ವಾಹನದಲ್ಲಿದ್ದ ಹಣ ಕಳವು ಪ್ರಕರಣ: ಘಟನೆ ನಡೆದ ನಲ್ವತ್ತೆಂಟು ಗಂಟೆಯಲ್ಲೇ ಆರೋಪಿಗಳು ಅರೆಸ್ಟ್
Team Udayavani, Aug 22, 2022, 12:52 PM IST
ರಾಯಚೂರು : ವಾಹನದಲ್ಲಿಟ್ಟಿದ್ದ 46 ಲಕ್ಷಗಳನ್ನು ಲಪಟಾಯಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಸಿಂಧನೂರು ಪೊಲೀಸರು 48 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನದ ಚಾಲಕ ಮತ್ತು ಆತನ ಸಹೋದರ ಸ್ನೇಹಿತನ ಜೊತೆ ಸೇರಿ ಈ ಕೃತ್ಯ ಎಸಗಿದ್ದು, ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಘಟನೆ ಬೆನ್ನತ್ತಿದ ಪೊಲೀಸರು ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಾಹನದ ಚಾಲಕ ಸೈಯದ್ ಜುಬೇರ್ ಆತನ ಸಹೋದರ ಸೈಯದ್ ಖಲಂದರ್ , ಸ್ನೇಹಿತ ಗಣೇಶನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿಂಧನೂರು ನಗರದ ಕನಕದಾಸ ವೃತ್ತದಲ್ಲಿ ಕಳೆದ 18ರ ರಾತ್ರಿ 8.30 ಕ್ಕೆ ಗಣೇಶ್ ಬೀಡಿ ಕಂಪನಿಯ ವಾಹನದ ಚಾಲಕ ಮತ್ತು ಸೇಲ್ಸ್ ಮ್ಯಾನ್ ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲಿ ಬೀಡಿ ಮಾರಾಟ ಮಾಡಿದ ಹಣವನ್ನು ವಾಹನದಲ್ಲಿಟ್ಟು ಊಟಕ್ಕೆ ಹೋಗಿದ್ದರು.
ಮರಳಿ ಬರುವಷ್ಟರಲ್ಲಿ ಹಣವನ್ನು ದುಷ್ಕರ್ಮಿಗಳು ಕಳುವು ಮಾಡಿ ಹೋಗಿದ್ದರು. ಪ್ರಕರಣದ ಬೇಧಿಸಲು ವಿಶೇಷ ತಂಡ ರಚಿಸಲಾಗಿತ್ತು.
ಇದನ್ನೂ ಓದಿ : ಕುಂದಾಪುರ: ಸೀಮಂತ ಕಾರ್ಯಕ್ರಮಕ್ಕಾಗಿ ಬಂದ ಪತ್ನಿಯನ್ನು ಕೊಲೆಗೈದು,ಆತ್ಮಹತ್ಯೆ ಮಾಡಿಕೊಂಡ ಪತಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.