ಸಿಂಧನೂರು ಜಿಲ್ಲೆ ಹೋರಾಟಕ್ಕೆ ಗಟ್ಟಿ ಧ್ವನಿ

90 ಜಿಂದಾಲ್‌ ಏರ್‌ಪೋರ್ಟ್‌ನ ಮೂಲಕ ಹೊರ ಜಿಲ್ಲೆಯ ಸಂಪರ್ಕವೂ ಸುಲಭವಾಗುತ್ತದೆ.

Team Udayavani, Sep 21, 2021, 5:48 PM IST

ಸಿಂಧನೂರು ಜಿಲ್ಲೆ ಹೋರಾಟಕ್ಕೆ ಗಟ್ಟಿ ಧ್ವನಿ

ಸಿಂಧನೂರು: ಭತ್ತದ ನಾಡು, ವಾಣಿಜ್ಯ ನಗರಿ ಖ್ಯಾತೆಯ ಸಿಂಧನೂರು ಹೊಸ ಜಿಲ್ಲೆಯಾಗಬೇಕೆಂಬ ಬೇಡಿಕೆ ಬರೀ ಕೂಗಿನಲ್ಲಿ ಮಾತ್ರ ಇತ್ತು. ಇದೀಗ ಅದಕ್ಕೆ ಬೇಕಾದ ಪೂರಕ ವರದಿಗಳನ್ನು ಸಿದ್ಧಪಡಿಸುವ ಮೂಲಕ ಕಾರ್ಯಸಾಧುವೆಂಬ ಗಟ್ಟಿ ಬೇಡಿಕೆ ಮಂಡಿಸಲು ಹೋರಾಟ ಸಮಿತಿಗಳು ಸನ್ನದ್ಧಗೊಂಡಿವೆ. ಭೌಗೋಳಿಕವಾಗಿ ಒಂದು ಜಿಲ್ಲೆ ರಚಿಸ ಬೇಕಾದರೆ ಅದಕ್ಕೆ ಅಗತ್ಯ ಬೀಳುವ ಸಂಪನ್ಮೂಲಗಳು ಏನೇನು ಎಂಬ ವಿಚಾರದಲ್ಲಿ ಒಂದು ತಾತ್ವಿಕ ಪಟ್ಟಿ
ಬಹಿರಂಗಪಡಿಸಲಾಗಿದೆ.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದು ಜಿಲ್ಲೆಯಾಗಲು ಏನೇನು ಬೇಕು? ಅದಕ್ಕೆ ಪೂರಕವಾದ ವಾತಾವರಣ ಇದೆಯೇ? ಎಂಬ ಬಗ್ಗೆ ಗಂಭೀರವಾಗಿ ಚರ್ಚಿಸಿದಾಗ ಹೊರ ಬಿದ್ದ ಸಂಗತಿಗಳುಹಲವು ರೀತಿಯ ನಿರೀಕ್ಷೆ ಗರಿಗೆದರಲು ಆಸ್ಪದ ನೀಡಿವೆ.

ರಾಯಚೂರು-ಕೊಪ್ಪಳಕ್ಕೆ ಧಕ್ಕೆಯಿಲ್ಲ: ಅಖಂಡ ಜಿಲ್ಲೆಗಳನ್ನು ವಿಭಜಿಸುವಾಗ ವಿರೋಧಗಳು ಸಹಜವಾಗಿ ಬರಬಹುದು. ಅಖಂಡ ರಾಯಚೂರು ಜಿಲ್ಲೆಯೊಳಗಿಂದ ಸಿಂಧನೂರು ವಿಭಜನೆಗೊಂಡರೂ ಮೂಲ ಜಿಲ್ಲೆಗೆ ಧಕ್ಕೆಯಾಗಲ್ಲ. ಹಾಗೆ ಕೊಪ್ಪಳ ಜಿಲ್ಲೆಗೂ ಬೇಕಾದ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆಯಲ್ಲಿ ಕಡಿಮೆಯಾಗಲ್ಲ. ತಲಾ 7 ತಾಲೂಕು ಒಳಗೊಂಡ ಈ ಎರಡು ಜಿಲ್ಲೆಗಳಿಂದ ಬೇರ್ಪಟ್ಟ ತಾಲೂಕುಗಳಿಂದ ಸಿಂಧನೂರು ಜಿಲ್ಲೆಯನ್ನಾಗಿ ರೂಪಿಸಲು ಸಾಧ್ಯವಿದೆ.

