ಬೀಡು ಬಿಟ್ಟಿದೆಯಾ ಕಳರ ಚಡ್ಡಿ ಗ್ಯಾಂಗ್?
Team Udayavani, Oct 10, 2018, 3:47 PM IST
ರಾಯಚೂರು: ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಒಂದರ ಮೇಲೊಂದರಂತೆ ನಡೆದ ಕಳವು ಪ್ರಕರಣಗಳಿಂದ ಜನ ಮನೆ
ಬಿಟ್ಟು ಹೋಗಲು ಆತಂಕ ಪಡುವಂತಾಗಿದೆ.
ಗಣೇಶ ಚತುರ್ಥಿ, ಮೊಹರಂ ವೇಳೆ ಸಮೀಪದ ಯರಮರಸ್ ಕ್ಯಾಂಪ್‌ನಲ್ಲಿ ಸರಣಿಗಳ್ಳತನಗಳು ನಡೆಯುವ ಮೂಲಕ ಜನರಿಗೆ ರಾತ್ರಿ ನಿದ್ದೆಯೇ ಹಾರಿಹೋಗಿತ್ತು. ಏಳರಿಂದ ಎಂಟು ಕಡೆ ಮೇಲಿಂದ ಮೇಲೆ ಕಳ್ಳತನ ನಡೆಯಿತು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ವಿವರಣೆ ನೀಡಿದರು. ಇದರಿಂದ ಬೇಸತ್ತ ನಿವಾಸಿಗಳು ಬೆತ್ತಗಳನ್ನು ಹಿಡಿದು ಖುದ್ದು ಗಸ್ತು ತಿರುಗುವಂತಾಯಿತು.
ಇದೇ ವೇಳೆ ನಗರದ 10 ಮಿಲ್‌ಗಳಲ್ಲೂ ಲಕ್ಷಾಂತರ ರೂ. ಕಳುವಾಗಿದೆ. ಏಳು ರೈಸ್ ಮಿಲ್, ಎರಡು ಜಿನ್ನಿಂಗ್ ಮಿಲ್ ಹಾಗೂ ಒಂದು ದಾಲ್ ಮಿಲ್‌ನಲ್ಲಿ ಲಕ್ಷಾಂತರ ರೂ. ಕಳ್ಳತನವಾಗಿದ್ದು, ಈ ಕುರಿತು ರಾಯಚೂರು ರೈಸ್ ಮಿಲ್ಲರ್
ಅಸೋಸಿಯೇಶನ್‌ನಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇಲ್ಲಿ ನಡೆದ ಕಳ್ಳತನ ಪ್ರಕರಣಗಳು
ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅಚ್ಚರಿ ಎಂದರೆ ರೈಸ್ ಮಿಲ್‌ಗಳು ರಾತ್ರಿ
ಕೂಡ ಕಾರ್ಯ ನಿರತವಾಗಿರುತ್ತವೆ. ಅಂಥ ವೇಳೆ ಕಚೇರಿ ಬೀಗ ಮುರಿದು ಹಣ ಲೂಟಿ ಮಾಡಲಾಗಿದೆ. ಇದರಿಂದ ವರ್ತಕರು ಆತಂಕಗೊಂಡಿದ್ದಾರೆ.
ನೋಟಿಗೆ ಬೆಂಕಿ: ನಗರದಲ್ಲಿ ಇನ್ನೂ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಮುಗಿದಿರಲಿಲ್ಲ. ನಗರದ ಮಾರ್ಕೆಟ್ ಯಾರ್ಡ್ ಠಾಣೆ ಸಮೀಪ ನಿಷೇಧಿ ತ 500, ಸಾವಿರ ಮುಖ ಬೆಲೆಯ ನೋಟುಗಳ ಜತೆಗೆ ಚಾಲ್ತಿಯಲ್ಲಿರುವ ನೂರು, 10, 20 ರೂ. ನೋಟುಗಳಿಗೆ ಬೆಂಕಿ ಹಾಕಿ ಸುಡಲಾಗಿತ್ತು. ಆದರೆ, ಇದು ಯಾರು, ಏಕೆ ಮಾಡಿರಬಹುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿಲ್ಲ.
