ಉಪ್ಪಾರನಂದಿಹಾಳ ಕೆರೆ ಪುನಶ್ಚೇತನ
• ವರುಣ ಕೃಪೆ ತೋರಿದರೆ ಕೆರೆಗೆ ನೀರು • ಫಲವತ್ತಾದ ಹೂಳು ರೈತರ ಹೊಲಕ್ಕೆ ಸಾಗಣೆ
Team Udayavani, May 21, 2019, 2:48 PM IST
ಮುದಗಲ್ಲ: ಉಪ್ಪಾರನಂದಿಹಾಳ ಕೆರೆ ಹೂಳನ್ನು ಯಂತ್ರಗಳ ಮೂಲಕ ತೆರವುಗೊಳಿಸುತ್ತಿರುವುದು.
ಮುದಗಲ್ಲ: ಭಾರತೀಯ ಜೈನ ಸಂಘ, ರೈತರು ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸಮೀಪದ ಉಪ್ಪಾರನಂದಿಹಾಳ ಕೆರೆ ಹೂಳು ತೆಗೆಯುವ ಕಾರ್ಯ ಕೊನೆ ಹಂತಕ್ಕೆ ತಲುಪಿದೆ. ಅಂದುಕೊಂಡಂತೆ ನಡೆದರೆ ಮಳೆಗಾಲದಲ್ಲಿ ಸುರಿಯುವ ಹನಿ ಹನಿ ನೀರೂ ಒಡಲಿಗೆ ಹರಿದು ಬಂದು ಸಾಗರವಾಗಲಿದೆ.
ಪಾತಾಳ ಕಂಡಿರುವ ಅಂತರ್ಜಲ ವೃದ್ಧಿಗೆ ಮುಂದಾಗಿರುವ ಭಾರತೀಯ ಜೈನ ಸಂಘ, ರೈತರ ಹಾಗೂ ರಾಜ್ಯ ಸರಕಾರ ಸಹಯೋಗದಲ್ಲಿ ಕಳೆದ ಮೂರು ತಿಂಗಳಿಂದ ಉಪ್ಪಾರನಂದಿಹಾಳ ಕೆರೆಯ ಹೂಳು ತೆರವು ಕಾಮಗಾರಿ ಕೈಗೊಂಡಿದ್ದಾರೆ. ಈಗಾಗಲೇ ಶೇ.90ರಷ್ಟು ಕಾಮಗಾರಿ ಮುಗಿದಿದ್ದು, ಇನ್ನೂ ಶೇ.10ರಷ್ಟು ಮಾತ್ರ ಹೂಳು ತೆರವುಗೊಳಿಸಬೇಕಿದೆ. ಕೆರೆಯ ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಸಾಗಿಸುತ್ತಿದ್ದಾರೆ. ಕೆರೆಯ ಹೂಳನ್ನು ಜಮೀನುಗಳಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಭೂಮಿಯ ತೇವಾಂಶ ಹೆಚ್ಚುತ್ತದೆ. ಒಣಬೇಸಾಯ ಆಧಾರಿತ ಈ ಭಾಗದ ಜಮೀನುಗಳಿಗೆ ಕೆರೆಯ ಹೂಳು ಹಾಕುವುದೆಂದರೆ ಮಣ್ಣಿಗೆ ಪ್ರಕೃತಿ ಚಿಕಿತ್ಸೆ ನೀಡಿದಂತೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ಕುಷ್ಟಗಿ ಉಪವಿಭಾಗದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಈ ಕೆರೆಯ ಒಟ್ಟು ವಿಸ್ತಿರ್ಣ 247 ಎಕರೆಯಿಂದ ಸದ್ಯಕ್ಕೆ 47 ಎಕರೆಗೆ ಕುಗ್ಗಿದೆ. ಕೆರೆಯಿಂದ ನಿತ್ಯ ಸರಾಸರಿ 1500ರಿಂದ 2000 ಟ್ರ್ಯಾಕ್ಟರ್‌ನಷ್ಟು ಹೂಳು ತೆಗೆಯಲಾಗುತ್ತಿದೆ. ಹೂಳು ತುಂಬಲು ಭಾರತೀಯ ಜೈನ ಸಂಘ ಯಂತ್ರಗಳನ್ನು ನೀಡಿದರೇ ರಾಜ್ಯ ಸರಕಾರ ಅದಕ್ಕೆ ಇಂಧನ ವೆಚ್ಚ ಭರಿಸಿದೆ. ರೈತರು ತಮ್ಮ ಖರ್ಚಿನಲ್ಲಿ ದಿನಂಪ್ರತಿ 200 ಟ್ರ್ಯಾಕ್ಟರ್ ಮೂಲಕ ಹೂಳು ತಗೆದುಕೊಂಡು ಹೋಗಿ ತಮ್ಮ ಹೊಲಕ್ಕೆ ಹಾಕಿಕೊಳ್ಳುತ್ತಿದ್ದಾರೆ.
ಚಿಕ್ಕಲೆಕ್ಕಿಹಾಳ, ಹಿರೇಲಕ್ಕಿಹಾಳ, ಸಜ್ಜಲಗುಡ್ಡ, ಉಪ್ಪಾರನಂದಿಹಾಳ, ಕಿಲಾರಹಟ್ಟಿ, ಬೊಮ್ಮನಾಳ, ಕೋಮನೂರ, ಆಮದಿಹಾಳ, ಅಡವಿಬಾವಿ, ಆಶಿಹಾಳ, ಕಂಬಳಿಹಾಳ, ಕನಸಾವಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ತಮ್ಮ ಟ್ರ್ಯಾಕ್ಟರ್‌ಗಳ ಮೂಲಕ ಹೂಳು ತಗೆದುಕೊಂಡು ಹೋಗಿ ಹೊಲಕ್ಕೆ ಹಾಕಿದ್ದಾರೆ. ಈಗಾಗಲೇ ಕೆರೆಯಲ್ಲಿ ಸುಮಾರು 55 ಎಕರೆಯಷ್ಟು ಹೂಳು ತಗೆಯಲಾಗಿದೆ.
•ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.