ಗಿಡ ಸಂರಕ್ಷಿಸಿ ಪರಿಸರ ಉಳಿಸಿ: ಬೊಮ್ಮಾಯಿ
Team Udayavani, Jul 15, 2017, 2:25 PM IST
ಜಾಲಹಳ್ಳಿ: ಗಿಡಗಳನ್ನು ಸಂರಕ್ಷಿಸಿ ಪರಿಸರ ಉಳಿಸಬೇಕು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿಯ ಜೆ.ಜೆ. ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾರತೀಯ ಜನತಾ ಪಕ್ಷ ಜಾಲಹಳ್ಳಿ ಮಂಡಲ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಸಂಘದ ಸಂಸ್ಥಾಪಕ ಪಂಡಿತ ದಿನದಯಾಳ ಉಪಾಧ್ಯಾಯರ 100ನೇ ಜನ್ಮದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಸಸಿ
ನೆಡುವ ಕಾರ್ಯಕ್ರಮ ಸಹ ಒಂದಾಗಿದೆ. ಸಸಿ ನೆಡುವುದರಿಂದ ಮನುಷ್ಯ ಜೀವಿ ಸೇರಿದಂತೆ ಸಕಲ ಜೀವಿಗಳಿಗೂ ಅನುಕೂಲವಾಗುತ್ತದೆ. ಉತ್ತಮ ಗಾಳಿಯಿಂದ ಉತ್ತಮ ಆರೋಗ್ಯ ಸಿಗುತ್ತದೆ. ಇತ್ತೀಚೆಗೆ ಮರಗಳನ್ನು ಕಡಿದು
ಪರಿಸರ ಹಾಳು ಮಾಡಲಾಗುತ್ತಿದೆ. ನಾವೆಲ್ಲರೂ ಪರಿಸರ ಸಂರಕ್ಷಿಸುವುದರ ಜತೆಗೆ ಇನ್ನು ಹೆಚ್ಚಿಗೆ ಬೆಳಸಬೇಕು ಎಂದು ಹೇಳಿದರು.
ಶಾಸಕ ಶಿವನಗೌಡ ನಾಯಕ, ದೇವದುರ್ಗ ಉಸ್ತುವಾರಿ ವಿಸ್ತಾರಕರಾದ ವಿರುಪಾಕ್ಷಗೌಡ ಬಳ್ಳಾರಿ, ಭಾಜಪ ಜಿಲ್ಲಾ ಕಾರ್ಯದರ್ಶಿ ನಾಗರಾಜ ಅಕ್ಕರಕಿ, ಜಾಲಹಳ್ಳಿ ಮಂಡಲದ ಅಧ್ಯಕ್ಷ ಚಂದಪ್ಪ ಬುದ್ದಿನ್ನಿ, ಪ್ರಧಾನ ಕಾರ್ಯದರ್ಶಿ ಸಿ. ಎಸ್. ನಾಡಗೌಡ, ಹನುಮಗೌಡ ಮದರಕಲ್, ಗ್ರಾಪಂ ಅಧ್ಯಕ್ಷ ರಂಗನಾಥ ಮಕಾಸಿ, ಮುಖಂಡರಾದ ಬಸವರಾಜ ಪಾಟೀಲ ಗಾಣದಾಳ, ವೀರಣ್ಣ ಬಳೆ, ಭೀಮಣ್ಣ
ನಾಡಗೌಡ, ಪೂರ್ಣಪ್ರಜ್ಞೆ ದೇಸಾಯಿ, ಈಶಣ್ಣ ಕಾಟಳ್ಳಿ, ಶಿವರಾಜ ಪಾಣಿ, ರಮೇಶ ಅನ್ವರಿ, ಸೋಲಬಣ್ಣ ಸೌದ್ರಿ, ಚಂದಪ್ಪ ಭಾವಿಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.