ಜೋಳಕ್ಕೆ ಸೈನಿಕನ ಕಾಟ; ಮತ್ತೆ ರೈತರಲ್ಲಿ ಆತಂಕ
Team Udayavani, Dec 11, 2020, 6:50 PM IST
ದೇವದುರ್ಗ: ಹಿಂಗಾರು ಹಂಗಾಮಿನಲ್ಲಿನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಜೋಳಕ್ಕೆ ಸೈನಿಕ ಹುಳು ಬಾಧೆ ಕಂಡುಬಂದಿದ್ದು, ರೈತರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಜೋಳ ಬಿತ್ತನೆ ಮಾಡಿ 25ರಿಂದ 30 ದಿನಗಳು ಕಳೆಯುತ್ತಿದೆ. ನಾಲ್ಕು ಹೋಬಳಿವ್ಯಾಪ್ತಿಯಲ್ಲಿ 22,766 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿದೆ.
ಎಲ್ಲೆಲ್ಲಿ ಎಷ್ಟು ಬಿತ್ತನೆ: ಪಟ್ಟಣ ಸೇರಿ ತಾಲೂಕಿನ್ಯಾದಂತ ಹಿಂಗಾರು ಹಂಗಾಮಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳ ಬಿತ್ತನೆ ಮಾಡಲಾಗಿದೆ. ದೇವದುರ್ಗ ನೀರಾವರಿ-785 ಹೆಕ್ಟೇರ್, ಗಬ್ಬೂರು-1142ಹೆಕ್ಟೇರ್, ಜಾಲಹಳ್ಳಿ-525 ಹೆಕ್ಟೇರ್,ಅರಕೇರಾ- 675 ಹೆಕ್ಟೇರ್ ನೀರಾವರಿ3,127 ಹೆಕ್ಟೇರ್ ಪ್ರದೇಶದಲ್ಲಿ ಜೋಳಬಿತ್ತನೆ ಮಾಡಲಾಗಿದೆ. ಖುಷ್ಕಿ ಪ್ರದೇಶದಲ್ಲಿದೇವದುರ್ಗ-5,785 ಹೆಕ್ಟೇರ್, ಗಬ್ಬೂರು-6,169 ಹೆಕ್ಟೇರ್, ಜಾಲಹಳ್ಳಿ- 2,975 ಹೆಕ್ಟೇರ್, ಅರಕೇರಾ- 4,710 ಹೆಕ್ಟೇರ್ ಖುಷ್ಕಿ 19,639 ಹೆಕ್ಟೇರ್ ಪ್ರದೇಶದಲ್ಲಿ ಜೋಳಬಿತ್ತನೆ ಮಾಡಿದ್ದು, ಹಿಂಗಾರು ಹಂಗಾಮಿನಲ್ಲಿ22,766 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದಾರೆ.
ಆಂತಕದಲ್ಲಿ ರೈತರು: ಕಳೆದೆರಡು ತಿಂಗಳಹಿಂದೆ ನಿರಂತರ ಸುರಿದ ಮಳೆಯಿಂದಾಗಿ ಮೆಣಿಸಿನಕಾಯಿ, ಹತ್ತಿ, ತೊಗರಿ ಸೇರಿ ಇತರೆಬೆಳೆಗಳ ನಷ್ಟ ಅನುಭವಿಸಿದ್ದಾರೆ. ಹೆಚ್ಚುಮಳೆ ಸುರಿದಿದ್ದರಿಂದ ಬೆಳೆಗಳಿಗೆ ತೇವಾಂಶಹೆಚ್ಚಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸಿದರೈತರೀಗ ಸೈನಿಕ ಹುಳು ಬಾಧೆಗೆ ಆತಂಕ ಪಡುವಂತಾಗಿದೆ.