ಈ ಎಲ್ಲ ಪ್ರದೇಶ ಒಳಗೊಂಡಂತೆ ಭೌಗೋಳಿಕ ವಿಸ್ತೀರ್ಣ 33 ಲಕ್ಷ ಚದರು ಕಿ.ಮೀ.ನಷ್ಟಿದೆ. ಅಂದಾಜು 10 ಸಾವಿರ ಚದರು ಕಿ.ಮೀ.ನಂತೆ ವಿಭಜನೆಯಾದರೂ ಸಿಂಧನೂರು ಹಾಗೂ ಉಳಿದ ಎರಡು ಜಿಲ್ಲೆಗೂ ಸೂಕ್ತ ಪ್ರದೇಶವಿರುತ್ತದೆ. ಜತೆಗೆ ರಾಯಚೂರು-ಕೊಪ್ಪಳ ಜಿಲ್ಲೆಗಳಲ್ಲಿ ತಲಾ 5 ತಾಲೂಕುಗಳಿರುತ್ತವೆ. ಹೀಗಾಗಿ ಸಿಂಧನೂರಿಗೆ ಸೇರ್ಪಡೆಯಾಗಬೇಕೆಂಬ ಬಯಕೆಯೊಂದಿಗೆ ಪ್ರಸ್ತಾಪಿಸಲಾದ ಕಾರಟಗಿ, ಮಸ್ಕಿ, ಲಿಂಗಸುಗೂರು, ಕನಕಗಿರಿ ತಾಲೂಕುಗಳಿಂದಲೂ ಈ ಬೇಡಿಕೆಗೆ ಬೆಂಬಲ ಗಳಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕಿದೆ.

ಬೇರೆ ಪೂರಕ ಅಂಶಗಳೇನು?: ಹೊಸ ಜಿಲ್ಲೆ ಬೇಡಿಕೆ ಸಲ್ಲಿಸಲು ರೂಪಿಸುತ್ತಿರುವ ನೀಲನಕ್ಷೆ ಪ್ರಕಾರ ಸಿಂಧನೂರು ಜಿಲ್ಲೆಯಾಗಲು 4 ತಾಲೂಕುಗಳ ಸೇರ್ಪಡೆಯಿಂದ ಒಟ್ಟು ಜನಸಂಖ್ಯೆ ಪ್ರಮಾಣ 10 ಲಕ್ಷಕ್ಕೆ ಏರಿಕೆಯಾಗುತ್ತದೆ. 608 ಗ್ರಾಮಗಳು ವ್ಯಾಪ್ತಿಗೆ ಒಳಪಡುತ್ತವೆ. 98 ಗ್ರಾಪಂಗಳು ಬರುತ್ತವೆ. 23 ಹೋಬಳಿ, 161 ಗ್ರಾಮಲೆಕ್ಕಿಗರ ವೃತ್ತಗಳಿರುತ್ತವೆ. 1 ನಗರಸಭೆ, 4 ಪಟ್ಟಣ ಪಂಚಾಯಿತಿಗಳಿರುತ್ತವೆ. 622 ಪ್ರಾಥಮಿಕ ಶಾಲೆಗಳು, 228 ಪ್ರೌಢಶಾಲೆಗಳು, 87
ಪದವಿ ಪೂರ್ವ ಕಾಲೇಜುಗಳು, 7 ಸರಕಾರಿ ಪದವಿ ಕಾಲೇಜುಗಳು,95 ಸರಕಾರಿ ಆಸ್ಪತ್ರೆಗಳನ್ನು ಹೊಸ ಜಿಲ್ಲೆ ವ್ಯಾಪ್ತಿಗೆ ಸೇರಿಸಬಹುದು. 444.67 ಕಿ.ಮೀ. ರಾಜ್ಯ ಹೆದ್ದಾರಿ,417ಕಿ.ಮೀ. ಜಿಲ್ಲಾ ಮುಖ್ಯಹೆದ್ದಾರಿ,92.50 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಮಹೆಬೂಬ ನಗರ-ಗಿಣಿಗೇರಾ ರೈಲ್ವೆ ಸೌಲಭ್ಯವಿರುತ್ತದೆ. 90 ಜಿಂದಾಲ್‌ ಏರ್‌ಪೋರ್ಟ್‌ನ ಮೂಲಕ ಹೊರ ಜಿಲ್ಲೆಯ ಸಂಪರ್ಕವೂ ಸುಲಭವಾಗುತ್ತದೆ.

