ಗಮನ ಸೆಳೆದ ಗ್ರಾಮೀಣ ಕ್ರೀಡಾಕೂಟ
Team Udayavani, May 15, 2022, 1:12 PM IST
ರಾಯಚೂರು: ತಾಲೂಕಿನ ಮಮದಾಪುರ ಗ್ರಾಮದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ)ವತಿಯಿಂದ ನಡೆದ ಪಂಚಾಯಿತಿ ಮಟ್ಟದ ಗ್ರಾಮೀಣ ಕ್ರೀಡಾಕೂಟ ಗಮನ ಸೆಳೆಯಿತು.
ಕ್ರೀಡಾ ಕೂಟವನ್ನು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಚಾಲನೆ ನೀಡಲಾಯಿತು. ಮಮದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳ 50ಕ್ಕೂ ಹೆಚ್ಚಿನ ಯುವಕರು ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕೈಕಲ್ಲು ಎತ್ತುವ ಸ್ಪರ್ಧೆಯಲ್ಲಿ 80ಕೆ.ಜಿ ಕಲ್ಲು ಎತ್ತಿದ ಮಹಾದೇವ ಬಸ್ಸಪ್ಪ ಪ್ರಥಮ ಬಹುಮಾನ, 75ಕೆ.ಜಿ ಎತ್ತಿದ ಶಿವಾನಂದ ದ್ವಿತೀಯ ಬಹುಮಾನ ಹಾಗೂ 70ಕೆ.ಜಿ ಎತ್ತಿದ ರಾಜು ಸೋಮರೆಡ್ಡಿ ತೃತೀಯ ಬಹುಮಾನ ಪಡೆದರು. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಆಶಾಪುರದ ನರಸಪ್ಪ 120ಕೆ.ಜಿ ಉಸುಕಿನ ಚೀಲ ಎತ್ತಿದರೆ, ದ್ವಿತೀಯ ಬಹುಮಾನ ಪಡೆದ ಮಹೇಶ 110 ಕೆ.ಜಿ ಹಾಗೂ ತƒತೀಯ ಬಹುಮಾನ ಶಿವಾನಂದ 110ಕೆ.ಜಿ ಎತ್ತಿದರು. ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಹೇಶ್ ಬಸಪ್ಪ 8ಮೀಟರ್ ದೂರ ಎಸೆದರು, 7.1ಮೀಟರ್ ದೂರ ಎಸೆದ ಈರೇಶ್ ಯಾದವ್ ಎರಡನೇ ಸ್ಥಾನ ಮತ್ತು ಏಳು ಮೀಟರ್ ದೂರ ಎಸೆದ ಈರೇಶ್ ಮುನಿಸ್ವಾಮಿ ಮೂರನೇ ಬಹುಮಾನ ಪಡೆದರು. ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಪದಕ ನೀಡಲಾಯಿತು. ಹಾಗೂ ಬಹುಮಾನ ಪಡೆದ ಎಲ್ಲರಿಗೂ ನೇತಾಜಿ ಫೋಟೊ, ಕಪ್ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಇಂದು ಗ್ರಾಮೀಣ ಯುವಕರನ್ನು ಒಂದುಗೂಡಿಸುವ ಕಲೆ, ಕ್ರೀಡೆಗಳು ನಶಿಸಿ ಹೋಗುತ್ತಿವೆ. ಈ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜಿರಹಿತವಾಗಿ ಹೋರಾಡಿ ಬಲಿದಾನ ಮಾಡಿದ ಮಹಾನ್ ನೇತಾಜಿ ನಮ್ಮ ಯುವಕರಿಗೆ ಆದರ್ಶವಾಗಬೇಕಾಗಿದೆ. ಐಸಿಎಸ್ ಪರೀಕ್ಷೆಯನ್ನು ಪಾಸುಮಾಡಿ ಬ್ರಿಟಿಷ್ ಗುಲಾಮ ಅಧಿಕಾರಿಯಾಗದೆ ಜನರ ವಿಮೋಚನೆಗಾಗಿ ಹೋರಾಡಿದರು. ಅಂತಹ ನಾಯಕರ ಜೀವನ ಹೋರಾಟವನ್ನು ಅರಿತುಕೊಳ್ಳಬೇಕು. ಅವರ ಕನಸಿನ ಭಾರತವನ್ನು ಕಟ್ಟಲು ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಎಐಡಿವೈಒ ರಾಜ್ಯ ಅಧ್ಯಕ್ಷ ಶರಣಪ್ಪ ಉದಾºಳ್, ಗ್ರಾಮದ ಹಿರಿಯರಾದ ಮಹಾದೇವಪ್ಪಗೌಡ, ವೀರನಗೌಡ, ನಿಂಗಯ್ಯ, ಗಂಗಣ್ಣ, ಮಲ್ಲಿಕಾರ್ಜುನ ಗೌಡ, ಗಂಗಣ್ಣ ನಾಯಕ್, ಗೋಕರಪ್ಪ ನಾಯಕ್, ಮಲ್ಲಪ್ಪ ಬಾಗಲಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾರ್ಕ್, ದೇವರಾಜ್, ಪೋಸ್ಟ್ ಈರಣ್ಣ, ತಮಟೆ ಹನುಮಂತ, ಪೋಸ್ಟ್ ಈರಣ್ಣ, ರಾಘವೇಂದ್ರ ಆಶಾಪುರ, ಗ್ರಾಮದ ಯುವಕರಾದ ಮಂದಕಲ್, ಸುಗ್ರೀವ, ಜಂಬಣ್ಣ, ಉಮೇಶ್, ರಮೇಶ್, ತಾಯಪ್ಪ, ವನಮುಕ್ತಿ, ಭೀಮನಾಯಕ್ ಹಾಗೂ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್, ಕೃಷ್ಣ ಮನಸಲಾಪೂರ, ಜಾಫರ್ ಸೇರಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಏಗನೂರು ಬಳಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಗೋಶಾಲೆ ತೆರವುಗೊಳಿಸಿದ ಪಾಲಿಕೆ
Raichur: ಪಕ್ಷ ಮುನ್ನಡೆಸಲು ಮತ್ತೊಮ್ಮೆ ಅವಕಾಶ ಸಿಗುವ ವಿಶ್ವಾಸವಿದೆ: ಬಿವೈ ವಿಜಯೇಂದ್ರ
Maha Kumbh 2025: ಒಂದು ಕಾಲದಲ್ಲಿ ರಾಯಚೂರು ಡಿಸಿ.. ಈಗ ಸನ್ಯಾಸಿ!
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