ಜಾಗೃತಿ ಅಗತ್ಯ: ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಜೋಳಕ್ಕೆ ಸೈನಿಕ ಹುಳು ಬಾಧೆ ಆವರಿಸಿದೆ. ಹುಳುವಿನ ಮೊದಲ ಹಂತದ ಮರಿಹುಳು ಎಲೆ ಕೆರೆದು ತಿನ್ನುವುದರಿಂದ, ಎಲೆಯ ಮೇಲೆ ಬಿಳಿಯಪಾರದರ್ಶಕ ಜಾಲರಿಗಳು ಕಂಡುಬರುತ್ತವೆ.ನಂತರ ಮರಿಹುಳು ಎಲೆ ತಿನ್ನುವ ಜತೆಕತ್ತರಿಸಿದಂತೆ ಕಾಣಿಸುತ್ತದೆ. ಸುಳಿ ಕೊರೆದು ತಿನ್ನುವುದರಿಂದ ಗಿಡ ಒಣಗುತ್ತದೆ. ಹಳದಿ ಮಿಶ್ರತ ಕಂದುಬಣ್ಣದ ಹಿಕ್ಕೆ ಕಂಡು ಬರುತ್ತದೆ. ಸೂಕ್ತ ಸಮಯದಲ್ಲಿ ರೈತರಿಗೆ ಕೃಷಿ ಅ ಧಿಕಾರಿಗಳಿಂದ ಜಾಗೃತಿ ನೀಡುವ ಅಗತ್ಯವಿದೆ.
ಬೆಳೆ ಹತೋಟಿಗೆ: ಜೋಳಕ್ಕೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆ ಸೂಕ್ತ ಸಮಯದಲ್ಲಿ ವಿಜ್ಞಾನಿಗಳ ಸಲಹೆ ಪಡೆದು ಬೆಳೆಗಳು ಹತೋಟಿಗೆ ತರಬೇಕಾಗಿದೆ. 0.40ಗ್ರಾಂ. ಇಮಾಮೆಕ್ಷೆನ್ ಬೆಂಜೋಯಟ್, 5 ಎಸ್.ಜಿ. ಅಥವಾ 0.3 ಮಿ.ಲೀ.ಕ್ಲೋರಾಂಟ್ರಿನಿಲ್ ಪ್ರೊಲ್, 18.5 ಎಸ್.ಸಿ.ಅಥವಾ 0.5ಮಿ.ಲೀ ಸ್ಪೆನೂಟೊರಂ, 12.5 ಎಸ್.ಸಿ ಪ್ರತಿ ಲೀ. ನೀರಿಗೆ ಬೆರೆಸಿ ದ್ರಾವಣವು ಸುಳಿಯೊಳಗೆ ಬೀಳುವಂತೆ ಸಿಂಪಡಿಸಬೇಕುಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ| ಗಿರೀಶ್ ಮರಡ್ಡಿ, ವಿಜ್ಞಾನಿ ಡಾ| ಕೃಷ್ಣಾ ಬಿರಾದಾರ ಪಾಟೀಲ್ ತಿಳಿಸಿದ್ದಾರೆ.
ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಜೋಳಕ್ಕೆ ಸೈನಿಕ ಹುಳು ಬಾಧೆ ಆವರಿಸಿದೆ. ಯಾವ ಹಂತದಲ್ಲಿ ಔಷಧ ಸಿಂಪಡಣೆ ಮಾಡಬೇಕೆಂಬ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗಿದೆ. – ಡಾ| ಎಸ್. ಪ್ರಿಯಾಂಕ್ ಸಹಾಯಕ ಕೃಷಿ ನಿರ್ದೇಶಕಿ
ಕೃಷಿ ಅಧಿಕಾರಿಗಳಿಂದ ರೈತರಿಗೆ ಜಾಗೃತಿ ಕೊರತೆ ಉಂಟಾಗಿದೆ. ಕಳಪೆ ಬೀಜಗಳ ಪೂರೈಕೆಯಿಂದ ಆರಂಭದಲ್ಲೇಬೆಳೆ ನಷ್ಟ ಅನುಭವಿಸಬೇಕಾಗಿದೆ. ಈ ಕುರಿತು ಕೃಷಿ ಇಲಾಖೆ ರೈತರಿಗೆ ಅಗತ್ಯ ಸಲಹೆ-ಸೂಚನೆ ನೀಡಬೇಕು. –ಶಬ್ಬೀರ ಜಾಲಹಳ್ಳಿ, ರೈತ ಮುಖಂಡ
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.