಿ, ನೂತನ ಯಂತ್ರಗಳನ್ನು ಸೂಕ್ತ ದರದಲ್ಲಿ ತಲುಪಿಸಲು ನೆರವಾಗಲು ಉದ್ದಿಮೆಗಳನ್ನು ಕೂಡ ಆಹ್ವಾನಿಸಲಾಗಿದೆ ಎಂದು ವಿವರಿಸಿದರು.

ಈ ವೇಳೆ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತ್ರಿವಿಕ್ರಮ ಜೋಶಿ, ಕೊಟ್ರೆಪ್ಪ ಬಿ. ಕೊರೆರ, ಸುನೀಲಕುಮಾರ ವರ್ಮಾ, ಸಂಶೋಧನಾ ನಿರ್ದೇಶಕ ಡಾ| ಬಿ.ಕೆ. ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ| ಡಿ.ಎಂ. ಚಂದರಗಿ, ಕುಲಸಚಿವ ಡಾ| ಎಂ. ವೀರನಗೌಡ, ಸಹ ಸಂಶೋಧನಾ ನಿರ್ದೇಶಕ ಡಾ| ಗುರುರಾಜ ಸುಂಕದ, ಕೃಷಿ ತಾಂತ್ರಿಕ ಕಾಲೇಜಿನ ಡೀನ್‌ ಡಾ| ಎಂ.ನೇಮಿಚಂದ್ರಪ್ಪ ಸೇರಿದಂತೆ ಇತರರಿದ್ದರು.

ಗಮನ ಸೆಳೆದ ಯಂತ್ರಗಳು

ಕೃಷಿ ವಿವಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಿವಿಧ ಕೃಷಿ ಯಂತ್ರೋಪಕರಣಗಳು ಗಮನ ಸೆಳೆದವು. ರಿಮೋಟ್‌ ಚಾಲಿತ ಯಂತ್ರ, ಡ್ರೋಣ್‌ ಚಾಲಿತ ಸಿಂಪರಣಾ ಯಂತ್ರ, ಟ್ರಾಕ್ಟರ್‌ ಚಾಲಿತ ಸಿಂಪರಣಾ-ಕಳೆ ಕೀಳುವುದು, ಕಟಾವು ಮಾಡುವುದು, ಹತ್ತಿ ಕಟ್ಟಿಗೆ ಕತ್ತರಿಸುವುದು, ಗಾಳಿ ಒತ್ತಡ ಸಿಂಪರಣೆ ಯಂತ್ರ, ಕಳೆ ನಾಶಕ ಸಿಂಪಡಿಸುವ ಯಂತ್ರ, ಸ್ವಯಂ ಚಾಲಿತ ಕೂರಿಗೆ, ಸ್ವಯಂ ಚಾಲಿತ ಕಟಾವು ಮಾಡಿ ಪೆಂಡಿ ಕಟ್ಟುವ ಯಂತ್ರ, ಕಳೆ ತೆಗೆಯುವ ಮತ್ತು ಗೊಬ್ಬರ ಬಿತ್ತುವ ಯಂತ್ರ, ಸುಧಾರಿತ ಕಳೆ ತಗೆಯುವ ಯಂತ್ರಗಳು, ಪೆಡಲ್‌ ಮತ್ತ ಶಕ್ತಿ ಚಾಲಿತ ಮೆಕ್ಕೆಜೋಳ ಒಕ್ಕಣೆ ಯಂತ್ರ, ಎತ್ತು ಚಾಲಿತ ಸಿಂಪರಣಾ ಯಂತ್ರಗಳು, ಸುಧಾರಿತ ಚಕ್ಕಡಿಗಳು, ಕೂರಿಗೆ ಯಂತ್ರ, ಗೊಬ್ಬರ ಹರಡುವ ಯಂತ್ರ, ಸೌರಶಕ್ತಿ ಚಾಲಿತ ಸಿಂಪರಣಾ ಯಂತ್ರಗಳು, ಸೌರಶಕ್ತಿ ಚಾಲಿತ ಪಂಪ್‌ಸೆಟ್‌ ಸೇರಿದಂತೆ ಇನ್ನಿತರ ಯಂತ್ರಗಳಿದ್ದವು.

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.