ಎಕ್ಸ್ ಲ್ ಕಾಸ್ತ ಹರಾಜು ರದ್ದತಿಗೆ ಮನವಿ
Team Udayavani, Jun 23, 2020, 8:39 AM IST
ರಾಯಚೂರು: ತಾಲ್ಲೂಕಿನ ಮರ್ಚೆಡ್ ಗ್ರಾಮದ ಸರ್ಕಾರಿ ಭೂಮಿಯನ್ನು ಭೂಹೀನರಿಗೆ ಹಂಚಿಕೆ ಮಾಡದಿದ್ದರೆ, ಏಕ್ಸ್‌ಲ್ ಕಾಸ್ತ ಹರಾಜು ರದ್ದುಪಡಿಸುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮರ್ಚೆಡ್ ಗ್ರಾಮದ ಸರ್ವೇ ನಂಬರ್ 262, 424ಗಳಲ್ಲಿ 20 ಕುಟುಂಬಗಳು ಐದು ದಶಕದಿಂದ ಫಾರಂ ನಂಬರ್ 50, 53 ಹಾಗೂ 57 ಅರ್ಜಿ ಸಲ್ಲಿಸುತ್ತಾ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಅನೇಕ ಹೋರಾಟಗಳ ಮೂಲಕ ಜಿಲ್ಲಾಡಳಿತ, ತಾಲೂಕು ಆಡಳಿತದ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು.
ಆದರೆ, ತಾಲೂಕು ಆಡಳಿತವು ಈ ಸರ್ವೇ ನಂಬರ್‌ಗಳಲ್ಲಿ ಏಕ್ಸ್‌ಲ್ ಕಾಸ್ತ ಹರಾಜನ್ನು ಪ್ರತಿವರ್ಷ ಹಾಕಿ ಬಡವರಿಂದ ಹಣ ಪಡೆಯುತ್ತಿದೆ. ಕೋವಿಡ್-19ನಿಂದಾಗಿ ಬಡ ರೈತರು ಉದ್ಯೋಗವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಏಕ್ಸ್‌ಲ್ ಕಾಸ್ತ ಹರಾಜು ಪುನಾರಾಂಭಿಸಲಾಗಿದೆ. ಇದರಿಂದ ಬಡವರಿಗೆ ಸಮಸ್ಯೆಯಾಗುತ್ತದೆ ಎಂದು ದೂರಿದರು.
ಸಮಿತಿ ಮುಖಂಡರಾದ ಮಾರೆಪ್ಪ ಹರವಿ, ನರಸಿಂಹ ಕುರಬದೊಡ್ಡಿ, ಆಂಜನೇಯ ಕುರುಬದೊಡ್ಡಿ, ಗೋವಿಂದದಾಸ್ ಸೇರಿ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.