ವಿಕಲಚೇತನರಿಗೆ ಪ್ರೋತ್ಸಾಹ ನೀಡಿ
ತರಬೇತಿ-ಉದ್ಯೋಗ ಆಯ್ಕೆ ಶಿಬಿರದಲ್ಲಿ ಶಾಸಕ ನಾಡಗೌಡ ಸಲಹೆ
Team Udayavani, Jan 12, 2020, 6:35 PM IST
ಸಿಂಧನೂರು: ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಇಂತಹ ಸಾಧಕರ ಬಗ್ಗೆ ಅನುಕಂಪ ತೋರುವುದಕ್ಕಿಂತ ಪ್ರೋತ್ಸಾಹಿಸಬೇಕು. ಸಾಧಕರು ಇತರೆ ವಿಕಲಚೇತನರಿಗೆ ಮಾದರಿ ಆಗಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ದಿ ಅಸೋಸಿಯೋಷನ್ ಆಫ್ ಪೀಪಲ್ಸ್ ವಿತ್ ಡಿಸ್ ಎಬಿಲಿಟಿ ಬೆಂಗಳೂರು, ವಿಕಲಚೇತನರು, ಹಿರಿಯ ನಾಗರಿಕ ಸಬಲೀಕರಣ ಇಲಾಖೆ ರಾಯಚೂರು, ತಾಲೂಕು ಪಂಚಾಯಿತಿ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ತಾಪಂ ಸಭಾಂಗಣದಲ್ಲಿ ನಡೆದ 18ರಿಂದ 35 ವರ್ಷದ ಒಳಗಿನ ನಿರುದ್ಯೋಗಿ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲ ಸರಿಯಾಗಿ ಇರುವವರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ
ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಲು ವಿವಿಧ ವಲಯಗಳಲ್ಲಿ ಮತ್ತು ಸ್ವಉದ್ಯೋಗದಲ್ಲಿ ತೊಡಗಿದ್ದಾರೆ. ಅನೇಕರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇಂತಹ ವಿಕಲಚೇತನರಿಗೆ ಪ್ರೋತ್ಸಾಹ, ಮಾರ್ಗದರ್ಶನ ಅಗತ್ಯವಾಗಿದೆ ಎಂದು ಹೇಳಿದರು.
ನಿರುದ್ಯೋಗಿ ವಿಕಲಚೇತನರಿಗೆ ಉದ್ಯೋಗ ತರಬೇತಿ ಅವಶ್ಯಕವಾಗಿದೆ. ತರಬೇತಿ ಶಿಬಿರಗಳಲ್ಲಿ
ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು. ತರಬೇತಿದಾರರು ಸಮರ್ಪಕ ತರಬೇತಿ ಮತ್ತು
ಮಾರ್ಗದರ್ಶನ ನೀಡಬೇಕು ಎಂದರು. ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ದೇವೇಂದ್ರಗೌಡ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಯೋಗಿತಾ ಬಾನು, ಮಹ್ಮದ್ ಹುಸೇನಸಾಬ್, ನಾಗಪ್ಪ ಸುಕಾಲಪೇಟೆ, ಬಸವರಾಜ ಸಾಸಲಮರಿ, ಬಸಪ್ಪ ಹೊಸಳ್ಳಿ, ಶಂಕರಗೌಡ ತುರುವಿಹಾಳ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.