ಸಾಲ ಮಾಡಿ ಬಜೆಟ್ ಗಾತ್ರ ಹೆಚ್ಚಳ ಬೇಕಿಲ್ಲ: ರಿಜ್ವಾನ್
Team Udayavani, Feb 16, 2020, 6:53 PM IST
ರಾಯಚೂರು: ಕೇಂದ್ರ ಸರ್ಕಾರ ಮೊದಲು ರಾಜ್ಯಕ್ಕೆ ನೀಡುವ ಅನುದಾನ ಕೊಡಲಿ. ಸಾಲ ಮಾಡಿ ರಾಜ್ಯ ಸರ್ಕಾರ ಬಜೆಟ್ ಗಾತ್ರ ಹೆಚ್ಚಿಸುವ ಅನಿವಾರ್ಯತೆ ಇಲ್ಲ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಮೇಲೆ ಹೊರೆ ಹಾಕಿ ಬಜೆಟ್ ಗಾತ್ರ ಹೆಚ್ಚಿಸುವ ಅಗತ್ಯವಿಲ್ಲ. ಕೇಂದ್ರದಿಂದ ರಾಜ್ಯಕ್ಕೆ 30 ಸಾವಿರ ಕೋಟಿ ರೂ. ಅನುದಾನ ಕಡಿತಗೊಂಡಿದೆ. ಮೊದಲು ಬಾಕಿ ಹಣವನ್ನು ನೀಡಲಿ. ಅನುದಾನ ಕಡಿತ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ಸೇರಿದಂತೆ ರಾಜ್ಯದ ಸಮಸ್ಯೆಗಳ ಕುರಿತು ಸದನದಲ್ಲಿ ಹೋರಾಟ ನಡೆಸಲಾಗುವುದು. ರಾಜ್ಯದಲ್ಲಿ ಹುಚ್ಚರ ಸಂತೆಯಂತೆ ಆಡಳಿತ ನಡೆಯುತ್ತಿದೆ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಮುಖವಾಡ ಬಯಲಾಗಲಿದೆ. ಅರಣ್ಯ ಒತ್ತುವರಿಗೆ ಸಂಬಂಧಿ ಸಿ ಸಚಿವ ಆನಂದಸಿಂಗ್ ವಿರುದ್ಧ 15 ಪ್ರಕರಣಗಳಿವೆ. ಅಂಥವರಿಗೆ ಅರಣ್ಯ ಇಲಾಖೆ ಸಚಿವ ಸ್ಥಾನ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಮಗೆ ಸಂಖ್ಯಾಬಲ ಇಲ್ಲ. ನೂರಾರು ಕೋಟಿ ಹಣ ವ್ಯಯಿಸಿ ಶಾಸಕರನ್ನು ಖರೀದಿಸಿ, ಚುನಾವಣೆ ಮಾಡಿ ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ಆತ್ಮಾವಲೋಕನ ಮಾಡಿಕೊಳ್ಳಲಿ. ನಾವು ಬಿಜೆಪಿಯವರಂತೆ ಹಣ ಚೆಲ್ಲಿ ಚುನಾವಣೆ ನಡೆಸುವುದಿಲ್ಲ ಎಂದರು.
ಕಾರು ಅಪಘಾತ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದಿಲ್ಲ.
ಬಿಜೆಪಿ ಪ್ರಜಾಪ್ರಭುತ್ವ ಉಳಿಸುತ್ತಿಲ್ಲ ಎನ್ನುವದಂತೂ ಸತ್ಯ. ಮನಸ್ಸಿಗೆ ಬಂದವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ನನ್ನ ವಿರುದ್ಧ ಸೆಕ್ಷನ್ 144 ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆಯನ್ನೇ ಮನಸೋ ಇಚ್ಛೆ ನಡೆಸಿಕೊಳ್ಳಲಾಗುತ್ತಿದೆ. ಪೊಲೀಸರ ತಾರತಮ್ಯದ ಕುರಿತೂ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.