ಜನಪ್ರತಿನಿಧಿ ಮೀರಿಸಿದ ಮಕ್ಕಳ ಹಾವಭಾವ!
Team Udayavani, Nov 30, 2018, 2:19 PM IST
ರಾಯಚೂರು: ಕಲಾಪಗಳಲ್ಲಿ ನಡೆಯುವ ಗದ್ದಲ, ಆಡಳಿತ-ವಿಪಕ್ಷಗಳ ನಡುವಿನ ವಾಕ್ಸಮರ, ಜನಪ್ರತಿನಿಧಿಗಳ ಮಧ್ಯ ನಡೆಯುವ ವ್ಯಂಗ್ಯ, ಟೀಕೆ, ಆರೋಪ ಪ್ರತ್ಯಾರೋಪಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡಿ ತೋರುವ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ನೆರೆದವರ ಮೆಚ್ಚುಗೆ ಗಳಿಸಿತು. ಆರಂಭದಲ್ಲಿ ಮಕ್ಕಳು ಸ್ಪೀಕರ್, ಸಿಎಂ, ವಿಪಕ್ಷ ನಾಯಕ ಸ್ಥಾನಕ್ಕೆ ಸ್ಪರ್ಧಿಸಿ ತಮ್ಮನ್ನು ಯಾಕೆ ಆಯ್ಕೆ ಮಾಡಬೇಕು ಎಂಬ ಉದ್ದೇಶ ವಿವರಿಸಿದರು. ಬಳಿಕ ಆಯ್ಕೆ ಸಮಿತಿ ಮಕ್ಕಳ ಪ್ರತಿಭೆ ಆಧರಿಸಿ ಗಬ್ಬೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅಕ್ಷತಾಳನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿತು.
ಬಳಿಕ 13 ಜನರಲ್ಲಿ ಸಿಂಧನೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಗಂಗಾಬಿಕಾಳನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ವಿಪಕ್ಷದ ನಾಯಕಿಯನ್ನಾಗಿ ಉದಾಳ ಪ್ರೌಢಶಾಲೆಯ ಚಂದ್ರಿಕಾ ಆಯ್ಕೆಯಾದರು. ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಮೌನ ಆಚರಿಸಲಾಯಿತು. ಬಳಿಕ ಸ್ಪೀಕರ್ ಸಭೆಗೆ ಚಾಲನೆ ನೀಡಿದರು.
ಆರಂಭದಲ್ಲಿಯೇ ಸರ್ಕಾರದ ಸಾಲ ಮನ್ನಾ ವಿಚಾರ ಪ್ರಸ್ತಾಪಿಸಿದ ವಿಪಕ್ಷ ನಾಯಕರು, ರೈತರಿಗೆ ವಂಚನೆ ಮಾಡಿದ್ದೀರಿ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಕೃಷಿ ಸಚಿವ, ರೈತರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಈಗಾಗಲೇ ಅರ್ಧ ಹಣ ಬಿಡುಗಡೆ ಮಾಡಲಾಗಿದೆ. ಅದರ ಜತೆಗೆ ರೈತಮಿತ್ರ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ಸರ್ಕಾರ ಪ್ರತಿ ವರ್ಷ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ನೀಡುತ್ತದೆ ಎಂದು ಹೇಳಿತ್ತು. ಆದರೆ, ಉತ್ತರ ಕರ್ನಾಟಕ ಭಾಗದ ಬಹುತೇಕ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆಲಮಟ್ಟಿ ಜಲಾಶಯವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವ ಬೇಡಿಕೆ ಇದ್ದರೂ ಸರ್ಕಾರ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ನೀರಾವರಿ ಸಚಿವ ಪ್ರತಿಕ್ರಿಯಿಸಿ, ಆಲಮಟ್ಟಿ ಯೋಜನೆ ಕೈಗೊಂಡರೆ ಸಾಕಷ್ಟು ಹಣ ಖರ್ಚಾಗುತ್ತದೆ. ನಾವು ಹಂತ ಹಂತವಾಗಿ ಎಲ್ಲ ಯೋಜನೆಗಳನ್ನು ಮುಗಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.
ಕನ್ನಡದಲ್ಲಿ ಮಾತಾಡಿ: ಆಡಳಿತ ಪಕ್ಷದ ಸಚಿವರು, ಶಾಸಕರು ಸಭೆಯಲ್ಲಿ ಆಂಗ್ಲ ಪದ ಬಳಸುತ್ತಿದ್ದಂತೆ ವಿಪಕ್ಷ ನಾಯಕರು
ಸಭೆಯಲ್ಲಿ ಕನ್ನಡದಲ್ಲಿ ಮಾತನಾಡುವುದು ಕಲಿಯಿರಿ. ಸರ್ಕಾರ ನಡೆಸುವ ನೀವೇ ಕನ್ನಡದ ಬಗ್ಗೆ ಕಡೆಗಣನೆ ಮಾಡಿದರೆ ಹೇಗೆ
ಎಂದು ತರಾಟೆಗೆ ತೆಗೆದುಕೊಂಡರು.
ಆಕರ್ಷಕ ವೇಷಭೂಷಣ: ಬಹುತೇಕ ಮಕ್ಕಳು ಹಾಕಿಕೊಂಡು ಬಂದಿದ್ದ ಬಟ್ಟೆಗಳು ರಾಜಕಾರಣಿಗಳನ್ನು ಮೀರಿಸುವಂತಿದ್ದವು. ಅದರಲ್ಲೂ ಕೆಲ ಪ್ರಸಿದ್ಧ ನಾಯಕರನ್ನು ಹೋಲುವ ಶೈಲಿಯಲ್ಲೇ ಅನೇಕ ಮಕ್ಕಳು ಕಾಣುತ್ತಿದ್ದರು. ಇನ್ನು ವಿದ್ಯಾರ್ಥಿನಿಯರು ಖಾದಿ, ಕಾಟನ್ ಸೀರೆಗಳಲ್ಲಿ ಗಮನ ಸೆಳೆದರೆ ವಿದ್ಯಾರ್ಥಿಗಳು ಪಂಚೆ, ಜುಬ್ಟಾ ಹಾಕಿದ್ದರು. ಗಾಂಧಿಟೋಪಿ, ರುಮಾಲು ಸುತ್ತಿದ್ದ ಹುಡುಗರು ಗಮನ ಸೆಳೆದರು.
ಎಲ್ಲ ವಿದ್ಯಾರ್ಥಿಗಳಿಗೂ ಒಂದೊಂದು ಸಂಖ್ಯೆ ನೀಡಲಾಗಿತ್ತು. ಅಲ್ಲದೇ, ಒಬ್ಬರಿಗೆ ಒಂದೇ ಪ್ರಶ್ನೆ ಮತ್ತು ಉತ್ತರ ನೀಡಲು ಅಕವಾಶ ನೀಡಲಾಗಿತ್ತು. ತೀರ್ಪುಗಾರರು ಮಕ್ಕಳಿಗೆ ಅಂಕ ನೀಡುತ್ತಿದ್ದರು. ಕೊನೆಯಲ್ಲಿ ಆಯೋಜಕರು ಇಲ್ಲಿ ಆಯ್ಕೆಯಾದ ಮಕ್ಕಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.