ವಿಷಪೂರಿತ ನಾಗರಹಾವಿಗೆ ಚಿಕಿತ್ಸೆ ನೀಡಿ ಗಮನ ಸೆಳೆದ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ
Team Udayavani, Jul 19, 2022, 6:34 PM IST
ಮಾನ್ವಿ: ಪಟ್ಟಣದ ಪಶುಚಿಕಿತ್ಸಾಲಯದಲ್ಲಿ ಇಂದು ಬೆಳಗ್ಗೆ ಗಾಯಗೊಂಡಿದ್ದ ನಾಗರ ಹಾವಿನ ಕಿತ್ತು ಹೋಗಿದ್ದ ಚರ್ಮಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡುವ ಮೂಲಕ ತಾಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜು ಕಂಬಳೆ ಗಮನ ಸೆಳೆದಿದ್ದಾರೆ.
ವಿಷಪೂರಿತ ಹಾವಿಗೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಿದ್ದಾರೆ. ಹಾವಿನ ತಲೆಯನ್ನು ನಳಿಕೆಯಲ್ಲಿ ಸೇರಿಸುವ ಮೂಲಕ ಚಿಕಿತ್ಸೆ ವೇಳೆ ಆಸ್ಪತ್ರೆಯ ಸಿಬ್ಬಂದಿಗೆ ಕಚ್ಚದಂತೆ ಉರಗ ರಕ್ಷಕ ರಮೇಶ ಜಾಗ್ರತೆ ವಹಿಸಿದ್ದರು. ನಾಗರ ಹಾವು ತಲೆ ಭಾಗದ ಹತ್ತಿರ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಮೂಲಕ ಹೊಲಿಗೆ ಹಾಕಿ ಪ್ರಥಮ ಚಿಕಿತ್ಸೆ ನೀಡಲಾಯಿತು.
ಪಟ್ಟಣದಲ್ಲಿನ ಹಾವುಗಳ ಸಂರಕ್ಷಕ ರಮೇಶ ಅವರು ಪಟ್ಟಣದ ಕರಡಿಗುಡ್ಡ ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಸಿಲುಕಿ ಗಾಯಗೊಂಡಿರುವ ಹಾವಿನ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಹಾವನ್ನು ರಕ್ಷಿಸಲು ವೈದ್ಯರ ಬಳಿ ತಂದಿದ್ದಾರೆ. ಹಾವುಗಳ ಸಂರಕ್ಷಕ ರಮೇಶ ಮಾತನಾಡಿ, ಗಾಯಗೊಂಡಿರುವ ಹಾವಿಗೆ ಚಿಕಿತ್ಸೆ ನೀಡಲಾಗಿದ್ದು 10 ದಿನ ಮನೆಯಲ್ಲಿ ಹಾವುಗಳಿಗಾಗಿ ಇರುವ ಗೂಡಿನಲ್ಲಿ ಹಾರೈಕೆ ಮಾಡಿ ಸಂಪೂರ್ಣ ಗುಣ ಮುಖವಾದ ನಂತರ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹಾವನ್ನು ಮರಳಿ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಚಿಕ್ಕೋಡಿಯ ಯೋಧ ಸಾವು : ಗ್ರಾಮದಲ್ಲಿ ನಿರವಮೌನ, ನಾಳೆ ಅಂತ್ಯಕ್ರಿಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.