ಸಿಂಧನೂರು ಕೆರೆ ಒಡ್ಡು ಕುಸಿತ; ಆತಂಕ
Team Udayavani, Feb 11, 2019, 10:10 AM IST
ಗೊರೇಬಾಳ: ಸಿಂಧನೂರು ನಗರಕ್ಕೆ ನೀರು ಸರಬರಾಜು ಮಾಡುವ ಸಿಂಧನೂರು ಕೆರೆಯ ದಕ್ಷಿಣ ಭಾಗದ ಒಳಮೈಯಲ್ಲಿ ಬಿರುಕು ಕಾಣಿಸಿಕೊಂಡು ಸುಮಾರು 60ಕ್ಕೂ ಹೆಚ್ಚು ಅಡಿ ಒಡ್ಡು ಕುಸಿದಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸಿಂಧನೂರು ಕೆರೆ ಗುರುವಾರ ರಾತ್ರಿಯೇ ಬಿರುಕು ಬಿಟ್ಟಿದೆ. ಶುಕ್ರವಾರ ಬೆಳಗಿನ ಜಾವ ಸುಮಾರು 60 ಅಡಿ ಅಗಲ ಒಡ್ಡು ಕುಸಿದಿದೆ. ಬೆಳಗ್ಗೆ ವಾಯುವಿಹಾರಕ್ಕೆ ಹೋದ ಸಾರ್ವಜನಿಕರು ನಗರಸಭೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಿಂಧನೂರು ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ನಗರಸಭೆ ಜೆಡಿಎಸ್ ಸದಸ್ಯರು ಕೂಡ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಕೆರೆಯ ನೀರನ್ನು ಸಿಂಧನೂರು ನಗರದ ಎಲ್ಲ ಜಲಸಂಗ್ರಹಾಗಾರಗಳಿಗೆ ಪೂರೈಸಿ ಅಲ್ಲಿಂದ ನಲ್ಲಿಗಳ ಮೂಲಕ ವಾರಕ್ಕೊಮ್ಮೆ ನಗರದ ಜನತೆ ನೀರು ಪೂರೈಸಲಾಗುತ್ತಿದೆ. ಕಳೆದ ತಿಂಗಳವಷ್ಟೇ ತುರ್ವಿಹಾಳ ಹತ್ತಿರದ ಹೊಸ ಕುಡಿಯುವ ನೀರಿನ ಕೆರೆಯಲ್ಲೂ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೇ ನಗರದ ಕುಡಿಯುವ ನೀರಿನ ಕೆರೆಯ ಒಡ್ಡಲ್ಲೂ ಬಿರುಕು ಕಾಣಿಸಿಕೊಂಡು ಕುಸಿದಿದ್ದು ಆತಂಕ ಉಂಟು ಮಾಡಿದೆ. ಬೇಸಿಗೆಯಲ್ಲಿ ಸಿಂಧನೂರಿಗೆ ಕುಡಿಯುವ ನೀರು ಪೂರೈಸುವುದು ಸುಲಭದ ಮಾತಲ್ಲ. ಈಗ ಲಭ್ಯವಿರುವ ದೊಡ್ಡ ಮತ್ತು ಸಣ್ಣ ಕೆರೆಯ ನೀರನ್ನು ಜೂನ್‌ವರೆಗೆ ವಾರಕ್ಕೊಮ್ಮೆ ಆಯಾ ವಾರ್ಡ್‌ಗಳಿಗೆ ಪೂರೈಸಿದರೂ ಕೊನೆಯ ಒಂದು ತಿಂಗಳು ನೀರಿನ ಸಮಸ್ಯೆ ಹೆಚ್ಚುತ್ತದೆ. ಈಗ ಜೀವಜಲವಾಗಿರುವ ಕೆರೆಯ ಒಡ್ಡು ಕುಸಿದಿರುವುದು ಮುಂಬರುವ ದಿನಗಳಲ್ಲಿ ಕೆರೆ ಒಡೆದು ನೀರು ಪೋಲಾಗಿ ಸಮಸ್ಯೆ ಉಂಟಾಗಬಹುದೆಂಬ ಆತಂಕ ಸಿಂಧನೂರು ನಿವಾಸಿಗಳನ್ನು ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
IFFI: ಪಾಪ್ ಸಂಗೀತಗಾರ ರಾಬಿ ವಿಲಿಯಮ್ಸ್ ಬೆಟರ್ ಮ್ಯಾನ್ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.