ಅಕ್ಕಪಕ್ಕದವರ ಮನವೊಲಿಸುವ ತೀರ್ಮಾನ
ತಾಲೂಕಿನ ಗಡಿಗ್ರಾಮಗಳು ಜಿಲ್ಲಾಕೇಂದ್ರವನ್ನು ಸಂಪರ್ಕಿಸಲು 150 ಕಿ.ಮೀ.ನಷ್ಟುದಾರಿ ಕ್ರಮಿಸಬೇಕಿದೆ. ತಾಲೂಕು ಕೇಂದ್ರಗಳಿಂದಲೂಹೋಗಬೇಕಾದರೆ 90 ಕಿ.ಮೀ. ಅಂತರವಿದೆ. ಸಿಂಧನೂರುಜಿಲ್ಲೆಯಾಗಿ ರಚನೆಯಾದರೆಅಕ್ಕಪಕ್ಕದ ತಾಲೂಕುಗಳಿಗೆ 50 ಕಿ.ಮೀ. ಅಂತರದಲ್ಲಿ ಜಿಲ್ಲಾ ಕೇಂದ್ರ ಲಭ್ಯವಾಗಲಿದೆ. ಆಡಳಿತಾತ್ಮಕವಾಗಿ ತೀರಾ ಅನುಕೂಲಸಾಧ್ಯವಿದೆ.ಈ ಅಂಶಗಳನ್ನು ಮುಂದಿಟ್ಟುಕೊಂಡು ಅಕ್ಕಪಕ್ಕದ ತಾಲೂಕಿನವರನ್ನು ಮನವೊಲಿಸಲಿಕ್ಕೆ ಹೋರಾಟ ಸಮಿತಿ ತಯಾರಿ ನಡೆಸಿದೆ.

ಸಮಿತಿಗೆ ಪಕ್ಷಾತೀತ ವ್ಯಕ್ತಿಗಳ ಹುಡುಕಾಟ
ಯಾವುದೇ ಪಕ್ಷದ ಒಬ್ಬ ಮುಖಂಡರನ್ನು ಮುಂದಾಳತ್ವಕ್ಕೆ ತೆಗೆದುಕೊಂಡು ಹೋದರೆ ಹೋರಾಟದಲ್ಲಿ ಅಪಸ್ವರ ಬರುತ್ತವೆಂಬ ಬಗ್ಗೆಯೂ ಚರ್ಚಿಸಲಾಗಿದೆ. ಪಕ್ಷಾತೀತ ವ್ಯಕ್ತಿಗಳನ್ನು ಹೊಸ ಜಿಲ್ಲೆ ಹೋರಾಟ ಸಮಿತಿಗೆ ನೇಮಿಸಿಕೊಳ್ಳಬೇಕೆಂಬ ಸಲಹೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಹುಡುಕಾಟ ಆರಂಭವಾಗಿವೆ.

ಈವತ್ತೂ ಹೋರಾಟ ಆರಂಭವಾದರೆ, ಮುಂದೊಂದು ದಿನಕಾಲ ಪಕ್ವಾ ಆದಾಗ ಬೇಡಿಕೆ ಈಡೇರಬಹುದು. ಎಲ್ಲರೂ ಕೂಡ ಒಮ್ಮತದಿಂದ, ಎಲ್ಲರನ್ನೊಳಗೊಂಡು ಹೋರಾಟ ಸಮಿತಿಯವರು ಮುನ್ನಡೆಯಬೇಕಿದೆ.
ಹಂಪನಗೌಡ ಬಾದರ್ಲಿ,
ಮಾಜಿ ಶಾಸಕರು, ಸಿಂಧನೂರು.

ಯಮನಪ್ಪ ಪವಾರ

ಟಾಪ್ ನ್ಯೂಸ್

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.