ಆರ್‌ಎಚ್.2ರಲ್ಲಿ ಶಾಲೆ ಕೊಠಡಿ ಉದ್ಘಾಟನೆ
Team Udayavani, Feb 20, 2022, 2:10 PM IST
ಸಿಂಧನೂರು: ತಾಲೂಕಿನ ಆರ್.ಎಚ್. ಕ್ಯಾಂಪ್ 2ರಲ್ಲಿ 1.24 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸರಕಾರಿ ಶಾಲೆಯ 10 ಕೊಠಡಿಗಳನ್ನು ಶಾಸಕ ವೆಂಕಟರಾವ್ ನಾಡಗೌಡ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಆರ್‌ಐಡಿಎಫ್ ಯೋಜನೆಯಡಿ ಶಾಲೆಗೆ ಹೊಸ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಸರಕಾರಿ ಶಾಲೆಗಳಿಗೆ ಕೊಠಡಿ ಅಭಾವ ಇರಬಾರದು ಎಂಬ ನಿಟ್ಟಿನಲ್ಲಿ ನೂರಾರು ಕೊಠಡಿಗಳನ್ನು ಮಂಜೂರು ಮಾಡಲಾಗಿದ್ದು, ಸರಕಾರದ ಸೌಲಭ್ಯ ವಿದ್ಯಾರ್ಥಿಗಳಿಗೆ ತಲುಪಬೇಕಿದೆ. ಪ್ರತಿ ಪುನರ್ವಸತಿ ಕ್ಯಾಂಪಿಗೆ 50 ಲಕ್ಷ ರೂ.ನಂತೆ 5 ಬಂಗ್ಲಾ ವಸತಿ ಕ್ಯಾಂಪ್‌ಗ್ಳಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಾಗುವುದು ಎಂದರು.
ತಿಮ್ಮಾಪುರ ಭಾಗಕ್ಕೆ ಏತನೀರಾವರಿ ಕೆಳಭಾಗದ ರೈತರಿಗೆ ಅನುಕೂಲ ಒದಗಿಸಲಾಗಿದೆ. ಜಲಧಾರಾ ಯೋಜನೆ ಸೌಲಭ್ಯ ಒದಗಿಸಿದ್ದೇನೆ. ಜೋಳ ಖರೀದಿಗೆ ಹಾಕಿದ್ದ ಷರತ್ತು ತೆಗೆದು ಹಾಕಿದ್ದು, ಎಲ್ಲ ರೈತರಿಗೂ ಇದರಿಂದ ಪ್ರಯೋಜನ ಒದಗಿಸಲಾಗಿದೆ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಗ್ರಾಪಂ ಅಧ್ಯಕ್ಷೆ ರೇಣುಕಾ, ಸುಕ್ರುತ್ ಬಿಸ್ವಾಸ್, ಬಿಇಒ ಶರಣಪ್ಪ ವಟಗಲ್, ಎಇಇ ಸಿ.ಎಸ್.ಪಾಟೀಲ್ ಇದ್ದರು.
ಕ್ಯಾಂಪಿನಲ್ಲಿ ಜೈಶ್ರೀರಾಮ್ ಘೋಷಣೆ
ತಾಲೂಕಿನ ಬಾಂಗ್ಲಾ ಕ್ಯಾಂಪಿಗೆ (ಆರ್‌ಎಚ್.2) ಶಾಲಾ ಕೊಠಡಿ ಉದ್ಘಾಟನೆಗೆ ತೆರಳಿದ ಶಾಸಕ ವೆಂಕಟರಾವ್ ನಾಡಗೌಡರಿಗೆ ಕ್ಯಾಂಪಿನ ನಿವಾಸಿಗಳು ಶನಿವಾರ ಜೈ ಶ್ರೀರಾಮ್ ಘೋಷಣೆಯೊಂದಿಗೆ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪರೇಡ್ ನಡೆಸಿ, ಶಾಕರನ್ನು ಆಹ್ವಾನಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.