ಶಿಥಿಲ ಶಾಲಾ ಕಟ್ಟಡ: ಬಯಲಲ್ಲೇ ಪಾಠ
Team Udayavani, Mar 3, 2022, 5:22 PM IST
ದೇವದುರ್ಗ: ಜಾಲಹಳ್ಳಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಕೊಠಡಿಗಳು ಶಿಥಿಲಗೊಂಡಿವೆ. ಇದರಿಂದಾಗಿ ಕೆಲ ವರ್ಗದ ವಿದ್ಯಾರ್ಥಿಗಳಿಗೆ ಬಯಲಲ್ಲೇ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯ 330 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಆರು ಜನ ಶಿಕ್ಷಕರ ಕೊರತೆ ಇದ್ದು, ಮಕ್ಕಳ ಭವಿಷ್ಯಕ್ಕೆ ಅತಿಥಿ ಶಿಕ್ಷಕರೇ ಆಸರೆ ಎಂಬಂತಾಗಿದೆ.
ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ಹುದ್ದೆ ಖಾಲಿಯಿಂದ ಮಕ್ಕಳ ಕಲಿಕೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಹಲವು ಸಮಸ್ಯೆಗಳ ಮಧ್ಯೆಯೇ ಶಿಕ್ಷಕರು ಬಯಲಲ್ಲೇ ಮಕ್ಕಳಿಗೆ ಪಾಠ ಹೇಳಬೇಕಾದಂತಹ ಸಂಕಷ್ಟ ಬಂದಾಗಿದೆ. ಬೇಸಿಗೆ ಬಿಸಿಲು ಆರಂಭವಾಗಿದ್ದು, ಮಕ್ಕಳ ಕಲಿಕೆಗೆ ಒಂದಿಲ್ಲೊಂದು ಸಮಸ್ಯೆ ತಂದಿದೆ.
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಗಳು ಶತಮಾನೋತ್ಸವ ಪೂರೈಸಿದ ಕೊಠಡಿಯಲ್ಲಿ ಮಕ್ಕಳಿಗೆ ಶಿಕ್ಷಕರು ಬೋಧನೆ ಮಾಡುತ್ತಿರುವುದು ಅವಘಡಕ್ಕೆ ಆಹ್ವಾನಿಸಿದಂತಾಗಿದೆ. ಎಂಟು ಕೊಠಡಿಗಳು ಅಲ್ಪಸ್ವಲ್ಪ ಬಳಿಕೆ ಮಾಡುವಷ್ಟು ಯೋಗವಿದ್ದು, ಇನ್ನುಳಿದಂತಹ ಕಟ್ಟಡಗಳು ನಿರುಪಯುಕ್ತವಾಗಿವೆ. ನೆಲ ಸಮಾಗೊಳಿಸಲು ಈಗಾಗಲೇ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಒಂದಡೆ ಕೊಠಡಿಗಳ ಸಮಸ್ಯೆ, ಮತ್ತೊಂದೆಡೆ ಶಿಕ್ಷಕ ಕೊರತೆಯಿಂದ ಮಕ್ಕಳ ಭವಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಮಧ್ಯಮ ವರ್ಗದ ಬಡಕುಟುಂಬದ ಮಕ್ಕಳೇ ಅತಿ ಹೆಚ್ಚು ಶಾಲೆಗೆ ಪ್ರವೇಶ ಪಡೆದಿದ್ದಾರೆ. ಪೋಷಕರು ಮಕ್ಕಳ ಭವಿಷ್ಯದ ಮೇಲೆ ಬೆಳಕು ಚಲ್ಲಿದ್ದಾರೆ.
ಜಾಲಹಳ್ಳಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿ ರುವ ಕೊಠಡಿಗಳು ಪರಿಶೀಲನೆ ಮಾಡಲಾಗಿದೆ. ನೆಲಸಮಾಗೊಳಿಸುವ ಪಟ್ಟಿಯಲ್ಲಿ ಇಲ್ಲಿನ ಶಾಲೆಯೂ ಇದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. -ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.