Sindhanur ಬಿಡಾಡಿ ದನಗಳನ್ನು ರಕ್ಷಿಸಿದ ಕಮಿಷನರ್: ಬೆದರಿಕೆ ಹಾಕಿದ ಕಿಡಿಗೇಡಿಗಳು
Team Udayavani, Sep 26, 2023, 11:55 PM IST
ಸಿಂಧನೂರು: ಬಿಡಾಡಿ ದನಗಳನ್ನು ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಮುಂದಾದ ನಗರಸಭೆ ಪೌರಾಯುಕ್ತರಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿದ ಘಟನೆ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ನಗರದಲ್ಲಿ ನಡೆದಿದೆ.
ಪೌರಾಯುಕ್ತ ಮಂಜುನಾಥ ಗುಂಡೂರು ಅವರು ತಮ್ಮ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಬಿಡಾಡಿ ದನಗಳ ರಕ್ಷಣೆಗೆ ಮುಂದಾದಾಗ ಕೆಲ ಕಿಡಿಗೇಡಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ಒಂದು ಹಂತದಲ್ಲಿ ತಂಟೆಗೆ ಬರಬೇಡ ಎಂದು ಪೌರಾಯುಕ್ತರಿಗೆ ಬೆದರಿಕೆ ಶೈಲಿಯಲ್ಲಿ ಮಾತನಾಡಿದ್ದಾರೆ. ಮೊದಲೇ ಪೊಲೀಸ್ ಹಾಗೂ ಸಿಬ್ಬಂದಿ ತಂಡವನ್ನು ಕಟ್ಟಿಕೊಂಡು ಹೋಗಿದ್ದ ಪೌರಾಯುಕ್ತರು, ಹತ್ತಾರು ಬೀದಿ ದನಗಳನ್ನು ತಮ್ಮದೇ ವಾಹನಗಳಿಗೆ ಏರಿಸಿ, ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಡಾಡಿ ದನಗಳ ವಿಷಯದಲ್ಲಿ ನೋಟಿಸ್ ಕೊಟ್ಟರೂ ಬಾರದ ವ್ಯಕ್ತಿಗಳು, ಕಾರ್ಯಾಚರಣೆ ಸಂದರ್ಭ ಕಮಿಷನರ್ ಗೆ ಬೆದರಿಕೆ ಹಾಕಲು ಪ್ರಯತ್ನಿಸಿದ್ದು, ಅಚ್ಚರಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.