ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Team Udayavani, Aug 26, 2018, 6:05 AM IST
ರಾಯಚೂರು: ಯತಿಕುಲ ತಿಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ನಿಮಿತ್ತ ಸಪ್ತರಾತ್ರೋತ್ಸವಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ದೊರಕಿತು.
ಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮೊದಲ ದಿನ ಪ್ರಾರ್ಥನೋತ್ಸವ, ಪ್ರವಚನ, ದಾಸವಾಣಿ, ಋಗ್ವೇದ ನಿತ್ಯನೂತನ ಉಪಕರ್ಮ, ನೃತ್ಯರೂಪಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಬೆಳಗ್ಗೆ ನೈರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಮತ್ತು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಸಲಾಯಿತು. ನಂತರ, ಪೀಠಾಧಿ ಪತಿಗಳು ನೂತನವಾಗಿ ನಿರ್ಮಿಸಿದ ದಶಾವತಾರ ಮಂಟಪ (ವಸಂತ ಶಿಲಾಮಂಟಪ)ದಲ್ಲಿ ಮೂಲ ರಘುಪತಿ ವೇದವಾಸ್ಯರ ಪೂಜೆ ನೆರವೇರಿಸುವ ಮೂಲಕ ಶಿಲಾಮಂಟಪವನ್ನು ರಾಯರ ಸೇವೆಗೆ ಸಮರ್ಪಿಸಿದರು.
ಮಠದ ಪ್ರವಚನ ಮಂದಿರದಲ್ಲಿ ಬೆಂಗಳೂರಿನ ವಿದ್ವಾನ್ ಡಿ.ಧನಂಜಯಾಚಾರ್ಯ ಮತ್ತು ಹೈದರಾಬಾದ್‌ನ ವಿದ್ವಾನ್ ಬಿ.ಇ.ನಾಗೇಂದ್ರ ಪ್ರಸಾದಾಚಾರ್ಯರಿಂದ ಪ್ರಾತಃ ಸಂಕಲ್ಪ ಗದ್ಯ, ಮಹಾಭಾರತ ತಾತ್ಪರ್ಯ ನಿರ್ಣಯ ಭಾವಸಂಗ್ರಹ ಎಂಬ ವಿಷಯದ ಮೇಲೆ ಪ್ರವಚನ ನಡೆಯಿತು. ಬಳಿಕ ಮಠದ ಪೂಜಾ ಮಂದಿರದಲ್ಲಿ ಹುಬ್ಬಳ್ಳಿಯ ವಿದ್ವಾನ್ ಶ್ರೀಹರಿ ಆಚಾರ್ಯ ವಲ್ವೇಕರ್ ಅವರಿಂದ ಭಾಗವತ ಸಪ್ತಾಹ ಮತ್ತು ಋಗ್ವೇದ ನಿತ್ಯನೂತನ ಉಪಕರ್ಮ ನಡೆಯಿತು.
ಸಂಜೆ ಮಠದ ಮುಂಭಾಗದ ಆವರಣದಲ್ಲಿ ಪೀಠಾಧಿ ಪತಿಗಳು ಧ್ವಜಾರೋಹಣ ನೆರವೇರಿಸಿದರು. ಬಳಿಕ, ಅಶ್ವಪೂಜೆ, ಗೋಪೂಜೆ, ಲಕ್ಷಿ ¾à ಹಾಗೂ ಧಾನ್ಯ, ತರಕಾರಿ, ಹಣ್ಣು ಪೂಜೆಗಳನ್ನು ನೆರವೇರಿಸಿದರು. ನಂತರ, ಪ್ರವಚನ ಮಂಟಪದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಪೂಜ್ಯರು ಅನುಗ್ರಹ ಸಂದೇಶ ನೀಡಿದರು.
ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಯಾವುದೇ ಒಂದು ಪ್ರಾಂತ, ಸಮುದಾಯಕ್ಕೆ ಸೀಮಿತವಾಗಿಲ್ಲ. ರಾಯರು ಇಡೀ ವಿಶ್ವಕ್ಕೆ ಗುರುಗಳಿದ್ದಂತೆ. ಇಂತಹ ಅಪಾರ ಮಹಿಮೆಯುಳ್ಳ ಗುರುಗಳ ಆರಾಧನೆಯನ್ನು ಇಡೀ ವಿಶ್ವವೇ ದೊಡ್ಡ ಉತ್ಸವವಾಗಿ ಆಚರಿಸುತ್ತಿದೆ. ಮಠ ಸೇರಿದಂತೆ ದೇಶ, ವಿದೇಶಗಳಲ್ಲಿರುವ ರಾಯರ ಶಾಖಾ ಮಠಗಳು, ಪ್ರಾರ್ಥನಾ ಮಂದಿರಗಳಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಆರಾಧನೆಯನ್ನು ಆಚರಿಸುತ್ತಿದ್ದಾರೆ ಎಂದರು.
ಬಳಿಕ, ನಡೆದ ಪ್ರಾರ್ಥನೋತ್ಸವದಲ್ಲಿ ಮೀನಾಕ್ಷಿ ಸೋಮಸುಂದರಂ ಅವರಿಂದ ವೀಣಾವಾದನ, ಚೆನ್ನೈನ ಸಾಯಿ ಗಣೇಶ ಕಲಾಲಯ ಅವರಿಂದ ಭರತನಾಟ್ಯ, ಟಿಟಿಡಿ ತಿರುಪತಿಯ ಅನ್ನಮಾಚಾರ್ಯ ಪ್ರಾಜೆಕ್ಟ್‌ನ ವಿದ್ವಾನ್ ಸರಸ್ವತಿ ಪ್ರಸಾದ ಅವರಿಂದ ಅನ್ನಮಾಚಾರ್ಯರ ಕೀರ್ತನೆ ನಡೆಯಿತು.
ರಜತ ಬಾಗಿಲು ಲೋಕಾರ್ಪಣೆ
ಮಠದ ಮುಖ್ಯದ್ವಾರದ ಬೃಹತ್ ಬಾಗಿಲುಗಳಿಗೆ ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ರಜತದ ಹೊದಿಕೆಗಳನ್ನು ಆರಾಧನೆಯ ಮೊದಲ ದಿನ ಮುಕ್ತಗೊಳಿಸಲಾಯಿತು. ಸುಬುಧೇಂದ್ರ ತೀರ್ಥರು ಪೂಜೆ ಸಲ್ಲಿಸುವ ಮೂಲಕ ದ್ವಾರಗಳನ್ನು ಲೋಕಾರ್ಪಣೆ ಮಾಡಿದರು. 350 ಕೆಜಿ ರಜತದಿಂದ ಹೊದಿಕೆ ಮಾಡಲಾಗಿದೆ. ಈ ಬಾಗಿಲುಗಳನ್ನು ಬೆಂಗಳೂರು ಮೂಲದ ಎಚ್.ಡಿ.ರಂಗನಗೌಡ ಎನ್ನುವ ಭಕ್ತರು ಮಾಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.