![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 1, 2020, 4:28 PM IST
ಸಿರವಾರ: ನವಲಕಲ್ಲು ಗ್ರಾಪಂ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಿಸಲಾಯಿತು
ಸಿರವಾರ: ಪಟ್ಟಣದ ವಿವಿಧೆಡೆ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್ ಕಚೇರಿಯಲ್ಲಿ ಭಗೀರಥ ಭಾವಚಿತ್ರಕ್ಕೆ ಉಪ ತಹಶೀಲ್ದಾರ್ ಸಿದ್ದನಗೌಡ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಕಂದಾಯ ಅಧಿಕಾರಿ ಶ್ರೀನಾಥ, ಸಿಬ್ಬಂದಿ ವೀರೇಶ, ಶ್ವೇತಾ, ಅಮಿತ್, ದೇವರಾಜ ಇದ್ದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಗೀರಥ ಭಾವಚಿತ್ರಕ್ಕೆ ಮುಖ್ಯಾ ಧಿಕಾರಿ ಕೆ.ಮುನಿಸ್ವಾಮಿ ಮಾಲಾರ್ಪಣೆ ಮಾಡಿದರು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.
ನವಲಕಲ್ಲು: ನವಲಕಲ್ಲು ಗ್ರಾಪಂ ಕಚೇರಿಯಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ಯಲ್ಲನಗೌಡ ಮುರ್ಕಿಗುಡ್ಡ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಮುಖಂಡ ಬಿ. ಶಿವಾನಂದ, ಪಂಚಾಯಿತಿ ಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ, ಅಮೀರಲಿ, ಅಮರೇಶ ಸಾಗರ, ಮಂಜುನಾಥ, ಬಸವರಾಜ ಜಿನ್ನದ, ಗಂಗಾಧರ ಸಾಗರ ಇದ್ದರು.
You seem to have an Ad Blocker on.
To continue reading, please turn it off or whitelist Udayavani.