ಸೈನಿಕನ ತಾಯಿ ಕೊಲೆ ಪ್ರಕರಣ; ಆರೋಪಿ ಶರಣಪ್ಪಗೌಡ ಬಂಧನ
Team Udayavani, Mar 24, 2022, 5:53 PM IST
ಹಟ್ಟಿಚಿನ್ನದಗಣಿ: ನಿಲೋಗಲ್ ಗ್ರಾಮದಲ್ಲಿನ ಸೈನಿಕನ ತಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಟ್ಟಿ ಠಾಣೆ ಸಿಪಿಐ ಹಾಗೂ ಸಿಬ್ಬಂದಿ ಘಟನೆ ನಡೆದು ತಿಂಗಳ ನಂತರ ಪ್ರಮುಖ ಆರೋಪಿ ಶರಣಪ್ಪಗೌಡನನ್ನು ಬಂಧಿಸಿದ್ದಾರೆ.
ಫೆ.14ರಂದು ನಿಲೋಗಲ್‌ನಲ್ಲಿ ಮನೆ ಬಚ್ಚಲು ನೀರು ಜಮೀನಿನಲ್ಲಿ ಹರಿಯುವ ಕುರಿತು ಸೈನಿಕ ಅಮರೇಶನ ಮೇಲೆ ಶರಣಪ್ಪಗೌಡ ಹಾಗೂ ಬೆಂಬಲಿಗರ ಮಧ್ಯೆ ಜಗಳ ಉಂಟಾಗಿತ್ತು. ಕೊಲೆ ಪ್ರಮುಖ ಆರೋಪಿ ಶರಣಪ್ಪಗೌಡ ಹಾಗೂ ಬೆಂಬಲಿಗರು ಮನೆಗೆ ನುಗ್ಗಿ ತಾಯಿ ಈರಮ್ಮಳನ್ನು ತಳ್ಳಿ ಹೊಡೆದು ಕೊಲೆ ಮಾಡಿದ್ದಾರೆಂದು 18 ಜನರ ವಿರುದ್ಧ ಯೋಧ ಅಮರೇಶ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕೃತ್ಯ ಖಂಡಿಸಿ ಮೃತಳ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶರಣಪ್ಪಗೌಡನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಕೊಲೆ ಆರೋಪಿಗಳನ್ನು ಬಂಧಿಸಬೇಕೆಂದು ನಿವೃತ್ತ ಸೈನಿಕ ಸಂಘದವರು ಹಾಗೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಐಕ್ಯ ಹೋರಾಟ ವೇದಿಕೆ ವತಿಯಿಂದಲೂ ಪ್ರತಿಭಟನೆ ನಡೆಸಿ ಪ್ರಮುಖ ಆರೋಪಿ ಶರಣಪ್ಪಗೌಡನ ಬಂಧನಕ್ಕೆ ಒತ್ತಾಯಿಸಿದ್ದರು.
ಘಟನೆ ನಡೆದು ತಿಂಗಳು ಗತಿಸಿದ ಮೇಲೆ ಕೊಲೆ ಪ್ರಮುಖ ಆರೋಪಿ ಶರಣಪ್ಪಗೌಡ, ಬಸವರಾಜ ಬೆಂಚಮಟ್ಟಿ, ಮತ್ತಪ್ಪ ಬಾರಿಕೇರ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.