ಸೊಟದ ಸದ್ದು: ಇದೆಲ್ಲ ಮಾಸುವ ಮುನ್ನವೇ ಸಮೀಪದ ಯರಮರಸ್ ಕ್ಯಾಂಪ್ ಬಳಿ ಅನುಮಾಸ್ಪದ ವಸ್ತು ಸ್ಫೋಟಗೊಂಡು ಮಹಿಳೆ ಸ್ಥಳದಲ್ಲೇ ಮೃತಪಟ್ಟ ವಿಚಾರ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಸ್ಫೋಟದ ತನಿಖೆ ಕೈಗೊಂಡಿರುವ ಪೊಲೀಸರು ಇದು ಡೆಕಾರೇಟರ್ ಬಳಸುವ ಕೆಮಿಕಲ್‌ನಿಂದಾಗಿರಬಹುದು ಎಂದು ಅಂದಾಜಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಎರಡೂಮೂರೂ ದಿನ ಕಾವಲು ಕಾದಿದ್ದು, ಸತತವಾಗಿ ಗಸ್ತು ತಿರುಗಿದ್ದಾರೆ. ಆದರೆ, ಇದೇ ವೇಳೆ ಪಕ್ಕದ ಮನೆಯೊಂದರಲ್ಲಿ ಕಳುವಾಗಿದ್ದ, 50 ಸಾವಿರ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಚಡ್ಡಿ ಗ್ಯಾಂಗ್ ವಿಡಯೋ ವೈರಲ್: ಏತನ್ಮಧ್ಯೆ ಇದಕ್ಕೆಲ್ಲ ಪುಷ್ಟಿ ನೀಡುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ನಗರದ ಯಾವುದೋ ಅಪಾರ್ಟ್ ಮೆಂಟ್‌ನಲ್ಲಿ ಚಡ್ಡಿ ಮತ್ತು ಬನಿಯನ್ ಧರಿಸಿದ ಐದು ಜನರ ತಂಡವೊಂದು ಕಳ್ಳ ಹೆಜ್ಜೆ ಹಾಕುತ್ತ ಸಾಗುವ ವಿಡಿಯೋ ಹರಿದಾಡುತ್ತಿದೆ. ಆ ಗ್ಯಾಂಗ್ ನಗರದಲ್ಲಿ ಬೀಡು ಬಿಟ್ಟಿದ್ದು ಎಚ್ಚರ ಎಂಬ ಸಂದೇಶ ಹರಿದಾಡುತ್ತಿದೆ. ಆದರೆ, ಆ ತಂಡದ ಬಗ್ಗೆ ಯಾವುದೇ ದೂರು ಬಂದಿಲ್ಲ ಎನ್ನುತ್ತಿದ್ದಾರೆ ಪೊಲೀಸರು. ಈ ಎಲ್ಲ ಕೃತ್ಯಗಳ ಹಿಂದೆ ಚಡ್ಡಿ ಗ್ಯಾಂಗ್ ಕೈವಾಡ ಇದೆಯಾ ಎಂಬ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಜಿಲ್ಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳು ಜನರ ನೆಮ್ಮದಿ ಕದಡಿರುವುದಂತೂ ಸತ್ಯ. ಘಟನೆಗಳ ಕಾರಣೀಕರ್ತರ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಜನರಿಗೆ ಮನವರಿಕೆ ಆಗುವವರೆಗೂ ಈ ಆತಂಕ ಮಾತ್ರ ಮುಂದುವರಿಯುತ್ತಲೇ ಇರುತ್ತದೆ.
ಕೆಲವೇ ದಿನಗಳಲ್ಲಿ 10 ಮಿಲ್‌ಗಳಲ್ಲಿ ಲಕ್ಷಾಂತರ ರೂ. ಕಳ್ಳತನ ನಡೆದಿದೆ. ಹೀಗಾಗಿ ನಮ್ಮ ಅಸೋಸಿಯೇಶನ್‌ನಿಂದ
ದೂರು ಸಲ್ಲಿಸಲಾಗಿದೆ. ಇಲ್ಲಿ ಸಿಕ್ಕಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ನೀಡಲಾಗಿದೆ. ವರ್ತಕರ ಸಭೆ ನಡೆಸಿದ ಎಸ್‌ಪಿ ಮಾಹಿತಿ ಸಂಗ್ರಹಿಸಿದ್ದಾರೆ. ಇಲ್ಲಿ ಸಿಕ್ಕ ವಿಡಿಯೋಗಳ ದೃಶ್ಯಗಳನ್ನು ಆಧರಿಸಿ ಕಳ್ಳರನ್ನು ಹಿಡಿಯಲು ಇಲಾಖೆ ಹೆಚ್ಚಿನ ಒತ್ತು ಕೊಡಬೇಕು. ಮರಂ ತಿಪ್ಪಣ್ಣ, ಕಾರ್ಯದರ್ಶಿ ರಾಯಚೂರು ರೈಸ್ ಮಿಲ್ಲರ್ ಅಸೋಸಿಯೇಶನ್
ಜಿಲ್ಲೆಯಲ್ಲಿ ನಡೆದ ಪ್ರಕರಣಗಳ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಈಶಾನ್ಯ, ಪಶ್ಚಿಮ, ಯರಗೇರಾ ಮತ್ತು ಮಾನ್ವಿ ಠಾಣೆ ಪಿಎಸ್‌ಐಗಳ ನೇತೃತ್ವದಲ್ಲಿ$ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ರೈಸ್ ಮಿಲ್‌ಗಳ ಕಳ್ಳತನ
ಮಾದರಿಯಲ್ಲಿಯೇ ಪಕ್ಕದ ಯಾದಗಿರಿ ಮತ್ತು ಕರ್ನೂಲ್ ಜಿಲ್ಲೆಯಲ್ಲೂ ನಡೆದಿವೆ. ಬಹುತೇಕ ಸಾಮ್ಯತೆ ಇರುವ ಕಾರಣ ಆ ಭಾಗದ ಪೊಲೀಸರ ಜತೆ ಸಮಾಲೋಚನೆ ಮಾಡಲಾಗಿದೆ. ಚಡ್ಡಿ ಗ್ಯಾಂಗ್ ವಿಡಿಯೋ ಇಲ್ಲಿಯದ್ದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕುರಿತು ವಿವರ ಪಡೆಯಲಾಗಿದೆ. ಗಣೇಶ ಚತುರ್ಥಿ, ಮೊಹರಂ, ಸೊ#ಧೀಟದ ವೇಳೆ ಹೆಚ್ಚುವರಿ ಪೊಲೀಸರನ್ನು ಕರ್ತವ್ಯಕ್ಕೆ ಪಡೆದ ಕಾರಣ ಸರಣಿಗಳ್ಳತನ ನಡೆದಿರುವ ಸಾಧ್ಯತೆ ಇದೆ. ಶೀಘ್ರದಲ್ಲೇ ನಮ್ಮ ತಂಡಗಳು ಪ್ರಕರಣಗಳನ್ನು ಭೇದಿಸಲಿವೆ. ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಯಚೂರು
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.