ಬೆಳೆಹಾನಿ ನಷ್ಟ ಪರಿಹಾರ ಕಲ್ಪಿಸಲು ಆಗ್ರಹ
Team Udayavani, Dec 4, 2021, 4:05 PM IST
ರಾಯಚೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳು ನಾಶವಾಗಿದ್ದು, ಕೂಡಲೇ ಸರ್ವೇ ನಡೆಸಿ ಸಂಕಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಸುಮಾರು 44 ಸಾವಿರ ಹೆಕ್ಟೇರ್ ಪ್ರದೇಶ ಹಾಳಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿದೆ. ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಗಳು ಹಾನಿಯಾಗಿದ್ದು, ಇನ್ನು ಹೆಚ್ಚು ಸಮೀಕ್ಷೆ ನಡೆಸಿದರೆ ಹೆಚ್ಚು ಬೆಳೆಹಾನಿ ಮಾಹಿತಿ ಸಿಗುತ್ತದೆ. ಗೊಬ್ಬರ, ಬೀಜ ಮತ್ತು ಕೀಟನಾಶಕಗಳ ಬೆಲೆ ಹೆಚ್ಚಾಗಿದ್ದು, ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ. ಅಕಾಲಿಕ ಮಳೆಯಿಂದ ಎಲ್ಲವೂ ಮಣ್ಣು ಪಾಲಾಗಿವೆ. ರೈತರು ಸಂಕಷ್ಟದಲ್ಲಿದ್ದು, ಈ ಕೂಡಲೇ ಸಮಗ್ರ ತನಿಖೆ ನಡೆಸಬೇಕಿದೆ ಎಂದರು.
ಬೆಳೆ ನಷ್ಟ ಅನುಭವಿಸಿದ ರೈತರಿಗೆ ಭತ್ತ ಬೆಳೆಗೆ ಪ್ರತಿ ಎಕರೆಗೆ 35 ಸಾವಿರ, ಹತ್ತಿಗೆ 25 ಸಾವಿರ, ತೊಗರಿಗೆ 15 ಸಾವಿರ ಹಾಗೂ ಮೆಣಸಿನಕಾಯಿಗೆ 10 ಸಾವಿರ ರೂ. ಪರಿಹಾರ ಧನ ನೀಡಬೇಕು. ರೈತರ ಎಲ್ಲ ಕೃಷಿ ಸಾಲ ಮನ್ನಾ ಮಾಡಬೇಕು. ಮೆಣಸಿಕಾಯಿ ಬೆಳೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ನೀರೊದಗಿಸಲು ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಂಚಾಲಕ ರಾಮಣ್ಣ ಎಂ, ಚನ್ನಬಸವ ಜಾನೇಕಲ್, ಮಲ್ಲನಗೌಡ, ಗೌಸ್ ಮೈನುದ್ದಿನ್, ಪ್ರಮೋದ್, ಅಂಬಾಜಿ ಸೇರಿ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.