ಪ್ರತ್ಯೇಕ ತರಕಾರಿ ಮಾರುಕಟ್ಟೆ ಕೂಗಿಗೆ ಬಲ
Team Udayavani, Apr 5, 2022, 5:28 PM IST
ದೇವದುರ್ಗ: ಪಟ್ಟಣದಲ್ಲಿ ಮೂರ್‍ನಾಲ್ಕು ಕಡೆ ತರಕಾರಿ ಮಾರಲಾಗುತ್ತಿದ್ದು, ಒಬ್ಬರಲ್ಲಿ ಒಂದು ಸಿಕ್ಕರೆ ಮತ್ತೊಬ್ಬರಲ್ಲಿ ಮತ್ತೊಂದು ಸಿಗಲ್ಲ. ಗ್ರಾಹಕರ ಅಲೆದಾಟ ತಪ್ಪಿಲ್ಲ. ಹೀಗಾಗಿ ತರಕಾರಿ ಮಾರುವುದಕ್ಕಾಗಿಯೇ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಈಗ ಪಟ್ಟಣದ ಬಾಬು ಜಗಜೀವನರಾವ್ ವೃತ್ತ, ಬಸ್ ನಿಲ್ದಾಣ ಹಾಗೂ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಜಾಗದಲ್ಲಿ ತರಕಾರಿ ವ್ಯಾಪಾರ-ವಹಿವಾಟು ನಡೆಯುತ್ತಿದ್ದು, ಗಾಂಧಿವೃತ್ತ, ಬಸವೇಶ್ವರ ವಾರ್ಡ್, ಭಗತ್‌ಸಿಂಗ್, ಅಶೋಕ ವಾರ್ಡ್ ಸೇರಿದಂತೆ ಇತರೆ ವಾರ್ಡ್‌ನ ನಿವಾಸಿಗಳು ತರಕಾರಿ ಖರೀದಿಗೆ ಇಲ್ಲಿಗೇ ಬರಬೇಕು. ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಜಾಗದಲ್ಲಿ ಶೆಡ್ ಹಾಕಿಕೊಂಡು ಕೆಲ ವ್ಯಾಪರಿಗಳು ತರಕಾರಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರಾದರೂ ಇಲ್ಲಿಯೂ ಒಂದು ಸಿಕ್ಕರೆ ಸಿಕ್ಕರೆ, ಇನ್ನೊಂದು ಸಿಗಲ್ಲ. ಹೀಗಾಗಿ ಒಂದೇ ಕಡೆ ಎಲ್ಲವೂ ಸಿಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂಬುದು ಗ್ರಾಹಕರ ಬೇಡಿಕೆಯಾಗಿದೆ.
ಪಟ್ಟಣದಲ್ಲಿ ಮೂರ್‍ನಾಲ್ಕು ಕಡೆ ತರಕಾರಿ ಮಾರಲಾಗುತ್ತಿದೆ. ಒಬ್ಬರಲ್ಲಿ ಒಂದು ಸಿಕ್ಕರೆ, ಮತ್ತೂಬ್ಬರಲ್ಲಿ ಮತ್ತೂಂದು ಸಿಗಲ್ಲ. ಹೀಗಾಗಿ ಪಟ್ಟಣದಲ್ಲಿ ಎಲ್ಲವೂ ಒಂದೇ ಕಡೆ ಸಿಗುವ ಹಾಗೆ ಪ್ರತ್ಯೇಕ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಕರವೇ ತಾಲೂಕಾಧ್ಯಕ್ಷ ಶ್ರೀನಿವಾಸ ದಾಸರ.
ಗೂಗಲ್ ಗ್ರಾಮದ ಕೃಷ್ಣಾನದಿಯಿಂದ ಮೀನು ತಂದು ತರುತ್ತೇವೆ. ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಜಾಗದಲ್ಲಿ ಮಾರುತ್ತೇವೆ. ಹೀಗಾಗಿ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಬೇಕು ಎನ್ನುತ್ತಾರೆ ಮೀನುಗಾರ ಚಂದಪ್ಪ.
ಅಶೋಕ ವಾರ್ಡ್ ಖಾಸಗಿ ವ್ಯಕ್ತಿಯೊಬ್ಬರ ನಿವೇಶನದಲ್ಲಿ ತರಕಾರಿ ಮಾರಲು ಮಳಿಗೆಗಳು ನಿರ್ಮಿಸಲಾಗಿತ್ತು. ಆ ಮಳಿಗೆಗಳ ಬಗ್ಗೆ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಕ್ರಮ ವಹಿಸಲಾಗುತ್ತದೆ. -ಸಾಬಣ್ಣ ಮಸರಕಲ್, ಪುರಸಭೆ ಮುಖ್ಯಾಧಿಕಾರಿ
ಅಶೋಕ ವಾರ್ಡ್‌ನಲ್ಲಿ ನಿರ್ಮಿಸಲಾದ ತರಕಾರಿ ಮಳಿಗೆಗಳು ಕುಡಿವ ನೀರು, ವಿದ್ಯುತ್ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು. ಮಳಿಗೆಗಳ ಸಮಸ್ಯೆ ಕುರಿತು ಅಧಿಕಾರಿಗಳು ಗಮನ ಹರಿಸಬೇಕು. -ಎಚ್.ಶಿವರಾಜ, ಕಸಾಪ ಮಾಜಿ ಅಧ್ಯಕ್ಷ
ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆ ಖಾಲಿ ನಿವೇಶನ ಲಭ್ಯವಿದ್ದರೆ ಪ್ರತ್ಯೇಕ ತರಕಾರಿ ಮಾರುಕಟ್ಟೆ ನಿರ್ಮಿಸಿದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಕಿಮೀ ಅಲೆದು ತರಕಾರಿ ತರುವ ಸ್ಥಿತಿ ತಪ್ಪುತ್ತದೆ. ಒಂದೇ ಕಡೆ ಎಲ್ಲ ಸೌಲಭ್ಯ ಸಿಕ್ಕಂತಾಗುತ್ತದೆ. -ಶಾಂತಕುಮಾರ ಹೊನ್ನಟಗಿ, ಎಂಆರ್‌ಎಚ್‌ಎಸ್ ತಾಲೂಕಾಧ್ಯಕ್ಷ.
ಕಟ್ಟರಕಟ್ಟಿಯಲ್ಲಿ ತರಕಾರಿ ಮಾರಲಾಗುತ್ತದೆ. ಇಲ್ಲಿ ಒಂದು ಸಿಕ್ಕರೆ ಮತ್ತೂಂದು ಸಿಗಲ್ಲ. ಅಗತ್ಯ ಬಿದ್ದಲ್ಲಿ ಬಸ್ ನಿಲ್ದಾಣ, ಬಾಬು ಜಗಜೀವನರಾಮ್ ವೃತ್ತ, ಸಹಕಾರಿ ಸಂಘದ ಜಾಗದಲ್ಲಿ ಮಾರುವ ತರಕಾರಿ ಅಂಗಡಿಗಳಿಗೆ ಅಲೆಯಬೇಕಿದೆ. -ಅಮೃತಾ ಪಾಟೀಲ್, ಕರವೇ ಮಹಿಳಾ ಘಟಕ ಅಧ್ಯಕ್ಷೆ
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.