![Chikkamagaluru: ಜಲಪಾತದಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ](https://www.udayavani.com/wp-content/uploads/2025/02/jalapata-415x263.jpg)
![Chikkamagaluru: ಜಲಪಾತದಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ](https://www.udayavani.com/wp-content/uploads/2025/02/jalapata-415x263.jpg)
Team Udayavani, Jan 30, 2025, 2:18 PM IST
ಸಿಂಧನೂರು: ಇಲ್ಲಿನ ಸರಕಾರಿ ಪದವಿ ಮಹಾವಿದ್ಯಾಲಯದ ಎಂಎಸ್ಸಿ ವಿದ್ಯಾರ್ಥಿನಿಯನ್ನು ಖಾಸಗಿ ಲೇಔಟ್ ಗೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಜ.30ರ ಗುರವಾರ ಬೆಳಗ್ಗೆ ನಡೆದಿದೆ.
ಲಿಂಗಸೂಗೂರು ನಿವಾಸಿ ಅಬ್ದುಲ್ ವಾಹೀದ್ ಅವರ ಪುತ್ರಿ ಶಿಫಾ (22) ಕೊಲೆಗೀಡಾದ ವಿದ್ಯಾರ್ಥಿನಿ.
ಎಂದಿನಂತೆ ವಿದ್ಯಾರ್ಥಿನಿ ಶಿಫಾ ಗುರುವಾರ (ಜ.30) ಬೆಳಗ್ಗೆ ಲಿಂಗಸೂಗೂರಿನಿಂದ ಸಿಂಧನೂರಿನ ಕಾಲೇಜಿಗೆ ಬರುತ್ತಿದ್ದ ಸಂದರ್ಭ ಲಿಂಗಸೂಗೂರಿನಿಂದ ಬೈಕ್ ನಲ್ಲಿ ಆಗಮಿದ್ದ ಪರಿಚಿತ ಯುವಕ, ಮಾತನಾಡುವುದಿದೆ ಬಾ ಎಂದು ಖಾಸಗಿ ಲೇಔಟ್ ಗೆ ಕರೆದುಕೊಂಡು ಹೋಗಿದ್ದಾನೆ. ದಿಢೀರ್ ಚಾಕು ತೆಗೆದು ಕತ್ತು ಕೊಯ್ದಿದ್ದಾನೆ.
ಘಟನೆಗೆ ಸಂಬಂಧಿಸಿ ಯುವಕನೊಬ್ಬನನ್ನು ಲಿಂಗಸೂಗೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್. ತಳವಾರ, ಸಿಪಿಐ ವೀರಾರೆಡ್ಟಿ, ಪಿಎಸ್ ಐಗಳಾದ ಯರಿಯಪ್ಪ, ಸುಜಾತ, ಬಸವರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.
Chikkamagaluru: ಜಲಪಾತದಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ
Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ
ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು
ಭದ್ರಾವತಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ
Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್ ಹೇಳಿಲ್ಲ: ಸಚಿವ ಕೆ.ಎಚ್. ಮುನಿಯಪ್ಪ
You seem to have an Ad Blocker on.
To continue reading, please turn it off or whitelist Udayavani.